ಚೀನಾದೊಂದಿಗೆ ಮೋದಿ ಡಿಸ್ಕೋ ಮಾಡುತ್ತಿದ್ದಾರೆ; ಪ್ರಧಾನಿ ‘ಮುಜ್ರಾ’ ಹೇಳಿಕೆಗೆ ಅಸಾದುದ್ದೀನ್ ಓವೈಸಿ ತಿರುಗೇಟು
8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 57 ಸಂಸದೀಯ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆಯ ಕೊನೆಯ ಹಂತದಲ್ಲಿ ಜೂನ್ 1ರಂದು ಮತದಾನ ನಡೆಯಲಿದೆ. ಪಿಎಂ ನರೇಂದ್ರ ಮೋದಿ (ವಾರಣಾಸಿ), ರವಿಶಂಕರ್ ಪ್ರಸಾದ್ (ಪಾಟ್ನಾ ಸಾಹಿಬ್), ಕಂಗನಾ ರನೌತ್ (ಮಂಡಿ), ಮತ್ತು ಅಭಿಷೇಕ್ ಬ್ಯಾನರ್ಜಿ (ಡೈಮಂಡ್ ಹಾರ್ಬರ್) ಸೇರಿದಂತೆ ಹಲವು ಪ್ರಮುಖ ಅಭ್ಯರ್ಥಿಗಳು ಕೊನೆಯ ಹಂತದಲ್ಲಿ ಕಣದಲ್ಲಿದ್ದಾರೆ.
ಪಾಟ್ನಾ: ಮೀಸಲಾತಿ ವಿಚಾರದಲ್ಲಿ ಇಂಡಿಯಾ ಬಣದ ವಿರುದ್ಧ ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ವಾಗ್ದಾಳಿ ನಡೆಸಿದ್ದರು. ಇಂಡಿಯಾ (INDIA) ಬಣ ವೋಟ್ ಬ್ಯಾಂಕ್‌ಗಾಗಿ ಮುಸ್ಲಿಮರೆದುರು”ಗುಲಾಮಗಿರಿ” ಮತ್ತು “ಮುಜ್ರಾ” ಮಾಡುತ್ತಿದೆ ಎಂದು ಮೋದಿ ಆರೋಪಿಸಿದ್ದರು. ಇದಕ್ಕೆ ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ (Asaduddin Owaisi) ತಿರುಗೇಟು ನೀಡಿದ್ದಾರೆ.
“ವೋಟ್ ಬ್ಯಾಂಕ್‌ಗಾಗಿ ಇಂಡಿಯಾ ಒಕ್ಕೂಟ ಮುಸ್ಲಿಮರೆದುರು ಮುಜ್ರಾ ಅಥವಾ ನೃತ್ಯ ಮಾಡುತ್ತಿದೆ” ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆಯ ಬಗ್ಗೆ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಚೀನಾದ ಸೈನಿಕರು ಭಾರತದ ಭೂಪ್ರದೇಶದ ಸುಮಾರು 2,000 ಚದರ ಕಿಮೀ ವಿಸ್ತೀರ್ಣವನ್ನು ವಶಪಡಿಸಿಕೊಂಡಾಗ ಪ್ರಧಾನಿ ನರೇಂದ್ರ ಮೋದಿ ಚೀನಾದೊಂದಿಗೆ ಡಿಸ್ಕೋ ಡ್ಯಾನ್ಸ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಹೈದರಾಬಾದ್ ಸಂಸದ ಓವೈಸಿ ಅವರು ಭಾನುವಾರ ಬಿಹಾರದ ಪಾಟ್ಲಿಪುತ್ರ ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ರ್ಯಾಲಿಯೊಂದರ ತುಣುಕನ್ನು ಹಂಚಿಕೊಂಡಿದ್ದಾರೆ. ಕಳೆದ ವಾರ ಅದೇ ಪ್ರದೇಶದಲ್ಲಿ ಪ್ರಧಾನಿಯವರು “ಮತ ಜಿಹಾದ್‌ನಲ್ಲಿ ತೊಡಗಿರುವ ಇಂಡಿಯಾ ಒಕ್ಕೂಟದವರು ಮುಸ್ಲಿಮರಿಗೆ ಮುಜ್ರಾ” ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ಪಾಕಿಸ್ತಾನದಿಂದ ರಾಹುಲ್ ಗಾಂಧಿ, ಕೇಜ್ರಿವಾಲ್ಗೆ ಬೆಂಬಲ; ಮೋದಿ ಹೇಳಿದ್ದೇನು?
“ನರೇಂದ್ರ ಮೋದಿಯವರೇ, ನೀವು ಮುಜ್ರಾ ಬಗ್ಗೆ ಮಾತನಾಡಿದ್ದೀರಿ. ಕಳೆದ 3 ವರ್ಷಗಳಿಂದ, ಚೀನಾ 2 ಸಾವಿರ ಚದರ ಕಿಲೋ ಮೀಟರ್ ಭಾರತೀಯ ಭೂಮಿಯನ್ನು ಆಕ್ರಮಿಸಿಕೊಂಡಿದೆ. ಆದರೂ ನೀವು ಚೀನಾವನ್ನು ದೂರ ಇಟ್ಟಿಲ್ಲ. ಆದ್ದರಿಂದ ನೀವು ಚೀನಾದವರೊಂದಿಗೆ ಡಿಸ್ಕೋ ಡ್ಯಾನ್ಸ್ ಮಾಡುತ್ತಿದ್ದೀರಾ? ಎಂದು ನಾನು ನಿಮ್ಮನ್ನು ಕೇಳಲು ಬಯಸುತ್ತೇನೆ” ಎಂದು ಓವೈಸಿ ಪೋಸ್ಟ್ ಮಾಡಿದ್ದಾರೆ.
.@narendramodi जी आपने मुजरा की बात की तो असदुद्दीन ओवैसी आपसे पूछना चाहता है पिछले 3 साल से चीन भारत की 2 हज़ार स्क्वायर किलोमीटर ज़मीन पर क़ब्ज़ा करके बैठा है, मोदी जी आप चीन को नहीं हटा रहे हैं तो क्या आप Disco Dancing कर रहे थे चीन के साथ?pic.twitter.com/yZkBKu64JU
— Asaduddin Owaisi (@asadowaisi) May 27, 2024
“ಇದು ಪ್ರಧಾನಿ ಬಳಸಬಹುದಾದ ಭಾಷೆಯೇ? ನಮಗೆ ಮಾತನಾಡಲು ಬಾಯಿ ಇಲ್ಲ ಎಂದು ಮೋದಿ ಭಾವಿಸುತ್ತಾರೆಯೇ?” ಎಂದು ಓವೈಸಿ ಪ್ರಶ್ನಿಸಿದ್ದಾರೆ.
ಪೌರತ್ವ (ತಿದ್ದುಪಡಿ) ಕಾಯಿದೆಯನ್ನು ಮುಸ್ಲಿಮರ ಹಕ್ಕುಗಳನ್ನು ಕಸಿದುಕೊಳ್ಳಲು ತರಲಾಯಿತು ಮತ್ತು ಮೋದಿ ಈ ವಿಷಯದ ಬಗ್ಗೆ ಭಾಂಗ್ರಾ ಮಾಡುತ್ತಲೇ ಇದ್ದರು. ಅಲ್ಲದೆ, ಹಿಂದೂ ಸಭೆಗಳಲ್ಲಿ ಮುಸ್ಲಿಮರು, ವಿಶೇಷವಾಗಿ ನಮ್ಮ ತಾಯಿ ಮತ್ತು ಸಹೋದರಿಯರ ಬಗ್ಗೆ ಎಲ್ಲಾ ರೀತಿಯ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ‘ನರೇಂದ್ರ ಮೋದಿ ಒಬಿಸಿ ಆದದ್ದು ಹೇಗೆ?’; ಜಾತಿ ಗಣತಿ ಪರ ಮತ್ತೆ ರಾಹುಲ್ ಗಾಂಧಿ ಬ್ಯಾಟಿಂಗ್
ಮೀಸಲಾತಿ ವಿಷಯದ ಬಗ್ಗೆ ಪಿಎಂ ಮೋದಿ ಇಂಡಿಯಾ ಬಣದ ಮೇಲೆ ದಾಳಿ ಮಾಡಿದ ಕೆಲವು ದಿನಗಳ ನಂತರ ಓವೈಸಿ ಈ ಹೇಳಿಕೆಗಳನ್ನು ನೀಡಿದ್ದಾರೆ. ಅದು ಮುಸ್ಲಿಂ ಮತ ಬ್ಯಾಂಕ್‌ಗಾಗಿ “ಗುಲಾಮಗಿರಿ” ಮತ್ತು “ಮುಜ್ರಾ” ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
“ನಾನು ಬಿಹಾರ, ಎಸ್‌ಸಿ, ಎಸ್‌ಟಿ, ಒಬಿಸಿ ಸಮುದಾಯಗಳಿಗೆ ಭರವಸೆ ನೀಡುತ್ತಿದ್ದೇನೆ. ಮೋದಿ ಬದುಕುವವರೆಗೂ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ. ಮೋದಿಗೆ ಸಂವಿಧಾನವೇ ಸರ್ವಶ್ರೇಷ್ಠ, ಮೋದಿಯವರಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. INDI ಮೈತ್ರಿಕೂಟವು ತಮ್ಮ ಮತಬ್ಯಾಂಕ್‌ನ ಗುಲಾಮಗಿರಿಯನ್ನು ಸ್ವೀಕರಿಸಲು ಬಯಸಿದರೆ, ಅವರು ಹಾಗೆ ಮಾಡಲು ಸ್ವತಂತ್ರರು. ಅವರು ಮುಜ್ರಾ (ನೃತ್ಯ) ಮಾಡಲು ಬಯಸಿದರೆ ಅವರು ಸ್ವತಂತ್ರರು. ನಾನು ಎಂದಿಗೂ SC, ST ಜೊತೆ ನಿಲ್ಲುತ್ತೇನೆ ಎಂದು ಮೋದಿ ಹೇಳಿದ್ದರು.
ಕಾಂಗ್ರೆಸ್‌ನ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಎನ್‌ಸಿಯ ಫಾರೂಕ್ ಅಬ್ದುಲ್ಲಾ ಮತ್ತು ಆರ್‌ಜೆಡಿಯ ತೇಜಸ್ವಿ ಯಾದವ್ ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು, ದೇಶದ ಇತಿಹಾಸದಲ್ಲಿ ಯಾವುದೇ ಪ್ರಧಾನಿ ವಿರೋಧ ಪಕ್ಷದ ನಾಯಕರಿಗೆ ಇಂತಹ ಪದಗಳನ್ನು ಬಳಸಿಲ್ಲ ಎಂದು ಮೋದಿಯವರ ಹೇಳಿಕೆಗೆ ತೀವ್ರ ಟೀಕೆ ವ್ಯಕ್ತಪಡಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ