
ಇದು 2023 ರ ಈಶಾನ್ಯ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಮುಂದುವರಿದಿದ್ದು, ಬಹುತೇಕ ಫಲಿತಾಂಶಗಳು ಪ್ರಕಟವಾಗಿವೆ. ತ್ರಿಪುರಾ, ಮೇಘಾಲಯ ಮತ್ತು ನಾಗಾಲ್ಯಾಂಡ್ (Nagaland) ಆಡಳಿತಾರೂಢ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (NDPP) ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತಿರುವುದರಿಂದ ತೀವ್ರ ಕುತೂಹಲ ಕೆರಳಿಸಿದೆ. ನಾಗಾಲ್ಯಾಂಡ್ ಸಚಿವ ತೆಮ್ಜೆನ್ ಇಮ್ನಾ ಅಲಾಂಗ್ (Temjen Imna Along) ತಮ್ಮ ಹಾಸ್ಯದ ಮಾತುಗಳಿಂದ ಜನ ಪ್ರೀತಿ ಗಳಿಸಿದವರು. ಅವರ ಟ್ವೀಟ್ ಗಳು ಲವಲವಿಕೆಯಿಂದ ಕೂಡಿರುತ್ತವೆ. ನಾಗಾಲ್ಯಾಂಡ್ ಚುನಾವಣೆಯಲ್ಲಿ ಗೆದ್ದ ನಂತರ ಅಲಾಂಗ್ ಬಾಲಿವುಡ್ ಡೈಲಾಗ್ ಜತೆ ತಮ್ಮ ಫೋಟೊವೊಂದನ್ನು ಶೇರ್ ಮಾಡಿ ಗೆಲುವಿನ ಖುಷಿ ಹಂಚಿಕೊಂಡಿದ್ದಾರೆ.
हार कर जीतने वाले को ………….. कहते हैं! pic.twitter.com/nMKqRaKNOM
— Temjen Imna Along (@AlongImna) March 2, 2023
ನಾಗಾಲ್ಯಾಂಡ್‌ನ ಅಲೋಂಗ್ಟಾಕಿ ಕ್ಷೇತ್ರದಿಂದ ತೇಮ್ಜೆನ್ ಇಮ್ನಾ ಅಲೋಂಗ್ ಗೆದ್ದಿದ್ದಾರೆ. ಮತ ಎಣಿಕೆ ಆರಂಭವಾಗುತ್ತಿದ್ದಂತೆ ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟ ರಾಜ್ಯದಲ್ಲಿ ಪ್ರಬಲ ಮುನ್ನಡೆ ಕಾಯ್ದುಕೊಂಡಿದೆ. ಒಮ್ಮೆ ಹಿನ್ನಡೆಯಾಗಿ ಮತ್ತೆ ಗೆಲುವಿನ ನಗೆ ಬೀರಿದ ಅಲಾಂಗ್, ಹಾರ್ ಕೇ ಜೀತ್ನೇವಾಲೋಂಕೋ …..ಕೆಹ್ತೆ ಹೈ ಎಂದು ನಾಗಾಲ್ಯಾಂಡ್ ನ ಸಾಂಪ್ರದಾಯಿಕ ಉಡುಗೆ ತೊಟ್ಟಿರುವ ಅವರ ಫೋಟೊವನ್ನು ಟ್ವೀಟ್ ಮಾಡಿದ್ದಾರೆ. ಶಾರುಖ್ ಖಾನ್-ಕಾಜೋಲ್ ನಟಿಸಿದ ಸೂಪರ್ ಹಿಟ್ ಬಾಲಿವುಡ್ ಚಿತ್ರ ಬಾಜಿಗರ್ನ ಡೈಲಾಗ್ ನ್ನು ಅಲಾಂಗ್ ಇಲ್ಲಿ ಬಳಸಿದ್ದಾರೆ.ಸಿನಿಮಾದಲ್ಲಿ ಶಾರುಖ್ ಖಾನ್, ಹಾರ್ ಕೇ ಜೀತ್ನೇವಾಲೋಂಕೋ ಬಾಜೀಗರ್ ಕೆಹ್ತೇ ಹೈ ಎಂದು ಹೇಳುತ್ತಾರೆ.
ಪೋಸ್ಟ್ ಈಗಾಗಲೇ 31.4 ಲೈಕ್ ಮತ್ತು 1,724 ಬಾರಿ ರೀಟ್ವೀಟ್ ಆಗಿದೆ,. ನಾಗಾಲ್ಯಾಂಡ್‌ನಲ್ಲಿ ಸೋಮವಾರ (ಫೆಬ್ರವರಿ 27) ಮತದಾನ ನಡೆದಿದೆ. ಬಿಜೆಪಿ-ಎನ್‌ಡಿಪಿಪಿ ಮೈತ್ರಿಕೂಟವು ಸ್ಥಾನಗಳಲ್ಲಿ ಗಣನೀಯ ಮುನ್ನಡೆಯೊಂದಿಗೆ ಆರಾಮದಾಯಕ ಗೆಲುವಿಗೆ ಸಿದ್ಧವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:55 pm, Thu, 2 March 23