AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಚ್​ಡಿಡಿ ವಾರ್ನಿಂಗ್ ಬಳಿಕ ಭಾರತಕ್ಕೆ ಪ್ರಜ್ವಲ್ ಕರೆಸಲು ಕಸರತ್ತು; ಮತ್ತೊಂದೆಡೆ ಆರೋಪಿ ನವೀನ್ ಗೌಡ, ಲಿಂಗೇಶ್ ಆಡಿಯೋ ವೈರಲ್

ದೇವೇಗೌಡರ ಗೌಡರ ವಾರ್ನಿಂಗ್ ಬೆನ್ನಲ್ಲೇ ಪ್ರಜ್ವಲ್ ಕರೆಸಲು ಕಸರತ್ತು ಜೋರಾಗಿದೆ. ಪ್ರಜ್ವಲ್ ಸಂಪರ್ಕಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಪ್ರಜ್ವಲ್ ತಾಯಿ ಭವಾನಿ ರೇವಣ್ಣರ ಕಡೆಯ ಸಂಬಂಧಿಕರ ಮೂಲಕ ಪ್ರಜ್ವಲ್ ದೇಶಕ್ಕೆ ಕರೆಸಲು ಪ್ರಯತ್ನ ನಡೆಯುತ್ತಿದೆ. ಮತ್ತೊಂದೆಡೆ ವಿಡಿಯೋ ವೈರಲ್ ಪ್ರಮುಖ ಆರೋಪಿಗಳಾದ ನವೀನ್ ಗೌಡ ಹಾಗು ಬೇಲೂರು ಮಾಜಿ ಶಾಸಕ ಲಿಂಗೇಶ್ ಅವರದ್ದು ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಹೆಚ್​ಡಿಡಿ ವಾರ್ನಿಂಗ್ ಬಳಿಕ ಭಾರತಕ್ಕೆ ಪ್ರಜ್ವಲ್ ಕರೆಸಲು ಕಸರತ್ತು; ಮತ್ತೊಂದೆಡೆ ಆರೋಪಿ ನವೀನ್ ಗೌಡ, ಲಿಂಗೇಶ್ ಆಡಿಯೋ ವೈರಲ್
ಪ್ರಜ್ವಲ್ ರೇವಣ್ಣ
Sunil MH
| Edited By: |

Updated on:May 25, 2024 | 9:26 AM

Share

ಹಾಸನ, ಮೇ.25: ಪ್ರಜ್ವಲ್ ರೇವಣ್ಣನದ್ದು (Prajwal Revanna) ಎನ್ನಲಾದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಆಗುವಂತೆ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (HD DeveGowda) ಅವರು ವಾರ್ನಿಂಗ್ ಕೊಟ್ಟಿದ್ದಾರೆ. ಹೀಗಾಗಿ ಪ್ರಜ್ವಲ್ ರೇವಣ್ಣನನ್ನು ಭಾರತಕ್ಕೆ ಕರೆಸಿಕೊಳ್ಳಲು ಕುಟುಂಬಸ್ಥರು ಭಾರಿ ಪ್ರಯತ್ನ ಪಡುತ್ತಿದ್ದಾರೆ. ಮತ್ತೊಂದೆಡೆ ವಿಡಿಯೋ ವೈರಲ್ (Audio Viral) ಪ್ರಮುಖ ಆರೋಪಿಗಳಾದ ನವೀನ್ ಗೌಡ ಹಾಗು ಬೇಲೂರು ಮಾಜಿ ಶಾಸಕ ಲಿಂಗೇಶ್ ಅವರದ್ದು ಎನ್ನಲಾದ ಆಡಿಯೋ ಈಗ ವೈರಲ್ ಆಗಿದೆ.

ಅಶ್ಲೀಲ ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿ ಕುಳಿತಿದ್ದಾರೆ. ಅವರನ್ನು ದೇಶಕ್ಕೆ ಕರೆತರಲು ಭಾರೀ ಕಸರತ್ತು ನಡೆಯುತ್ತಿದೆ. ಎಲ್ಲಿದ್ರೂ ಬಾ. ಬಂದು ಶರಣಾಗು. ಇಲ್ಲದಿದ್ರೆ ಒಂಟಿಯಾಗ್ತಿಯಾ. ನನ್ನ ತಾಳ್ಮೆ ಪರೀಕ್ಷೆ ಮಾಡಬೇಡ ಎಂದು ವಿದೇಶದಲ್ಲಿ ತಲೆಮರೆಸಿಕೊಂಡಿರೋ ಪ್ರಜ್ವಲ್ ರೇವಣ್ಣಗೆ ಮಾಜಿ ಪ್ರಧಾನಿ ದೇವೇಗೌಡರು ಎಚ್ಚರಿಕೆ ಕೊಟ್ಟಿದ್ದಾರೆ. ನಿನ್ನೆಯಷ್ಟೇ ಪ್ರಜ್ವಲ್​ಗೆ ಪತ್ರ ಬರೆದ ಹೆಚ್​ಡಿಡಿ ದೇಶಕ್ಕೆ ವಾಪಸ್ ಆಗುವಂತೆ ಹೇಳಿದ್ದಾರೆ.

ಗೌಡರ ವಾರ್ನಿಂಗ್ ಬೆನ್ನಲ್ಲೇ ಪ್ರಜ್ವಲ್ ಕರೆಸಲು ಕಸರತ್ತು ಜೋರಾಗಿದೆ. ಪ್ರಜ್ವಲ್ ಸಂಪರ್ಕಕ್ಕೆ ಕುಟುಂಬಸ್ಥರು ಮುಂದಾಗಿದ್ದಾರೆ. ಪ್ರಜ್ವಲ್ ತಾಯಿ ಭವಾನಿ ರೇವಣ್ಣರ ಕಡೆಯ ಸಂಬಂಧಿಕರ ಮೂಲಕ ಪ್ರಜ್ವಲ್ ದೇಶಕ್ಕೆ ಕರೆಸಲು ಪ್ರಯತ್ನ ನಡೆಯುತ್ತಿದೆ. ವಿದೇಶದಲ್ಲಿರುವ ಪ್ರಜ್ವಲ್ ಸ್ನೇಹಿತರ ಮೂಲಕ ಸಂಪರ್ಕಕ್ಕಕ್ಕೂ ಪ್ರಯತ್ನ ಪಡಲಾಗುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಪ್ರಜ್ವಲ್ ಕರೆಸಿ ಎಸ್ಐಟಿ ಮುಂದೆ ಹಾಜರ್ ಮಾಡಿಸಲು ಶತ ಪ್ರಯತ್ನ ಮಾಡಲಾಗುತ್ತಿದೆ. ಈಗಾಗಲೇ ಪ್ರಜ್ವಲ್ ರೇವಣ್ಣಗೆ ವಿದೇಶಾಂಗ ಸಚಿವಾಲಯ ಶೋಕಾಸ್ ನೋಟಿಸ್ ನೀಡಿದೆ. ಒಂದು ವೇಳೆ ಪ್ರಜ್ವಲ್ ಪಾಸ್ ಪೋರ್ಟ್ ರದ್ದಾದರೆ ಈ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿ ಕುಟುಂಬಕ್ಕೆ ತೀವ್ರ ಮುಜುಗರ ಉಂಟಾಗುತ್ತದೆ. ಹೀಗಾಗಿ ಮುಜುಗರ ತಪ್ಪಿಸಿಕೊಳ್ಳಲು ಪ್ರಜ್ವಲ್ ವಿದೇಶದಿಂದ ಕರೆಸಲು ಎಲ್ಲಾ ಆಯಾಮದಲ್ಲೂ ಕುಟುಂಬಸ್ಥರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಶೀಘ್ರದಲ್ಲೇ ಪ್ರಜ್ವಲ್ ವಿದೇಶಕ್ಕೆ ವಾಪಸ್ ಆಗುವ ಸಾಧ್ಯತೆ ಇದೆ.

ಇದನ್ನೂ ಓದಿ: ದಾವಣಗೆರೆ: ಚನ್ನಗಿರಿ ಠಾಣೆ ಮೇಲೆ ಕಲ್ಲು ತೂರಾಟ, 11 ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂ

ನವೀನ್ ಗೌಡ, ಲಿಂಗೇಶ್ ಆಡಿಯೋ ವೈರಲ್

ಬೇಲೂರು ಜೆಡಿಎಸ್ ಮಾಜಿ ಶಾಸಕ ಹಾಗು ಜೆಡಿಎಸ್ ಜಿಲ್ಲಾದ್ಯಕ್ಷ ಕೆ.ಎಸ್.ಲಿಂಗೇಶ್ ಮತ್ತು ಕಾಂಗ್ರೆಸ್ ಕಾರ್ಯಕರ್ತ‌ ಎನ್ನಲಾಗ್ತಿರೊ ನವೀನ್ ಗೌಡ ಮಾತಾಡಿದ್ದಾರೆನ್ನಲಾದ ಆಡಿಯೋ ಈಗ ವೈರಲ್ ಆಗಿದೆ. ವೈರಲ್ ಆಡಿಯೋದಲ್ಲಿ, ಅಣ್ಣಾ..ನಿಮಗಾಗಿ ಈ ಪಕ್ಷದಲ್ಲಿದ್ದೇವೆ ಅಂತ ಲಿಂಗೇಶ್ ಗೆ ನವೀನ್ ಗೌಡ ಹೇಳಿದ್ದು ವಿಧಾನ ಸಭೆ ಚುನಾವಣೆ ಬಳಿಕ ಸೋಲಿನ ಬಗ್ಗೆ ಇಬ್ಬರೂ ಚರ್ಚೆ ನಡೆಸಿದ್ದಾರೆ. ಸಂಸದ ಪ್ರಜ್ವಲ್ ನಿಮ್ಮ ವಿರುದ್ದ ಇರುವ ನಾಯಕರ ಜೊತೆ ಓಡಾಡ್ತಾರೆ ಎಂದು ಲಿಂಗೇಶ್​ಗೆ ನವೀನ್ ಗೌಡ ದೂರು ನೀಡಿದ್ದಾನೆ. ಹೌದು ನಾನು ಮತ್ತೆ ಗೆದ್ದರೆ ನಾನೇ ಇರ್ತೀನಿ ಹಾಗಾಗಿ ಸೋಲಲಿ ಎಂದು ಕೆಲವರು ಓಡಾಡಿದ್ರು. ನಾನು ಎಂಪಿಗೆ ಕೇಳಿದ್ರು ಕೇಳಲಿಲ್ಲ ಎಂದು ಲಿಂಗೇಶ್ ಮಾತನಾಡಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:23 am, Sat, 25 May 24