Shocking Video: ಸ್ಕೂಟಿಗೆ ಡಿಕ್ಕಿ ಹೊಡೆದು ಮೀಟರ್ಗಟ್ಟಲೆ ದೂರ ಎಳೆದೊಯ್ದ ಕಾರು; ವಿಡಿಯೋ ವೈರಲ್
ಇಂದು ಮುಂಜಾನೆ ಗುರುಗ್ರಾಮ್‌ನ ಬಸಾಯಿ ರಸ್ತೆಯಲ್ಲಿ ವೇಗವಾಗಿ ಬಂದ ಎಸ್‌ಯುವಿ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಸ್ಕೂಟರ್ನ ಚಾಲಕನನ್ನು ಹಲವಾರು ಮೀಟರ್‌ಗಳವರೆಗೆ ಎಳೆದೊಯ್ದಿರುವ ಶಾಕಿಂಗ್ ವಿಡಿಯೋವೊಂದು ವೈರಲ್ ಆಗಿದೆ.
ಗುರುಗ್ರಾಮ: ಪುಣೆಯಲ್ಲಿ ಪೋರ್ಷೆ (Porsche Accident) ಕಾರು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾಫ್ಟ್ವೇರ್ ಇಂಜಿನಿಯರ್ಗಳು ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಗುರುಗ್ರಾಮದಲ್ಲಿ (Gurugram) ಮತ್ತೊಂದು ಶಾಕಿಂಗ್ ಘಟನೆ ನಡೆದಿದ್ದು, ಇಂದು ಮುಂಜಾನೆ ನಸುಕಿನಲ್ಲಿ ಹರಿಯಾಣದ ಗುರುಗ್ರಾಮ್ ಜಿಲ್ಲೆಯ ಖಾಲಿ ಬಸಾಯಿ ರಸ್ತೆಯಲ್ಲಿ ವೇಗವಾಗಿ ಬಂದ ಕಾರೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದು ಚಾಲಕನನ್ನು ಹಲವಾರು ಮೀಟರ್ಗಳಷ್ಟು ದೂರ ಎಳೆದೊಯ್ದಿದೆ.
ಈ ಪ್ರದೇಶದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ದೃಶ್ಯ ಸೆರೆಯಾಗಿದೆ. ಬಹುತೇಕ ನಿರ್ಜನವಾಗಿದ್ದ ರಸ್ತೆಯಲ್ಲಿ ಬಿಳಿ ಬಣ್ಣದ ಎಸ್‌ಯುವಿ ವೇಗವಾಗಿ ಚಲಿಸುತ್ತಿದ್ದು, ಕಾರಿನ ಮುಂದೆ ಚಲಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ಪರಿಣಾಮದಿಂದ ಸ್ಕೂಟರ್ ಮೇಲಕ್ಕೆ ಹಾರಿದೆ. ಅದರ ಚಾಲಕನನ್ನು ದೂರಕ್ಕೆ ಕಾರು ಎಳೆದೊಯ್ದಿದೆ. ಆದರೆ, ಡಿಕ್ಕಿ ಹೊಡೆದ ನಂತರವೂ ಕಾರು ನಿಲ್ಲಲಿಲ್ಲ.
ಇದನ್ನೂ ಓದಿ: Viral Video: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್ನಲ್ಲೇ ಲಾಕ್, ವಿಡಿಯೋ ವೈರಲ್
ಪಂಕಜ್ ಜುನೇಜಾ ಎಂದು ಗುರುತಿಸಲ್ಪಟ್ಟ ಸವಾರನನ್ನು ಕಾರು ಆ ರಸ್ತೆಯಲ್ಲಿ ಸುಮಾರು 50 ಮೀಟರ್‌ಗಳವರೆಗೆ ಎಳೆದೊಯ್ದಿದೆ. ನಂತರ ಕಾರು ವೇಗವಾಗಿ ಚಲಿಸಿದೆ. ಇಂದು ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಅಪಘಾತದ ನಂತರ ಎಸ್‌ಯುವಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Gurugram: A speeding car hit a scooter rider this morning and sent him flying. The incident was captured in CCTV. Police is searching for the car driver. Drive your vehicle on the road within the speed limit only. Your carelessness can kill you and others. pic.twitter.com/hfr2Twcqof
— Baba Banaras™ (@RealBababanaras) May 27, 2024
ಅಪಘಾತ ನಡೆದ ಬಳಿಕ ಸ್ಥಳದಿಂದ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸ್ಕೂಟರ್‌ಗೆ ಡಿಕ್ಕಿ ಹೊಡೆದ ನಂತರ ಕಾರು ನಿಲ್ಲಿಸಲಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಘಟನೆಯಲ್ಲಿ ದೇವಿಲಾಲ್ ಕಾಲೋನಿಯ ನಿವಾಸಿ ಪಂಕಜ್ ಜುನೇಜಾ ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು, ಪ್ರಸ್ತುತ ಗುರುಗ್ರಾಮದ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Viral Video: ಟ್ರಾಫಿಕ್ನಲ್ಲೇ ರಸ್ತೆಯ ಡಿವೈಡರ್ ಮೇಲೆ ಬೈಕ್ ಓಡಿಸಿದ ಯುವಕ; ಭಯಾನಕ ವಿಡಿಯೋ ವೈರಲ್
ತರಕಾರಿ ಮಾರಾಟಗಾರರಾಗಿರುವ ಪಂಕಜ್ ಜುನೇಜಾ ಅವರು ತಮ್ಮ ಸ್ಕೂಟರ್‌ನಲ್ಲಿ ಖಂಡಸಾ ತರಕಾರಿ ಮಾರುಕಟ್ಟೆಗೆ ತೆರಳುತ್ತಿದ್ದಾಗ ಅವರ ಸ್ಕೂಟರ್‌ಗೆ ವೇಗವಾಗಿ ಬಂದ ಎಸ್‌ಯುವಿ ಡಿಕ್ಕಿ ಹೊಡೆದಿದೆ. ಪೊಲೀಸರು ಸ್ಕೂಟರ್ ಚಾಲಕನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಕಾರನ್ನು ಗುರುತಿಸಲು ಮತ್ತು ಆರೋಪಿಗಳನ್ನು ಬಂಧಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ