ಚಂಡೀಗಢ: ಬಾಲಿವುಡ್ ನಟ ಸೋನು ಸೂದ್ (Sonu Sood) ಅವರ ಸಹೋದರಿ ಮಾಳವಿಕಾ ಸೂದ್(Malvika Sood) ಸೋಮವಾರ ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ಮತ್ತು ಪಕ್ಷದ ಪಂಜಾಬ್ ಘಟಕದ ಮುಖ್ಯಸ್ಥ ನವಜೋತ್ ಸಿಂಗ್ ಸಿಧು(Navjot Singh Sidhu) ಅವರ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರಿದರು. ಪಂಜಾಬ್‌ನ ಮೋಗಾ ಜಿಲ್ಲೆಯ ಸೂದ್ ನಿವಾಸದಲ್ಲಿ ಮಾಳವಿಕಾ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಮಾಳವಿಕಾ ಪ್ರವೇಶವನ್ನು ಚನ್ನಿ ಶ್ಲಾಘಿಸಿದ್ದು, ಫೆಬ್ರವರಿ 14 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಈ ಬೆಳವಣಿಗೆಯನ್ನು “ಗೇಮ್ ಚೇಂಜರ್” ಎಂದು ಸಿಧು ಬಣ್ಣಿಸಿದ್ದಾರೆ. “ಪಕ್ಷದ ಮುಖ್ಯಸ್ಥರು ಮತ್ತು ಮುಖ್ಯಮಂತ್ರಿ ಇಬ್ಬರೂ ಒಬ್ಬರ ಮನೆಗೆ ಗೌರವ ನೀಡಲು ಹೋಗಿದ್ದು ಬಹಳ ಅಪರೂಪ. ಅವರು ಅದಕ್ಕೆ ಅರ್ಹರು” ಎಂದು ಸಿಧು ಹೇಳಿದರು. ಮಾಳವಿಕಾ ಅವರು ಮೋಗಾ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುವರೇ ಎಂಬ ಪ್ರಶ್ನೆಗೆ, ಚನ್ನಿ ಅವರೇ ಪಕ್ಷದ ಆಯ್ಕೆ ಎಂದು ಸೂಚಿಸಿದರು.
There is no permanent name and fame than the endeavour to give happiness to mankind !! Chairs don’t grace people but people grace those chairs … Proud to be associated with one of the greatest Philanthropist of our times, The Party feels proud to have them onboard @SonuSood pic.twitter.com/hdNqLOUbbn
— Navjot Singh Sidhu (@sherryontopp) January 10, 2022
“ಸೋನು ಸೂದ್ ಮಾನವೀಯತೆ ಮತ್ತು ದಯೆಗಾಗಿ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದಾರೆ ಮತ್ತು ಇಂದು ಆ ಕುಟುಂಬದ ಸದಸ್ಯರೊಬ್ಬರು ನಮ್ಮೊಂದಿಗೆ ಸೇರುತ್ತಿದ್ದಾರೆ. ಇಂತಹ ಒಳ್ಳೆಯ ಕುಟುಂಬದವರು ನಮ್ಮ ಪಕ್ಷಕ್ಕೆ ಬರುತ್ತಿರುವುದು ಅದೃಷ್ಟದ ಸಂಗತಿ. ಅವರು ವಿದ್ಯಾವಂತ ಮಹಿಳೆ,” ಎಂದು ಚನ್ನಿ ಹೇಳಿದರು.
ಎನ್‌ಜಿಒ ನಡೆಸುವ ಮೂಲಕ ಹೆಸರು ಗಳಿಸಿ ಜನಸೇವೆಗೆ ಮುಡಿಪಾಗಿಟ್ಟ ಯುವತಿಯೊಬ್ಬರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ನಮಗೆ ಅತ್ಯಂತ ಸಂತಸದ ವಿಷಯ ಎಂದು ಸಿಧು ಮಾಳವಿಕಾ ಅವರನ್ನು ಕಾಂಗ್ರೆಸ್‌ಗೆ ಸ್ವಾಗತಿಸಿದರು.
ಮೋಗಾ ಮೂಲದ ಸೋನು ಸೂದ್, ತನ್ನ ಸಹೋದರಿ ಈ ಹಿಂದೆ ಸಾಕಷ್ಟು “ಅದ್ಭುತ” ಕೆಲಸ ಮಾಡಿದ್ದಾರೆ ಎಂದು ಹೇಳಿದ್ದರು. ನಟ ಕಳೆದ ವರ್ಷ ನವೆಂಬರ್‌ನಲ್ಲಿ ತನ್ನ ಸಹೋದರಿ ರಾಜಕೀಯಕ್ಕೆ ಸೇರುವುದಾಗಿ ಹೇಳಿದ್ದರು.
ಸೋನು ಸೂದ್ ಮಾನವೀಯ ಕಾರ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಎಂದು ಸಿಧು ಮತ್ತು ಚನ್ನಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.
ಮಾಳವಿಕಾ ಸೂದ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗುತ್ತಿರುವುದನ್ನು ಉಲ್ಲೇಖಿಸಿದ ಸಿಧು, “ಕ್ರಿಕೆಟ್ ಜಗತ್ತಿನಲ್ಲಿ ಇದನ್ನು ಗೇಮ್ ಚೇಂಜರ್ ಎಂದು ಕರೆಯಲಾಗುತ್ತದೆ. ಅವರು ಯುವ ಮತ್ತು ವಿದ್ಯಾವಂತ ಮಹಿಳೆ, ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಅವರ ಶಿಕ್ಷಣ ಮುಂದಿನ ಜೀವನದಲ್ಲಿ ಸಹಾಯ ಮಾಡುತ್ತದೆ” ಎಂದು ಸಿಧು ಹೇಳಿದರು. ಜನಸೇವೆಗಾಗಿ ತನ್ನನ್ನು ಸಮರ್ಪಿಸಿಕೊಳ್ಳಲು ರಾಜಕೀಯಕ್ಕೆ ಬಂದಿದ್ದೇನೆ ಎಂದು ಮಾಳವಿಕಾ ಹೇಳಿದ್ದಾರೆ.
ಇದನ್ನೂ ಓದಿ: ಶೇ 5-10 ಕೊವಿಡ್ ಪ್ರಕರಣಗಳಿಗೆ ಆಸ್ಪತ್ರೆ ಅಗತ್ಯವಿರುತ್ತದೆ, ಈ ಪರಿಸ್ಥಿತಿ ಬಹಳ ವೇಗವಾಗಿ ಬದಲಾಗಬಹುದು: ರಾಜೇಶ್ ಭೂಷಣ್