ಚಿಂದ್ವಾರ ಅಕ್ಟೋಬರ್ 28: ರಾಹುಲ್ ಗಾಂಧಿ (Rahul Gandhi) ಮತ್ತು ಪ್ರಿಯಾಂಕಾ ಗಾಂಧಿ (Priyanka Gandhi) ಅವರ ಬೇರುಗಳು ಇಟಲಿಯಿಂದ ಬಂದಿವೆಯೇ ಹೊರತು ಭಾರತದಿಂದಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಹೇಳಿದ್ದಾರೆ. ಶನಿವಾರ ಮಧ್ಯಪ್ರದೇಶದ ಚಿಂದ್ವಾರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, “ಎಲ್ಲೆಡೆ ಜನರು ಭಾರತದ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ದೇಶವನ್ನು ಹೊಗಳಲಾಗುತ್ತಿದೆ. ಕಳೆದ ಒಂಬತ್ತು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ಮಟ್ಟದ್ದಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.
ಕಾಂಗ್ರೆಸ್‌ಗೆ ಸಕಾರಾತ್ಮಕ ಸಂಗತಿಗಳು ಕಾಣಿಸುತ್ತಿಲ್ಲ. ಈ ಸಹೋದರ ಮತ್ತು ಸಹೋದರಿ (ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ) ದೇಶಾದ್ಯಂತ ತಿರುಗಾಡುತ್ತಲೇ ಇರುತ್ತಾರೆ ಮತ್ತು ಏನಾಯಿತು ಎಂದು ಕೇಳುತ್ತಲೇ ಇರುತ್ತಾರೆ. ಅವರಿಗೆ ಅರ್ಥವಾಗುವುದಿಲ್ಲ ಏಕೆಂದರೆ ಅವರ ಬೇರುಗಳು ಇಟಲಿಯಿಂದ ಬಂದವು ಭಾರತದಿಂದಲ್ಲ ಎಂದು ಹೇಳಿದ್ದಾರೆ.
#WATCH | Chhindwara, MP: Union Home Minister Amit Shah says, “…Congress never sees anything positive, this brother and sister (Rahul Gandhi and Priyanka Gandhi) keep roaming across the country and keep asking, what happened…well they won’t understand because their roots are… pic.twitter.com/MGh1z0QVVf
— ANI (@ANI) October 28, 2023
ಕಾಂಗ್ರೆಸ್ ರಾಮಮಂದಿರ ನಿರ್ಮಾಣವನ್ನು ನಿಲ್ಲಿಸಿ ಅಡ್ಡಿಪಡಿಸುತ್ತಿತ್ತು. 2019 ರಲ್ಲಿ, ಮಧ್ಯಪ್ರದೇಶದ ಜನರು ಇಷ್ಟೊಂದು ಸ್ಥಾನಗಳನ್ನು ನೀಡಿ ಎರಡನೇ ಬಾರಿಗೆ ಮೋದಿಯನ್ನು ಪ್ರಧಾನಿ ಮಾಡಿದರು, ಅವರು ಮೌನವಾಗಿ ಹೋಗಿ ರಾಮಮಂದಿರದ ಶಂಕುಸ್ಥಾಪನೆ ಮಾಡಿದರು ಜನವರಿಯಲ್ಲಿ ಅಲ್ಲಿ ಭಗವಾನ್ ರಾಮನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತದೆ ಎಂದು ಗೃಹ ಸಚಿವರು ಹೇಳಿದ್ದಾರೆ.
ಮಧ್ಯಪ್ರದೇಶದ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಅವರ ಭದ್ರಕೋಟೆಯಾದ ಚಿಂದ್ವಾರಾದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಶಾ, ಕಮಲ್ ನಾಥ್ ಮತ್ತು ದಿಗ್ವಿಜಯ ಸಿಂಗ್ ಬೆಂಬಲಿಗರು ಪರಸ್ಪರರ ಬಟ್ಟೆಯನ್ನು ಹರಿದು ಹಾಕಲು ಸಿದ್ಧರಾಗಿದ್ದಾರೆ. ಅಂತಹ ಪಕ್ಷವು ಒಗ್ಗಟ್ಟಿಲ್ಲ. ‘ಕುಟುಂಬ’ಕ್ಕಾಗಿ ರಾಜಕೀಯ ಮಾಡುವುದರಿಂದ ಮಧ್ಯಪ್ರದೇಶದಲ್ಲಿ ಪ್ರಗತಿ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಬಾರದು: ಮೌಲಾನಾ ಮಹಮೂದ್ ಮದನಿ
ಬಿಜೆಪಿ ಮಧ್ಯಪ್ರದೇಶದಲ್ಲಿ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದು, ನವೆಂಬರ್ 17 ರಂದು ತನ್ನ 230 ಸದಸ್ಯರ ವಿಧಾನಸಭೆಯನ್ನು ಆಯ್ಕೆ ಮಾಡಲು ಇಲ್ಲಿ ಚುನಾವಣೆ ನಡೆಯಲಿದೆ. 2018 ರ ಚುನಾವಣೆಯಲ್ಲಿ ಬಿಜೆಪಿ 109 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ, ಕಾಂಗ್ರೆಸ್ 114 ಸ್ಥಾನಗಳನ್ನು ಗೆದ್ದ ನಂತರ ಕಮಲ್ ನಾಥ್ ನೇತೃತ್ವದಲ್ಲಿ ಸರ್ಕಾರವನ್ನು ರಚಿಸಿತು. ಆದಾಗ್ಯೂ, ಆರು ಸಚಿವರು ಸೇರಿದಂತೆ 23 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ ನಂತರ ನಾಥ್ 2020 ರಲ್ಲಿ ರಾಜೀನಾಮೆ ನೀಡಬೇಕಾಯಿತು. ಕಾಂಗ್ರೆಸ್ ಸರ್ಕಾರ ಪತನಗೊಂಡ ನಂತರ ಮತ್ತೊಮ್ಮೆ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಿತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:23 pm, Sat, 28 October 23