ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ; ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

ರಸ್ತೆ ಕಾಮಗಾರಿ ನಡೆಯುತ್ತಿದ್ರೂ ಹೆದ್ದಾರಿ ಪ್ರಾಧಿಕಾರ ಫಲಕ ಅಳವಡಿಸಿರಲಿಲ್ಲ. ರಸ್ತೆ ಕಾಮಗಾರಿ ಹಿನ್ನೆಲೆ ಮುಖ್ಯ ರಸ್ತೆ ಬಂದ್ ಮಾಡಲಾಗಿತ್ತು. ಬೈಪಾಸ್ ತಿರುವಿನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ತುಮಕೂರು ಜಿಲ್ಲೆ ಗುಬ್ಬಿ ಮೂಲದ 2 ವರ್ಷದ ಮಗು ವಿಕ್ರಾಂತ್ ಮತ್ತು ಕಾರು ಚಾಲಕ ಪೃಥ್ವಿ(36) ಮೃತ ಪಟ್ಟಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯ; ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು
ಕಾರು ಅಪಘಾತ
Follow us
| Updated By: ಆಯೇಷಾ ಬಾನು

Updated on: May 25, 2024 | 10:12 AM

ಚಿಕ್ಕಮಗಳೂರು, ಮೇ.25: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಲಕ್ಷ್ಯಕ್ಕೆ ರಾಷ್ಟ್ರೀಯ ಹೆದ್ದಾರಿ 206ರಲ್ಲಿ 2 ವರ್ಷದ ಮಗು ಸೇರಿ ಇಬ್ಬರು ಬಲಿಯಾಗಿದ್ದಾರೆ (Death). ರಸ್ತೆಯ ಡಿವೈಡರ್​ಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಕೂಡ್ಲೂರು ಗೇಟ್ ಬಳಿ ನಡೆದಿದೆ (Accident). ತುಮಕೂರು ಜಿಲ್ಲೆ ಗುಬ್ಬಿ ಮೂಲದ 2 ವರ್ಷದ ಮಗು ವಿಕ್ರಾಂತ್ ಮತ್ತು ಕಾರು ಚಾಲಕ ಪೃಥ್ವಿ(36) ಮೃತ ಪಟ್ಟಿದ್ದಾರೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಗುಬ್ಬಿಯಿಂದ ಮುರುಡೇಶ್ವರ ದೇಗುಲಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ. ರಸ್ತೆ ಕಾಮಗಾರಿ ನಡೆಯುತ್ತಿದ್ರೂ ಹೆದ್ದಾರಿ ಪ್ರಾಧಿಕಾರ ಫಲಕ ಅಳವಡಿಸಿರಲಿಲ್ಲ. ರಸ್ತೆ ಕಾಮಗಾರಿ ಹಿನ್ನೆಲೆ ಮುಖ್ಯ ರಸ್ತೆ ಬಂದ್ ಮಾಡಲಾಗಿತ್ತು. ಬೈಪಾಸ್ ತಿರುವಿನಲ್ಲಿ ಡಿವೈಡರ್​ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ನಿರಂತರವಾಗಿ ಅಪಘಾತವಾಗುತ್ತಿದ್ರು ಹೆದ್ದಾರಿ ಪ್ರಾಧಿಕಾರ ಎಚ್ಚೆತ್ತುಕೊಂಡಿಲ್ಲ. ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಹೆಚ್​ಡಿಡಿ ವಾರ್ನಿಂಗ್ ಬಳಿಕ ಭಾರತಕ್ಕೆ ಪ್ರಜ್ವಲ್ ಕರೆಸಲು ಕಸರತ್ತು; ಮತ್ತೊಂದೆಡೆ ಆರೋಪಿ ನವೀನ್ ಗೌಡ, ಲಿಂಗೇಶ್ ಆಡಿಯೋ ವೈರಲ್

ಮದ್ಯ ವ್ಯಸನಿಗೆ ಮಂಗಳಮುಖಿಯರಿಂದ ಥಳಿತ

ಅಸಭ್ಯವಾಗಿ ವರ್ತಸಿದ ಮದ್ಯ ವ್ಯಸನಿಗೆ ನಾಲ್ವರು ಮಂಗಳಮುಖಿಯರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಯಾದಗಿರಿಯ ಹೊಸ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ. ಬಿಡಿಸಲು ಹೋದ ಸಾರ್ವಜನಿಕರೊಂದಿಗೆ ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿದ್ದಾರೆ. ಮಂಗಳಮುಖಿಯರ ನಡೆಗೆ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ. ಯಾದಗಿರಿ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನದಿ ಬಳಿ ತೆರಳಿದ್ದ ಬಾಲಕನನ್ನ ಹೊತ್ತೊಯ್ದ ಮೊಸಳೆ

ಕೃಷ್ಣಾ ನದಿ ಬಳಿ ತೆರಳಿದ್ದ ಬಾಲಕನನ್ನು ಮೊಸಳೆ ಹೊತ್ತೊಯ್ದಿದೆ. ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದ ಬಳಿ ಘಟನೆ ನಡೆದಿದೆ. 11 ವರ್ಷದ ಬಾಲಕ ವಿಶ್ವನ ಕುರಿಗೆ ನೀರು ಕುಡಿಸೋದಕ್ಕೆ ಹೋಗಿದ್ದಾಗ ಮೊಸಳೆ ಎಳೆದೊಯ್ದಿದೆ. ಸ್ಥಳಕ್ಕೆ ರಾಯಚೂರು ಗ್ರಾಮೀಣ ಠಾಣೆ ಪೊಲೀಸರ ಭೇಟಿ ನೀಡಿದ್ದಾರೆ. ಗ್ರಾಮಸ್ಥರು, ಪೊಲೀಸರು & ಅಗ್ನಿಶಾಮಕ ಸಿಬ್ಬಂದಿ ಬಾಲಕ ವಿಶ್ವನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ