Viral Post: ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ, 102 ವರ್ಷ ವಯಸ್ಸಿನ ಅಜ್ಜಿಯನ್ನು ವರಿಸಿದ 100ರ ಅಜ್ಜ 

ಪ್ರೀತಿ ಯಾವಾಗ ಹುಟ್ಟುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದೇ ರೀತಿ ಪ್ರೀತಿ ಕುರುಡು ಎಂಬ ಮಾತನ್ನು ಪುಷ್ಠೀಕರಿಸುವಂತೆ ಅಮೇರಿಕಾದ ವೃದ್ಧರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸಿ ಮದುವೆಯಾಗುವ ಮೂಲಕ  ಇಳಿ ವಯಸ್ಸಿನಲ್ಲಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್ ವೈರಲ್ ಆಗುತ್ತಿದೆ. 

Viral Post: ವೃದ್ಧಾಶ್ರಮದಲ್ಲಿ ಅರಳಿದ ಪ್ರೀತಿ, 102 ವರ್ಷ ವಯಸ್ಸಿನ ಅಜ್ಜಿಯನ್ನು ವರಿಸಿದ 100ರ ಅಜ್ಜ 
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:May 27, 2024 | 11:51 AM

ಪ್ರೀತಿ ಕುರುಡು. ಪ್ರೀತಿಗೆ ಜಾತಿ, ಅಂತಸ್ತು, ವಯಸ್ಸಿನ ಮಿತಿ ಇಲ್ಲ ಎಂಬ ಮಾತಿದೆ. ಯಾವ ವಯಸ್ಸಿನಲ್ಲಿ ಬೇಕಾದ್ರೂ ಮನುಷ್ಯ ಪ್ರೀತಿಯಲ್ಲಿ ಬೀಳಬಹುದು, ಮದುವೆ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ. ಅದೇ ರೀತಿ ಪ್ರೀತಿ ಮತ್ತು ಮದುವೆಗೆ ವಯಸ್ಸಿನ  ಮಿತಿಯಿಲ್ಲ ಎಂಬುದನ್ನು ಇಲ್ಲೊಂದು ಜೋಡಿ ಮತ್ತೆ ಸಾಬೀತುಪಡಿಸಿದೆ. ಹೌದು 102 ವರ್ಷದ ಮಾರ್ಜೋರಿ ಫುಟರ್‌ಮ್ಯಾನ್‌ 100 ವರ್ಷ ವಯಸ್ಸಿನ ಬರ್ನಿ ಲಿಟ್‌ಮ್ಯಾನ್‌ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಮಾಧ್ಯಮ ವರದಿಗಳ ಪ್ರಕಾರ, ಈ ಅಪರೂಪದ ಘಟನೆ ಅಮೇರಿಕಾದ ಪೆನ್ಸಿಲ್ವೇನಿಯಾದಲ್ಲಿ ನಡೆದಿದ್ದು, ಇಲ್ಲಿನ ನಿವಾಸಿಗಳಾದಂತಹ 102 ವರ್ಷದ ಮಾರ್ಜೋರಿ ಫುಟರ್‌ಮ್ಯಾನ್‌ 100 ವರ್ಷ ವಯಸ್ಸಿನ ಬರ್ನಿ ಲಿಟ್‌ಮ್ಯಾನ್‌ ಅವರನ್ನು ಮದುವೆಯಾಗಿದ್ದಾರೆ. ಕಳೆದ 9 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಹಿರಿ ಜೋಡಿ ಕುಟುಂಬಸ್ಥರ ಸಮ್ಮುಖದಲ್ಲಿ ವೃದ್ಧಾಶ್ರಮದಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.

ಮಾರ್ಜೋರಿ ಮತ್ತು ಬರ್ನಿ ಲಿಟ್‌ಮ್ಯಾನ್‌ ಒಂದೇ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದು, ಕಳೆದ 9 ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದಾರೆ. ನಂತರ ಇವರ ಪ್ರೀತಿಯ ಬಗ್ಗೆ ಕುಟುಂಬಸ್ಥರ ಬಳಿ ತಿಳಿಸಿದಾಗ ಇಬ್ಬರ ಕುಟುಂಬಸ್ಥರು ಸಂತೋಷದಿಂದ ಮದುವೆ ಮಾಡಿಕೊಡಲು ಒಪ್ಪಿಗೆ ನೀಡಿದ್ದಾರೆ.  “ತನ್ನ ಅಜ್ಜ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾದ ನಮಗೆಲ್ಲರಿಗೂ ಆಶ್ಚರ್ಯವಾಯಿತು ಜೊತೆಜೊತೆಗೆ ತುಂಬಾ  ಖುಷಿಯೂ ಆಯಿತು” ಎಂದು ಲಿಟ್‌ಮ್ಯಾನ್‌ ಮೊಮ್ಮಗಳು ಸಾರಾ ಲಿಟ್‌ಮನ್‌ ಹೇಳಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೊಡಿ:

View this post on Instagram

A post shared by Pubity (@pubity)

ಮಾರ್ಜೋರಿ ಮತ್ತು ಬರ್ನಿ ಲಿಟ್‌ಮನ್‌ ಇವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು,  ಕುಟುಂಬಸ್ಥರೆಲ್ಲರೂ ಸೇರಿ ಮೇ 19 ರಂದು ಕಾನೂನುಬದ್ಧವಾಗಿ ಹಿರಿ ಜೋಡಿಗೆ ಅದ್ಧೂರಿಯಾಗಿ ಮದುವೆ ಮಾಡಿದ್ದಾರೆ.

ಇದನ್ನೂ ಓದಿ: IPL ಫೈನಲ್ ಪಂದ್ಯದಲ್ಲಿ ಕ್ಯಾಮೆರಾಮ್ಯಾನ್ ಆಗಿ ಗಮನ ಸೆಳೆದ ನಟ ಸೋನು ಸೂದ್

ಈ ಕುರಿತ ಪೋಸ್ಟ್‌ ಒಂದನ್ನು @pubity ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ನೆಟ್ಟಿಗರು ನವ ಜೋಡಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.

Published On - 11:51 am, Mon, 27 May 24

ತಾಜಾ ಸುದ್ದಿ
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಹಾಲಿನ ದರ ಹೆಚ್ಚಳ ಮಾಡಿದ್ದು ಸರ್ಕಾರವಲ್ಲ, ಕೆಎಂಎಫ್ ಎಂದಿದ್ದ ಸಿಎಂ ಉಲ್ಟಾ!
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಚುನಾಯಿತ ಜನಪ್ರತಿನಿಧಿ ಎಲ್ಲ ಸಮುದಾಯಳಿಗಾಗಿ ದುಡಿಯಬೇಕು: ಪ್ರಿಯಾಂಕ್ ಖರ್ಗೆ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೂರು ಡಿಸಿಎಂ ಬೇಡಿಕೆ ಈಗಿನ ಡಿಸಿಎಂಗೆ ಮೂಗುದಾರ ಹಾಕುವ ಹುನ್ನಾರ: ಸಿಟಿ ರವಿ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
ಮೈಸೂರಲ್ಲಿಂದು ಬೆಳ್ಳಂಬೆಳಗ್ಗೆಯೇ ಮಳೆ, ಮಕ್ಕಳನ್ನು ಶಾಲೆಗೆ ಕಳಿಸಲು ತಾಪತ್ರಯ
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Horoscope: ನಿಶ್ಚಿತವಾದ ವಿವಾಹವು ಅನ್ಯರಿಂದ ತಪ್ಪಿಹೋಗಬಹುದು
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
Daily Devotional: ಬ್ರಾಹ್ಮೀ ಮುಹೂರ್ತದ ಮಹತ್ವ ತಿಳಿದುಕೊಳ್ಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
‘ಎಲ್ಲರಿಗೂ ಹೊಟ್ಟೆ ಉರಿ ಸರ್​’: ದರ್ಶನ್​ ನೋಡಲು ಬಂದ ಅಭಿಮಾನಿಯ ಮಾತು ಕೇಳಿ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಬಲವಾದ ಕಾರಣ ನೀಡಿ ದರ್ಶನ್​ ಭೇಟಿಗೆ ಬಂದ ಫ್ಯಾನ್ಸ್; ಆದರೆ ಸಿಗಲಿಲ್ಲ ಅವಕಾಶ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ
ಕಬಾಬ್​ಗೆ ಕಲರ್​ ಬಳಸಿದ್ರೆ 7 ವರ್ಷ ಜೈಲು, 10 ಲಕ್ಷ ರೂ.ದಂಡ