AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮ ಜನ್ಮ ಭೂಮಿಯಲ್ಲಿ ಯೋಗಿ ಆದಿತ್ಯನಾಥ್ ಮತಬೇಟೆ; ಕೋಟೆನಾಡಲ್ಲಿ ಪಂಜಾಬ್ ಸಿಎಂ ಪ್ರಚಾರ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಿದ್ದು ಇಂದು ಕಪ್ಪಳ, ರಾಯಚೂರು, ಕಲಬುರಗಿಯಲ್ಲಿ ಭರ್ಜರಿ ಮತಬೇಟೆಗೆ ಇಳಿಯಲಿದ್ದಾರೆ.

ಹನುಮ ಜನ್ಮ ಭೂಮಿಯಲ್ಲಿ ಯೋಗಿ ಆದಿತ್ಯನಾಥ್ ಮತಬೇಟೆ; ಕೋಟೆನಾಡಲ್ಲಿ ಪಂಜಾಬ್ ಸಿಎಂ ಪ್ರಚಾರ
ಯೋಗಿ ಆದಿತ್ಯನಾಥ್
ಆಯೇಷಾ ಬಾನು
|

Updated on: Apr 30, 2023 | 8:07 AM

Share

ಕೊಪ್ಪಳ: ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆ ಹಿಂದೂ ಪೈರ್ ಬ್ರ್ಯಾಂಡ್, ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯಕ್ಕೆ ಆಗಮಿಸಿದ್ದು ಇಂದು ಕಪ್ಪಳ, ರಾಯಚೂರು, ಕಲಬುರಗಿಯಲ್ಲಿ ಭರ್ಜರಿ ಮತಬೇಟೆಗೆ ಇಳಿಯಲಿದ್ದಾರೆ. ಮೊದಲಿಗೆ ಹನುಮ ಜನ್ಮ ಭೂಮಿ ಕೊಪ್ಪಳದಲ್ಲಿ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಪ್ರಚಾರ ನಡೆಸಲಿದ್ದಾರೆ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ಗಂಗಾವತಿ ಬಿಜೆಪಿ ಅಭ್ಯರ್ಥಿ ಪರಣ್ಣ ಮುನವಳ್ಳಿ ಪರ ಮತಬೇಟೆಯಾಡಲಿದ್ದಾರೆ. ಜನಾರ್ದನ ರೆಡ್ಡಿಗೆ ಟಕ್ಕರ್ ಕೊಡಲು ಗಂಗಾವತಿ ನಗರಕ್ಕೆ ಯೋಗಿ ಆದಿತ್ಯನಾಥ್ ಎಂಟ್ರಿ ಕೊಡಲಿದ್ದಾರೆ. ಗಂಗಾವತಿಯ ತಾಲೂಕು ಕ್ರೀಡಾಂಗಣದಲ್ಲಿ ಸಮಾವೇಶ ನಡೆಯಲಿದೆ.

ಸಿಎಂ ಯೋಗಿ ಆದಿತ್ಯನಾಥ್, ಲಖನೌನಿಂದ ಜಿಂದಾಲ್‌ ಏರ್‌ಪೋರ್ಟ್‌ಗೆ ಆಗಮಿಸಿ ಜಿಂದಾಲ್‌ನಿಂದ ಹೆಲಿಕಾಪ್ಟರ್‌ ಮೂಲಕ ಬೆಳಗ್ಗೆ 11 ಗಂಟೆಗೆ ಗಂಗಾವತಿಗೆ ಆಗಮಿಸಲಿದ್ದಾರೆ. ಗಂಗಾವತಿಯಲ್ಲಿ ಸಮಾವೇಶ ಮುಗಿಸಿ ಬಳಿಕ ರಾಯಚೂರಿಗೆ ತೆರಳಲಿದ್ದಾರೆ. ಬಳಿಕ ಗಡಿ ಜಿಲ್ಲೆ ರಾಯಚೂರಿನಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಶಿವರಾಜ್ ಪಾಟೀಲ್ ಪರ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 1ಗಂಟೆಗೆ ರಾಯಚೂರು ನಗರಕ್ಕೆ ಯೋಗಿ ಎಂಟ್ರಿ ಕೊಡಲಿದ್ದು ನಗರದ ಕೃಷಿ ವಿವಿ ಮೈದಾನದಲ್ಲಿ ಒಂದು ಗಂಟೆ ಕಾಲ ಬೃಹತ್ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಸುಮಾರು‌ 30 ಸಾವಿರಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಕಾರ್ಯಕರ್ತರನ್ನ ಉದ್ದೇಶಿಸಿ ಯೋಗಿ ಭಾಷಣ ಮಾಡಲಿದ್ದಾರೆ.

ಇದನ್ನೂ ಓದಿ: Karnataka Breaking Kannada News Live: ಕರ್ನಾಟಕ ಚುನಾವಣೆಗೆ ಮೋದಿ ರಂಗಪ್ರವೇಶ, ಜನರ ನಾಡಿಮಿಡಿತವನ್ನು ಬಿಜೆಪಿಯತ್ತ ತಿರುಗಿಸಲು ಯತ್ನ

ಕಲಬುರಗಿಯಲ್ಲಿ ಬುಲ್ಡೋಜರ್ ಬಾಬಾ ಮತಬೇಟೆ

ಕಲಬುರಗಿ ಜಿಲ್ಲೆಯಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಆಳಂದ ಶಾಸಕ ಸುಭಾಷ್ ಗುತ್ತೇದಾರ್ ಪರ ಪ್ರಚಾರ ನಡೆಸಲಿದ್ದಾರೆ. ಚಿತ್ತಾಪುರ, ಆಳಂದ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಮಧ್ಯಾಹ್ನ 3ಕ್ಕೆ ಪ್ರಚಾರ ಸಭೆ ಹಮ್ಮಿಕೊಳ್ಳಲಾಗಿದೆ. ಹಾಗೂ ಸಂಜೆ 4.30ಕ್ಕೆ ಆಳಂದ ಪಟ್ಟಣದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ.

ಕೋಟೆನಾಡು ಚಿತ್ರದುರ್ಗದಲ್ಲಿಂದು ಪಂಜಾಬ್ ಸಿಎಂ ಪ್ರಚಾರ

ಪಂಜಾಬ್ ಸಿಎಂ ಭಗವಮಂತ ಮಾನ್ ಸಿಂಗ್ ಅವರು ಜಿಲ್ಲೆಯ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಬೆಳಗ್ಗೆ 10:30ಕ್ಕೆ ಭೀಮಸಮುದ್ರ ಗ್ರಾಮದ ಹೆಲಿಪ್ಯಾಡ್ ಗೆ ಆಗಮಿಸಿ ಭೀಮಸಮುದ್ರ ಗ್ರಾಮದಿಂದ ಕಾರ್ ಮೂಲಕ ಚಿತ್ರದುರ್ಗಕ್ಕೆ ಬಂದು ಬೆಳಗ್ಗೆ 11ಕ್ಕೆ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಿ ಚಿತ್ರದುರ್ಗ ಆಮ್ ಆದ್ಮಿ ಅಭ್ಯರ್ಥಿ ಬಿ.ಇ.ಜಗಧೀಶ ಪರ ಪ್ರಚಾರ ನಡೆಸಲಿದ್ದಾರೆ. ಆಮ್ ಆದ್ಮಿ ಪಕ್ಷದ ರಾಜ್ಯಾದ್ಯಕ್ಷ ಪೃಥ್ವಿರೆಡ್ಡಿ, ಪ್ರಚಾರ ಸಮಿತಿ ಅದ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಸಾಥ್ ನೀಡಲಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ