Viral Video: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್​​​ನಲ್ಲೇ ಲಾಕ್, ವಿಡಿಯೋ ವೈರಲ್

ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡವರು ಹಲವರಿದ್ದಾರೆ. ಹೀಗಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗಿ ದಾಖಲೆಯಾಗುತ್ತಿದೆ. ಇತ್ತ ಸೋಶಿಯಲ್ ಮೀಡಿಯಾದಲ್ಲಿ ಕಳ್ಳತನದ ವಿಡಿಯೋಗಳು ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಬಸ್ಸಿನಲ್ಲಿ ಮಹಿಳೆಯ ಬಸ್ ಎಗರಿಸಲು ಪ್ರಯತ್ನಿಸಿ ವೇಳೆಯಲ್ಲಿ ಡ್ರೈವರ್ ಕೈಯಲ್ಲಿ ಸಿಕ್ಕಿ ಬಿದ್ದು ಬಸ್ಸಿನಲ್ಲಿಯೇ ಲಾಕ್ ಆದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನ ಸೆಳೆಯುತ್ತಿವೆ.

Viral Video: ಮಹಿಳೆಯ ಪರ್ಸ್ ಎಗರಿಸಲು ಬಂದ ಕಳ್ಳ ಬಸ್​​​ನಲ್ಲೇ ಲಾಕ್, ವಿಡಿಯೋ ವೈರಲ್
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2024 | 2:23 PM

ಕಳ್ಳತನ ಮಾಡುವುದು ಅಪರಾಧ ಎಂದು ಗೊತ್ತಿದ್ರೂ ಇದನ್ನೇ ವೃತ್ತಿಯಾಗಿಸಿಕೊಂಡವರು ಹಲವರಿದ್ದಾರೆ. ಹೀಗಾಗಿ ಹೆಚ್ಚು ಜನರು ಸೇರಿದ ಸ್ಥಳಗಳಲ್ಲಿ,ಬಸ್ಸಿನಲ್ಲಿ ಪ್ರಯಾಣಿಸುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಬಸ್ಸಿನಲ್ಲಿ ಮಹಿಳೆಯರ ಪರ್ಸ್ ಎಗರಿಸಲು ಪ್ರಯತ್ನಿಸಿದ್ದು ಕೊನೆಗೆ ತನ್ನ ಪ್ರಯತ್ನವು ವಿಫಲವಾಗಿ ಸಿಕ್ಕಿಬಿದ್ದಿದ್ದಾನೆ.

ಸದ್ಯಕ್ಕೆ ವೈರಲ್ ಆಗಿರುವ ವಿಡಿಯೋದಲ್ಲಿ ಪ್ರಯಾಣಿಕನಂತೆ ಬಸ್ಸು ಹತ್ತಿದ ವ್ಯಕ್ತಿಯು ಅಲ್ಲೇ ಕುಳಿತಿದ್ದ ಮಹಿಳೆಯರ ಕದಿಯಲು ಯತ್ನಿಸಿದ್ದಾನೆ.  ಆದರೆ ಮೊದಲ ಪ್ರಯತ್ನದಲ್ಲಿದ್ದು ವಿಫಲವಾಗುತ್ತಿದ್ದಂತೆ ಆ ವೇಳೆ ಅಕಸ್ಮಾತ್ ಕೈ ತಾಗಿದಂತೆ ನಟಿಸಿದ್ದಾನೆ. ಆದರೆ ಎರಡನೇ ಬಾರಿ ಪರ್ಸ್ ಎಳೆದುಕೊಂಡು ಬಸ್ಸಿನಿಂದ ಓಡಿಹೋಗಲು ಯತ್ನಿಸುತ್ತಿದ್ದಂತೆ ಇದನ್ನು ಅರಿತ ಬಸ್ ಚಾಲಕ ಬಾಗಿಲು ಹಾಕಿದ್ದಾನೆ. ಆದರೆ ಈ ಚಾಲಕನು ಮಾತ್ರ ಬಸ್ಸನ್ನು ನಿಲ್ಲಿಸದೆಯೇ ಅಲ್ಲೇ ಇದ್ದ ಕೋಲಿನಿಂದ ಆ ಕಳ್ಳನನ್ನ ಮನಬಂದಂತೆ ಬಾರಿಸಿದ್ದಾನೆ. ಸ್ವಲ್ಪ ಹೊತ್ತಿನಲ್ಲೇ ಪೊಲೀಸರು ಬಂದಿದ್ದು ಕಳ್ಳನನ್ನು ಬಂಧಿಸಿ ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ, 102 ವರ್ಷ ವಯಸ್ಸಿನ ಅಜ್ಜಿಯನ್ನು ವರಿಸಿದ 100ರ ಅಜ್ಜ

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

‘non aesthetic things’ ಎನ್ನುವ ಹೆಸರಿನ ಖಾತೆಯಲ್ಲಿ  ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಬಸ್ಸಿನಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಪರ್ಸ್ ಕದಿಯಲು ಯತ್ನಿಸಿ ವಿಫಲನಾಗಿದ್ದಾನೆ ಎಂದು ಬರೆದುಕೊಳ್ಳಲಾಗಿದೆ. ಈಗಾಗಲೇ ಈ ವಿಡಿಯೋವೊಂದು 4.9 ಮಿಲಿಯನ್ಸ್ ವೀಕ್ಷಣೆಯನ್ನು ಕಂಡಿದ್ದು, ನೆಟ್ಟಿಗನೊಬ್ಬನು, ‘ಈ ಜನ್ಮದಲ್ಲಿ ದೇವರು ಕೆಟ್ಟ ಕರ್ಮದ ಫಲವನ್ನು ನೀಡುತ್ತಾನೆ’ ಎಂದು ಕಾಮೆಂಟ್ ಮಾಡಿದ್ದಾನೆ. ಇನ್ನು ಕೆಲವರು, ‘ನಾವು ರೋಗಕ್ಕೆ ಚಿಕಿತ್ಸೆ ನೀಡಬೇಕೇ ಹೊರತು ರೋಗಿಗೆ ಚಿಕಿತ್ಸೆ ನೀಡಬಾರದು’ ಎಂದು ಸರ್ಕಾರವನ್ನು ದೂಷಿಸಸುವ ಮೂಲಕ ಕಾಮೆಂಟ್ ಸುರಿಮಳೆಗೈದಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ