ರಾಮಭಕ್ತ ಮಾತ್ರ ದೆಹಲಿ ಸಿಂಹಾಸನ ಆಳುತ್ತಾನೆ; ಗೋರಖ್‌ಪುರದಲ್ಲಿ ಯೋಗಿ ಆದಿತ್ಯನಾಥ್ ಘರ್ಜನೆ
Lok Sabha Elections 2024: ಗೋರಖ್‌ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾಂಗ್ರೆಸ್ ಹಾಗೂ ಆಮ್ ಆದ್ನಿ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಮನನ್ನು ಹೀಯಾಳಿಸುವವರಿಗೆ ದೆಹಲಿಯ ಸಿಂಹಾಸನ ಸಿಗುವುದಿಲ್ಲ ಎಂದು ಹೇಳಿದ್ದಾರೆ.
ಗೋರಖ್‌ಪುರ: ಭಗವಾನ್ ರಾಮನಿಗೆ ಮಂದಿರ (Ram Mandir) ಕಟ್ಟಿ, ರಾಮನನ್ನು ಮಂದಿರದೊಳಗೆ ಕರೆತಂದವರನ್ನು ಮತ್ತೆ ಅಧಿಕಾರಕ್ಕೆ ಕರೆತರಲು ಜನರು ನಿರ್ಧರಿಸಿದ್ದಾರೆ. ರಾಮನ ಭಕ್ತ ಮಾತ್ರ ದೆಹಲಿಯ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾನೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಹೇಳಿದ್ದಾರೆ. ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪ್ರಸ್ತುತ ಲೋಕಸಭೆ ಚುನಾವಣೆಯು “ರಾಮ ಭಕ್ತರು ಮತ್ತು ರಾಮ ದ್ರೋಹಿಗಳ” ನಡುವಿನ ಯುದ್ಧವಾಗಿದೆ. “ರಾಮ ಭಕ್ತ” ಮಾತ್ರ ದೆಹಲಿಯ ಸಿಂಹಾಸನದಲ್ಲಿ ಆಳ್ವಿಕೆ ನಡೆಸುತ್ತಾನೆ ಎಂದು ಅವರು ಹೇಳಿದ್ದಾರೆ.
ಗೋರಖ್‌ಪುರದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಜನರು ಭಗವಾನ್ ರಾಮನನ್ನು ಕರೆತರಲು ನಿರ್ಧರಿಸಿದ್ದಾರೆ. ಗೋರಖ್‌ಪುರ ನಮ್ಮ ಪಕ್ಷದಲ್ಲಿ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ. ಏಕೆಂದರೆ, ವೀರ್ ಬಹದ್ದೂರ್ ಸಿಂಗ್ ಮುಖ್ಯಮಂತ್ರಿಯಾಗಿದ್ದಾಗ 1986ರಲ್ಲಿ ರಾಮಮಂದಿರದ ಬೀಗವನ್ನು ಈ ಸ್ಥಳದಿಂದ ತೆರೆಯಲಾಯಿತು. ಇಂದು ಆ ಜಾಗದಲ್ಲಿ ರಾಮಲಲ್ಲಾ ಆಸೀನರಾದಾಗ ದೆಹಲಿಯಿಂದ ದಾಖಲೆಯ ಮತಗಳು ಸಿಗಬೇಕು ಎಂದು ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಚೀನಾದೊಂದಿಗೆ ಮೋದಿ ಡಿಸ್ಕೋ ಮಾಡುತ್ತಿದ್ದಾರೆ; ಪ್ರಧಾನಿ ‘ಮುಜ್ರಾ’ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು
ನೀವು ಪ್ರಧಾನಿ ನರೇಂದ್ರ ಮೋದಿಯನ್ನು ಏಕೆ ಪ್ರೀತಿಸುತ್ತಾರೆ ಮತ್ತು ಬಿಜೆಪಿಯನ್ನು ಏಕೆ ಬೆಂಬಲಿಸುತ್ತಾರೆ ಎಂದು ನಾನು ಸಾರ್ವಜನಿಕರನ್ನು ಕೇಳುತ್ತೇನೆ. ಅವರು ರಾಮನನ್ನು ತಂದವರನ್ನು ನಾವು ಅಧಿಕಾರಕ್ಕೆ ಕರೆತರುತ್ತೇವೆ ಎಂದು ಹೇಳುತ್ತಾರೆ. ಹೀಗಾಗಿ, ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂಬುದು ಜನರ ಒತ್ತಾಸೆಯಾಗಿದೆ ಎಂದು ಯೋಗಿ ಹೇಳಿದ್ದಾರೆ.
रामभक्त ही राज करेगा, दिल्ली के सिंहासन पर…
और हमारे मोदी जी तो परम रामभक्त हैं… pic.twitter.com/8qkVxsWUSw
— Yogi Adityanath (मोदी का परिवार) (@myogiadityanath) May 28, 2024
ಇಂಡಿಯಾ ಬ್ಲಾಕ್ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವು “ರಾಮ ವಿರೋಧಿ” ಗುಣವನ್ನು ಹೊಂದಿದೆ ಎಂದು ಆರೋಪಿಸಿರುವ ಬಿಜೆಪಿ ಫೈರ್‌ಬ್ರಾಂಡ್ ಯೋಗಿ ಆದಿತ್ಯನಾಥ್, ವೀರ್ ಬಹದ್ದೂರ್ ಸಿಂಗ್ ರಾಮನ ಭಕ್ತ. ದೇವಸ್ಥಾನದ ಬೀಗ ತೆರೆಯಲು ಕೊಡುಗೆ ನೀಡಿದ್ದರಿಂದ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಿದೆ ಎಂದು ಹೇಳಿದ್ದಾರೆ.
ಇಂದಿಗೂ ರಾಮಮಂದಿರ ಕಟ್ಟಬಾರದಿತ್ತು ಎಂದು ಕಾಂಗ್ರೆಸ್ ಹೇಳುತ್ತಿದೆ. ಇದು ಜಗತ್ತಿಗೆ ತಪ್ಪು ಸಂದೇಶ ರವಾನಿಸಿದೆ. ರಾಮಮಂದಿರವನ್ನು ಸರಿಯಾಗಿ ನಿರ್ಮಿಸಿಲ್ಲ ಎಂದು ಸಮಾಜವಾದಿ ಪಕ್ಷ ಹೇಳುತ್ತಿದೆ. ರಾಮ ಮಂದಿರವು ಭಾರತದ ಸನಾತನ ನಂಬಿಕೆಯ ಪ್ರತೀಕವಾಗಿದೆ. ಹೀಗಾಗಿ, ಈ ಚುನಾವಣೆ ರಾಮ ಭಕ್ತರು ಮತ್ತು ರಾಮ ದ್ರೋಹಿಗಳ ನಡುವೆ ನಡೆಯುತ್ತಿದೆ ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಈ ದೇಶವನ್ನು ಹಿಂದೂ ರಾಷ್ಟ್ರ ಮಾಡಲು ಸಾಧ್ಯವೇ ಇಲ್ಲ: ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ತಿರುಗೇಟು
ರಾಮಭಕ್ತರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. ರಾಮ ಭಕ್ತರ ಮೇಲೆ ಗುಂಡು ಹಾರಿಸಿದ ಜನರು ಇಂದು ನಿಮಗೆ ಸುಳ್ಳು ಹೇಳಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಆದರೆ, ಅವರ ಬಲೆಗೆ ಬೀಳಬೇಡಿ. ರಾಮಭಕ್ತರು ದೇಶದ ಗೌರವವನ್ನು ಹೆಚ್ಚಿಸುತ್ತಿದ್ದಾರೆ. 4 ಪಥ, 6 ಪಥದ ಹೆದ್ದಾರಿಗಳನ್ನು ನಿರ್ಮಿಸಲಾಗುತ್ತಿದೆ. ಏಮ್ಸ್, ಐಐಟಿ, ಐಐಎಂ ಮತ್ತು ವಿಮಾನ ನಿಲ್ದಾಣಗಳ ನಿರ್ಮಾಣ ರಾಮ ಭಕ್ತರ ಕೊಡುಗೆಯಾಗಿದೆ. ಬಡವರು ಇಂದು 5 ಲಕ್ಷ ರೂ.ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದು. ಕಿಸಾನ್ ಸಮ್ಮಾನ್ ನಿಧಿಯಲ್ಲಿ ರೈತರು ಪ್ರಯೋಜನ ಪಡೆಯುತ್ತಿದ್ದಾರೆ. ಪ್ರತಿ ಮನೆಗೂ ಉಜ್ವಲ ಗ್ಯಾಸ್ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ