ಇಂದು ಮಣಿಪುರ ವಿಧಾನಸಭಾ ಚುನಾವಣೆ (Manipur Assembly Election 2022)ಮೊದಲ ಹಂತದ ಮತದಾನ ನಡೆಯುತ್ತಿದೆ. ಪೂರ್ವ ಇಂಫಾಲ್, ಪಶ್ಚಿಮ ಇಂಫಾಲ್, ಬಿಷ್ಣುಪುರ, ಚುರ್ಚಾಂದ್ಪುರ, ಕಾಂಗೋಪ್ಕಿ ಜಿಲ್ಲೆಗಳ 38 ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದ್ದು, 173 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯದಲ್ಲಿ ಒಟ್ಟಾರೆ 60 ವಿಧಾನಸಭಾ ಕ್ಷೇತ್ರಗಳಿದ್ದು, ಉಳಿದ ಕ್ಷೇತ್ರಗಳಲ್ಲಿ ಮಾರ್ಚ್ 5ರಂದು ಮತದಾನವಿದೆ. ಮಾರ್ಚ್ 10ಕ್ಕೆ ಮತ ಎಣಿಕೆ ನಡೆಯಲಿದೆ.
ಇಂದು 12,09,439 ಮತದಾರರು ಮತ ಹಾಕಲಿದ್ದು, ಅದರಲ್ಲಿ 5,80,607 ಪುರುಷರು, 6,28,657 ಮಹಿಳೆಯರು, 125 ತೃತೀಯಲಿಂಗಿಗಳು ಇದ್ದಾರೆ. 38 ಕ್ಷೇತ್ರಗಳಿಂದ 1721 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಎಂದು ಮಣಿಪುರ ಮುಖ್ಯ ಚುನಾವಣಾಧಿಕಾರಿ ರಾಜೇಶ್ ಅಗರ್ವಾಲ್ ತಿಳಿಸಿದ್ದಾರೆ. ಮತದಾನ ಬೆಳಗ್ಗೆ 7ಗಂಟೆಯಿಂದ ಶುರುವಾಗಿದ್ದು ಸಂಜೆ 4ರವರೆಗೆ ನಡೆಯಲಿದೆ. ಕೊರೊನಾ ಸೋಂಕು ತಗುಲಿ ಕ್ವಾರಂಟೈನ್ನಲ್ಲಿ ಇರುವವರೂ ಮತಗಟ್ಟೆಗೆ ಬಂದು ಮತ ಹಾಕಬಹುದು. ಆದರೆ ಇವರಿಗೆ ಮಧ್ಯಾಹ್ನ 3ರಿಂದ 4ಗಂಟೆವರೆಗೆ ಅವಕಾಶ ನೀಡಲಾಗಿದೆ.
1721ಮತಕೇಂದ್ರಗಳಲ್ಲಿ 381 ಮತಗಟ್ಟೆಗಳ ಉಸ್ತುವಾರಿ ಸಂಪೂರ್ಣ ಮಹಿಳೆಯರದ್ದೇ ಆಗಿದೆ. ಅಂದರೆ ಅಲ್ಲಿ ಎಲ್ಲ ಅಧಿಕಾರಿಗಳೂ ಮಹಿಳೆಯರೇ ಆಗಿದ್ದಾರೆ. ಇನ್ನು ಸೈಕೋಟ್ ಎಂಬ ಮತಗಟ್ಟೆಯನ್ನು ವಿಕಲಚೇತನರೇ ನಿರ್ವಹಣೆ ಮಾಡುತ್ತಿದ್ದಾರೆ. ಇಂದು ಚುನಾವಣೆ ಎದುರಿಸುತ್ತಿರುವ ಪ್ರಮುಖರ ಪೈಕಿ ಮಣಿಪುರ ಸಿಎಂ ಎನ್.ಬಿರೆನ್ ಸಿಂಗ್ (ಹೈಜಾಂಗ್), ವಿಧಾನಸಭೆ ಸ್ಪೀಕರ್ ವೈ. ಖೇಮ್ಚಾಂದ್ ಸಿಂಗ್ (ಸಿಂಗ್ಜಾಮೇಯ್) ಉಪ ಮುಖ್ಯಮಂತ್ರಿ ಯಮ್ನಮ್ ಜಾಯ್ಕುಮಾರ್ ಸಿಂಗ್ (ಉರಿಪೊಕ್), ಕಾಂಗ್ರೆಸ್ ಮಣಿಪುರ ರಾಜ್ಯ ಮುಖ್ಯಸ್ಥ ಎನ್. ಲೋಕೇಶ್ (ನಾಂಬೋಲ್) ಇದ್ದಾರೆ. ಮಣಿಪುರ ಚುನಾವಣೆ ನಿಮಿತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ಪ್ರಧಾನಿ ಮೋದಿ ಟ್ವೀಟ್
ಸಾಮಾನ್ಯವಾಗಿ ಎಲ್ಲ ಚುನಾವಣೆಗೂ ಪೂರ್ವ ಪ್ರಧಾನಮಂತ್ರಿ ನರೇಂದ್ರ ಮೋದಿ ಮಣಿಪುರ ವಿಧಾನಸಭೆ ಚುನಾವಣೆಗೂ ಪೂರ್ವ ಟ್ವೀಟ್ ಮಾಡಿ, ಹೆಚ್ಚೆಚ್ಚು ಜನರು ಮತ ಚಲಾಯಿಸಲು ಕರೆ ನೀಡಿದ್ದಾರೆ. ಅದರಲ್ಲೂ ಯುವಜನರು ಮತ್ತು ಮೊದಲ ಬಾರಿಗೆ ಮತ ಹಾಕುತ್ತಿರುವವರು ತಪ್ಪದೆ ಮತಚಲಾಯಿಸಿ ಎಂದು ಹೇಳಿದ್ದಾರೆ.
Urging all those voting today in the first phase of the Manipur Assembly elections to turnout in record numbers and cast their vote. I particularly call upon the young and first time voters to exercise their franchise.
— Narendra Modi (@narendramodi) February 28, 2022
ಇದನ್ನೂ ಓದಿ: Juice Therapy: ಯಾವ ಕಾಯಿಲೆಗೆ ಯಾವ ಜೂಸ್ ಕುಡಿದರೆ ಉತ್ತಮ, ಇಲ್ಲಿದೆ ಜೂಸ್ ಥೆರಪಿ