ಗದಗ: ತಲೆ ಮೇಲೆ ಪಟಾಕಿ ಹೊತ್ತುಕೊಂಡು ಪುಂಡಾಟ

ಗದಗ: ತಲೆ ಮೇಲೆ ಪಟಾಕಿ ಹೊತ್ತುಕೊಂಡು ಪುಂಡಾಟ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: Ganapathi Sharma

Updated on: May 27, 2024 | 12:10 PM

ಗದಗ ಜಿಲ್ಲೆ ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಶ್ರೀ ಅಡವಿ ಸಿದ್ದೇಶ್ವರಾಯ ಅಜ್ಜನ ಜಾತ್ರೆಯ ರಥೋತ್ಸವದ ನಂತರ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಯುವಕನೊಬ್ಬ ಸಿಡಿಯುತ್ತಿರುವ ಪಟಾಕಿ ಬಾಕ್ಸ್ ತಲೆಯಲ್ಲಿಟ್ಟುಕೊಂಡು ಜನಸಾಗರದ ಮಧ್ಯೆಯೇ ಅಪಾಯಕಾರಿ ಹುಚ್ಚಾಟ ಮೆರೆದಿದ್ದಾನೆ. ವಿಡಿಯೋ ಇಲ್ಲಿದೆ ನೋಡಿ.

ಗದಗ, ಮೇ 27: ಚಿತ್ರ ವಿಚಿತ್ರ ವಿಡಿಯೋಗಳನ್ನು ಮಾಡಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಯಬಿಡುವ ಟ್ರೆಂಡ್ ಈಗ ಸಾಮಾನ್ಯ. ರೀಲ್ಸ್​ ವಿಡಿಯೋಗಳಿಗಾಗಿ ಅಪಾಯಕಾರಿ ಸಾಹಸಕ್ಕೆ ಕೈಹಾಕುವ ಯುವ ಮಂದಿಯ ಬಗ್ಗೆ ಅಲ್ಲಲ್ಲಿ ವರದಿಯಾಗುತ್ತಿರುತ್ತವೆ. ಕೆಲವೊಬ್ಬರು ವಿಡಿಯೋಗಾಗಿ ಅಪಾಯಕಾರಿ ಸಾಹಸ ಮಾಡಲು ಹೋಗಿ ಪ್ರಾಣಾಪಾಯ ತಂದುಕೊಂಡ ಘಟನೆಗಳೂ ಕಣ್ಣಮುಂದಿವೆ. ಹೀಗಿರುವಾಗ ಗದಗ (Gadag) ಜಿಲ್ಲೆ ರೋಣ (Rona) ತಾಲೂಕಿನ ಕೊತಬಾಳ ಗ್ರಾಮದ ಜಾತ್ರೆಯೊಂದರಲ್ಲಿ ಯುವಕನೊಬ್ಬ ಸಿಡಿಯುತ್ತಿರುವ ಪಟಾಕಿ ಬಾಕ್ಸನ್ನು ತಲೆಯ ಮೇಲಿಟ್ಟುಕೊಂಡು ಹುಚ್ಚಾಟ ಮೆರೆದಿದ್ದಾನೆ. ಅದೃಷ್ಟವಶಾತ್ ಏನೂ ಅಪಾಯ ಸಂಭವಿಸಿಲ್ಲ.

ರೋಣ ತಾಲೂಕಿನ ಕೊತಬಾಳ ಗ್ರಾಮದಲ್ಲಿ ಶ್ರೀ ಅಡವಿ ಸಿದ್ದೇಶ್ವರಾಯ ಅಜ್ಜನ ಜಾತ್ರೆ ವೈಭವದಿಂದ ನೆರವೇರಿತು. ಅಡವಿ ಸಿದ್ದೇಶ್ವರರ 69ನೇ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವವೂ ವೈಭವದಿಂದ ನೆರವೇರಿತು. ರಥೋತ್ಸವ ಮುಗಿದ ಮೇಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ, ಯುವಕನೊರ್ವ ತಲೆ ಮೇಲೆ ಪಟಾಕಿ ಬಾಕ್ಸ್ ಇಟ್ಟುಕೊಂಡು ಓಡಾಡಿದ್ದಾನೆ.

ಇದನ್ನೂ ಓದಿ: ಗದಗದಲ್ಲಿ ಮುಂದುವರಿದ ಮಹಿಳಾ ಕಬಡ್ಡಿ; ಪುರುಷರು ಫಿದಾ! ವಿಡಿಯೋ ಇಲ್ಲಿದೆ

ಅಂದಹಾಗೆ ಗದಗ ಜಿಲ್ಲೆಯು ಕಳೆದ ಕೆಲವು ದಿನಗಳಿಂದ ಇಂಥ ವಿಡಿಯೋಗಳಿಂದಾಗಿಯೇ ಸುದ್ದಿಯಲ್ಲಿದೆ. ನರೇಗಾ ಅಡಿ ಕೆಲಸ ನಿರ್ವಹಿಸುವ ಮಹಿಳೆಯರು ಸೀರೆಯುಟ್ಟುಕೊಂಡೇ ಕಬಡ್ಡಿ ಆಡಿದ ವಿಡಿಯೋವೊಂದು ಕೆಲವು ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಮತ್ತೆ ಅಂಥದ್ದೇ ಒಂದು ವಿಡಿಯೋ ಸೋಮವಾರ ವೈರಲ್ ಆಗಿದೆ. ಅದರ ಬೆನ್ನಲ್ಲೇ ಯುವಕನ ಪಟಾಕಿ ಹುಚ್ಚಾಟದ ವಿಡಿಯೋ ವೈರಲ್ ಆಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ