ಈಗ ಈಶಾನ್ಯ ರಾಜ್ಯಗಳು ದಿಲ್ಲಿಯಿಂದ ಅಥವಾ ಹೃದಯದಿಂದ ದೂರವಿಲ್ಲ: ಪ್ರಧಾನಿ ಮೋದಿ

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಇನ್ನೂ ಗಟ್ಟಿಯಾಗಿ ನಿಂತಿವೆ ಮತ್ತು ಈ ಸಂಸ್ಥೆಗಳಲ್ಲಿ ಜನರ ನಂಬಿಕೆಗಳು ಗಟ್ಟಿಯಾಗಿವೆ ಎಂಬುದನ್ನು ಇಂದಿನ ಫಲಿತಾಂಶಗಳು ತೋರಿಸುತ್ತವೆ.

ಈಗ ಈಶಾನ್ಯ ರಾಜ್ಯಗಳು ದಿಲ್ಲಿಯಿಂದ ಅಥವಾ ಹೃದಯದಿಂದ ದೂರವಿಲ್ಲ: ಪ್ರಧಾನಿ ಮೋದಿ
ನರೇಂದ್ರ ಮೋದಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 02, 2023 | 9:26 PM

ತ್ರಿಪುರಾ (Tripura), ನಾಗಾಲ್ಯಾಂಡ್ (Nagaland) ಮತ್ತು ಮೇಘಾಲಯ (Meghalaya) ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದ ನಂತರ ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರನ್ನುದ್ದೇಶಿಸಿ ಮಾತನಾಡಿದ್ದಾರೆ. ನಾನು ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯದ ಜನರಿಗೆ ನಮಸ್ಕರಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ. ಈ ರಾಜ್ಯಗಳ ಜನತೆ ಬಿಜೆಪಿಗೆ ಆಶೀರ್ವಾದ ಮಾಡಿದ್ದಾರೆ. ನಾನು 3 ರಾಜ್ಯಗಳ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ.

ಭಾರತದಲ್ಲಿ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ಇನ್ನೂ ಗಟ್ಟಿಯಾಗಿ ನಿಂತಿವೆ ಮತ್ತು ಈ ಸಂಸ್ಥೆಗಳಲ್ಲಿ ಜನರ ನಂಬಿಕೆಗಳು ಗಟ್ಟಿಯಾಗಿವೆ ಎಂಬುದನ್ನು ಇಂದಿನ ಫಲಿತಾಂಶಗಳು ತೋರಿಸುತ್ತವೆ. ಜನರು ಈಶಾನ್ಯದಲ್ಲಿ ಚುನಾವಣೆ ಅಥವಾ ಚುನಾವಣಾ ಫಲಿತಾಂಶಗಳ ಬಗ್ಗೆ ಅಷ್ಟೇನೂ ಕೇಳುತ್ತಿರಲಿಲ್ಲ. ಜನರು ಈಶಾನ್ಯಕ್ಕೆ ಸಂಬಂಧಿಸಿದಂತೆ ಹಿಂಸಾಚಾರ ಮತ್ತು ದಿಗ್ಬಂಧನದ ಬಗ್ಗೆ ಮಾತ್ರ ಮಾತನಾಡುತ್ತಿದ್ದರು. ಇಂದು ನಾನು ಟಿವಿ ವೀಕ್ಷಿಸಲು ಸಾಧ್ಯವಾದಾಗಲೆಲ್ಲಾ, ನಾನು ಈಶಾನ್ಯದ ಫಲಿತಾಂಶಗಳನ್ನು ನೋಡಿದೆ … ಇದು ಹೃದಯಗಳ ನಡುವಿನ ಕಡಿಮೆ ಅಂತರದ ಪರಿಣಾಮವಲ್ಲ ಆದರೆ ಹೊಸ ಸಿದ್ಧಾಂತದ ಪ್ರತಿಬಿಂಬವಾಗಿದೆ. ಈಗ ಈಶಾನ್ಯ ದೆಹಲಿಯಿಂದ ಅಥವಾ ಹೃದಯದಿಂದ ದೂರವಿಲ್ಲ ಎಂದು ಅವರು ಹೇಳಿದ್ದಾರೆ.

ಮೋದಿ ಭಾಷಣದ ಮುಖ್ಯಾಂಶಗಳು

  1. ಇಂದಿನ ಚುನಾವಣಾ ಫಲಿತಾಂಶ ದೂರದ ಸಂದೇಶ ರವಾನಿಸಿದೆ. ಈಶಾನ್ಯ ಚುನಾವಣೆಯ ಸುದ್ದಿ ಇಲ್ಲದ ಕಾಲವಿತ್ತು, ಜನರು ಪ್ರತಿಸ್ಪರ್ಧಿ ಪಕ್ಷಗಳ ಧ್ವಜವನ್ನು ಬಳಸಲು ಹೆದರುತ್ತಿದ್ದರು.ಈಶಾನ್ಯ ದೆಹಲಿ ಮತ್ತು ನಮ್ಮ ಹೃದಯದಿಂದ ದೂರವಿಲ್ಲ. ಇದು ಇತಿಹಾಸವನ್ನು ಮತ್ತೆ ಬರೆಯುವ ಸಮಯ. ಚುನಾವಣಾ ಹಿಂಸಾಚಾರ ಮತ್ತು ಉಗ್ರಗಾಮಿತ್ವದ ವಿಷಯದಲ್ಲಿ ಜನರು ಈಶಾನ್ಯದ ಬಗ್ಗೆ ಮಾತ್ರ ತಿಳಿದಿರುವ ಕಾಲವಿತ್ತು.
  2. ಈಶಾನ್ಯ ರಾಜ್ಯಗಳಿಗೆ ಇತರರಷ್ಟೇ ಪ್ರಾಮುಖ್ಯತೆ ಇದೆ, ನಮ್ಮ ಪ್ರತಿಸ್ಪರ್ಧಿಗಳಿಗೆ ಬಿಜೆಪಿ ಚುನಾವಣೆಗಳನ್ನು ಹೇಗೆ ಗೆಲ್ಲುತ್ತದೆ ಎಂದು ಯೋಚಿಸಿ ಹೊಟ್ಟೆ ನೋವು ಬರುತ್ತದೆ.
  3. ನಮ್ಮ ಯಶಸ್ಸಿನ ಗುಟ್ಟು ತ್ರಿವೇಣಿ- ಬಿಜೆಪಿ ಸರ್ಕಾರದ ಕೆಲಸ, ಅವರ ಕಾರ್ಯಶೈಲಿ ಮತ್ತು ಬಿಜೆಪಿ ಕಾರ್ಯಕರ್ತರ ಸೇವೆಯಲ್ಲಿ ಅಡಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
  4. ಏಳು ದಶಕಗಳು ಕಳೆದರೂ ಈಶಾನ್ಯದಲ್ಲಿ ವಿದ್ಯುತ್ ಇರಲಿಲ್ಲ. ಹಿಂದಿನ ಸರಕಾರಗಳಿಗೆ ಗ್ಯಾಸ್ ಸಂಪರ್ಕ, ಪಕ್ಕಾ ಮನೆ ಮತ್ತಿತರ ಸೌಲಭ್ಯಗಳು ಆದ್ಯತೆ ನೀಡಿರಲಿಲ್ಲ. ಈಶಾನ್ಯದಲ್ಲಿ ರೈಲ್ವೆ, ವಿಮಾನ ನಿಲ್ದಾಣಗಳನ್ನು ಕಠಿಣ ಕಾರ್ಯವೆಂದು ಪರಿಗಣಿಸಲಾಗಿದೆ, ಆದರೆ ನಮ್ಮ ಪ್ರಯತ್ನಗಳು ಫಲ ನೀಡಿವೆ.
  5. ನಮ್ಮ ಸರ್ಕಾರ ಮತ್ತು ಜನರು ಏಕಕಾಲದಲ್ಲಿ ಬಡತನದ ವಿರುದ್ಧ ಹೋರಾಡುತ್ತಿದ್ದಾರೆ.
  6. ಚುನಾವಣೆಯಲ್ಲಿ ಪಕ್ಷಕ್ಕೆ ಯಶಸ್ಸು ತಂದುಕೊಟ್ಟ ಬಿಜೆಪಿ ಕಾರ್ಯಕರ್ತರಿಗೆ ಧನ್ಯವಾದ.
  7. ನಮ್ಮ ಪಕ್ಷದ ಕಾರ್ಯಕರ್ತರು ದೇಶ ಮತ್ತು ಪಕ್ಷಕ್ಕೆ ಕೀರ್ತಿ ತರುವುದರಲ್ಲಿ ಯಾವತ್ತೂ ಆಯಾಸಗೊಳ್ಳುವುದಿಲ್ಲ. ಬಿಜೆಪಿ ಕಾರ್ಯಕರ್ತರಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ.
  8. ತ್ರಿಪುರಾದ ಮಹಿಳೆಯರು ಮತ್ತು ಹೆಣ್ಣುಮಕ್ಕಳು ಬಿಜೆಪಿಯನ್ನು ಪೂರ್ಣ ಹೃದಯದಿಂದ ಬೆಂಬಲಿಸಿದ್ದಾರೆ. ನಾಗಾಲ್ಯಾಂಡ್‌ನಲ್ಲಿ ಮಹಿಳೆಯೊಬ್ಬರು ಮೊದಲ ಬಾರಿಗೆ ವಿಧಾನಸಭೆಗೆ ಆಗಮಿಸಿದ್ದಾರೆ.
  9. ಈಶಾನ್ಯ ಭಾಗದ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಬಿಜೆಪಿಯಲ್ಲಿ ನಂಬಿಕೆ ಹೆಚ್ಚುತ್ತಿದೆ ಏಕೆಂದರೆ ಅವರು ನಮ್ಮ ಯೋಜನೆಗಳಿಂದ ಲಾಭ ಪಡೆಯುತ್ತಿದ್ದಾರೆ.
  10. ಮೋದಿ ಸಮಾಧಿಯನ್ನು ಅಗೆಯಲು ಕೆಲವರು ಬಯಸಿದ ನಂತರವೂ ಕಮಲ ಅರಳುತ್ತಿದೆ.ಪ್ರತಿಸ್ಪರ್ಧಿಗಳು ಮರ್ ಜಾ ಮೋದಿ, (ಮೋದಿ ಸಾಯಲಿ ಅಂತಾರೆ), ಆದರೆ ಜನರು ‘ಮತ್ ಜಾ ಮೋದಿ’ (ಮೋದಿ ಹೋಗಬೇಡಿ) ಎಂದು ಹೇಳುತ್ತಿದ್ದಾರೆ.
  11. ಕಾಂಗ್ರೆಸ್ ಯಾವಾಗಲೂ ಈಶಾನ್ಯ ರಾಜ್ಯಗಳನ್ನು ಚಿಕ್ಕ ರಾಜ್ಯಗಳು ಎಂದು ಕಡೆಗಣಿಸುತ್ತಿತ್ತು. ಪಕ್ಷ ಯಾವಾಗಲೂ ವೋಟ್ ಬ್ಯಾಂಕ್ ರಾಜಕಾರಣದತ್ತ ಗಮನ ಹರಿಸಿದೆ.
  12. ಸಣ್ಣ ರಾಜ್ಯಗಳ ಬಗ್ಗೆ ನಿಮ್ಮ (ಕಾಂಗ್ರೆಸ್) ದ್ವೇಷವು ಪಕ್ಷವನ್ನು ನಾಶಪಡಿಸುತ್ತದೆ. ಬಿಜೆಪಿಯನ್ನು ಬನಿಯಾ ಪಕ್ಷ, ಮಧ್ಯಮ ವರ್ಗದ ಪಕ್ಷ ಎಂದು ಕರೆಯಲಾಗುತ್ತಿತ್ತು, ಆದರೆ ನಾವು ಆ ದೃಷ್ಟಿಕೋನವನ್ನು ಮುರಿದಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
  13. ಆದಿವಾಸಿಗಳು ಬಿಜೆಪಿಗೆ ಹೇಗೆ ಮತ ಹಾಕಿದರು ಎಂಬುದನ್ನು ನಾವು ಗುಜರಾತ್ ಚುನಾವಣೆಯಲ್ಲಿ ನೋಡಿದ್ದೇವೆ. ಅಲ್ಪಸಂಖ್ಯಾತರನ್ನು ಬಿಜೆಪಿ ಬಗ್ಗೆ ಹೆದರಿಸಲಾಯಿತು, ಆದರೆ ನಾವು ಆ ಮಿಥ್ಯೆಯನ್ನೂ ಭೇದಿಸಿದ್ದೇವೆ.
  14. ಬಹುಸಂಖ್ಯಾತ ಕ್ರೈಸ್ತರಿರುವ ನಾಗಾಲ್ಯಾಂಡ್ ಬಿಜೆಪಿಯಲ್ಲಿ ನಂಬಿಕೆ ಇಟ್ಟಿದೆ.
  15. ಮುಂದೊಂದು ದಿನ ನಾವೂ (ಬಿಜೆಪಿ) ಕೇರಳದಲ್ಲಿ ಮೈತ್ರಿ ಸರ್ಕಾರ ರಚಿಸಬಹುದು

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:52 pm, Thu, 2 March 23

‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
‘ಪಿನಾಕ’ ಸಿನಿಮಾಗೆ ಪವರ್​ಫುಲ್ ಡೈಲಾಗ್ ಬರೆದ ರಘುಗೆ ಗಣೇಶ್​ ಮೆಚ್ಚುಗೆ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ