Rajasthan Election 2023 Results: ರಾಜಸ್ಥಾನದಲ್ಲಿ ಕೇಸರಿ ಅಲೆಯಲ್ಲಿ ಮರೆಯಾದ ಕಾಂಗ್ರೆಸ್; ಬಿಜೆಪಿಗೆ ಭರ್ಜರಿ ಗೆಲುವು; ಮುಂದಿನ ಸಿಎಂ ಯಾರು?

|

Updated on: Dec 03, 2023 | 6:48 PM

BJP Wins Rajasthan: ರಾಜಸ್ಥಾನದಲ್ಲಿ ಬಿಜೆಪಿ ನಾಲ್ಕನೇ ಬಾರಿ ಅಧಿಕಾರ ಹಿಡಿದಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷ ಸೋಲನುಭವಿಸಿದೆ. 199 ಸದಸ್ಯ ಬಲದ ರಾಜಸ್ಥಾನ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ 100 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ದಾಟಿದೆ. ಈಗ ರಾಜಸ್ಥಾನದಲ್ಲಿ ಮುಂದಿನ ಸಿಎಂ ಯಾರು ಎಂಬುದು ಪ್ರಶ್ನೆಯಾಗಿದ್ದು, ಬಾಬಾ ಬಾಲಕನಾಥ್ ಮತ್ತು ವಸುಂಧರಾ ರಾಜೆ ಹೆಸರು ಪ್ರಧಾನವಾಗಿ ಕೇಳಿಬರುತ್ತಿದೆ.

Rajasthan Election 2023 Results: ರಾಜಸ್ಥಾನದಲ್ಲಿ ಕೇಸರಿ ಅಲೆಯಲ್ಲಿ ಮರೆಯಾದ ಕಾಂಗ್ರೆಸ್; ಬಿಜೆಪಿಗೆ ಭರ್ಜರಿ ಗೆಲುವು; ಮುಂದಿನ ಸಿಎಂ ಯಾರು?
ಬಿಜೆಪಿ
Follow us on

ಜೈಪುರ್, ಡಿಸೆಂಬರ್ 3: ಸಿಎಂ ಅಶೋಕ್ ಗೆಹ್ಲೋತ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ರಾಜಸ್ಥಾನದಲ್ಲಿ (Rajasthan Assembly Elections 2023) ಸತತ ಎರಡನೇ ಅವಧಿಗೆ ಅಧಿಕಾರ ಹಿಡಿಯುವ ಪ್ರಯತ್ನ ವಿಫಲವಾಗಿದೆ. ಬಿಜೆಪಿ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಕಂಬ್ಯಾಕ್ ಮಾಡಿದೆ. 199 ಕ್ಷೇತ್ರಗಳ ಪೈಕಿ ಬಿಜೆಪಿ 115 ಸ್ಥಾನಗಳಲ್ಲಿ ಗೆದ್ದಿದೆ. ಬಹುಮತಕ್ಕೆ ಬೇಕಾದ 100 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ದಾಟಿದೆ. ಇನ್ನೊಂದೆಡೆ ಕಾಂಗ್ರೆಸ್ ಪಕ್ಷ 69 ಸ್ಥಾನಕ್ಕೆ ತೃಪ್ತಿಪಡಬೇಕಿದೆ.

ಈ ಫಲಿತಾಂಶದೊಂದಿಗೆ ರಾಜಸ್ಥಾನದಲ್ಲಿ ಕಳೆದ ಮೂರು ದಶಕಗಳ ಪರಂಪರೆ ಮುಂದುವರಿದಂತಾಗಿದೆ. 1993ರಿಂದೀಚೆ ಆ ರಾಜ್ಯದಲ್ಲಿ ಯಾವ ಪಕ್ಷವೂ ಸತತ ಎರಡನೇ ಅವಧಿಗೆ ಅಧಿಕಾರ ಹಿಡಿದಿಲ್ಲ. 1977 ಅನ್ನು ಹೊರತುಪಡಿಸಿ 1952ರಿಂದ 1990ರವರೆಗೂ ರಾಜಸ್ಥಾನದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದದ್ದು. 1993ರಲ್ಲಿ ಬಿಜೆಪಿ ಈ ಭದ್ರಕೋಟೆಯನ್ನು ಛಿದ್ರ ಮಾಡಿತು. ಆಗಿನಿಂದಲೂ ಅಲ್ಲಿನ ಮತದಾರರು ಪ್ರತೀ ಚುನಾವಣೆಯಲ್ಲಿ ಆಡಳಿತಪಕ್ಷವನ್ನು ಬದಲಿಸುತ್ತಾ ಬಂದಿದ್ದಾರೆ. ಈ ಪರಂಪರೆ ಈ ಚುನಾವಣೆಯಲ್ಲೂ ಮುಂದುವರಿದಿದೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ಹೊರದಬ್ಬಿ ಬಿಜೆಪಿಗೆ ಆಡಳಿತದ ಅವಕಾಶ ಕೊಟ್ಟಿದೆ.

ಇದನ್ನೂ ಓದಿ: ರಾಜಸ್ಥಾನದಲ್ಲಿ ಬಹುಮತದತ್ತ ಬಿಜೆಪಿ; ಯಾರಾಗ್ತಾರೆ ಸಿಎಂ? ಅತಂತ್ರವಾದರೆ ವಸುಂಧರಾ, ಬಹುಮತ ಬಂದರೆ ಬಾಲಕನಾಥ್ ಸಿಎಂ?

ರಾಜಸ್ಥಾನ ಚುನಾವಣಾ ಫಲಿತಾಂಶ 2023:

ಒಟ್ಟು ಸ್ಥಾನಗಳು: 199
ಬಹುಮತಕ್ಕೆ: 100

ಬಿಜೆಪಿ: 115
ಕಾಂಗ್ರೆಸ್: 69
ಭಾರತ್ ಆದಿವಾಸಿ ಪಕ್ಷ: 3
ಬಹುಜನ ಸಮಾಜ ಪಕ್ಷ: 2
ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷ: 1
ರಾಷ್ಟ್ರೀಯ ಲೋಕದಳ (ಆರ್​ಎಲ್​ಡಿ): 1
ಪಕ್ಷೇತರ: 8

ರಾಜಸ್ಥಾನದ ಮುಂದಿನ ಸಿಎಂ ಯಾರು?

ರಾಜಸ್ಥಾನದಲ್ಲಿ ಮತಗಟ್ಟೆ ಸಮೀಕ್ಷೆಗಳು ಬಿಜೆಪಿ ಗೆಲುವನ್ನು ಸೂಚಿಸುತ್ತಿದ್ದಾಗಲೇ ಆ ಪಕ್ಷದಿಂದ ಸಿಎಂ ಆಗುವ ಸಂಭವನೀಯ ವ್ಯಕ್ತಿಗಳು ಯಾರೆಂದು ವಿವಿಧ ಸುದ್ದಿಗಳು ಹರಿದಾಡುತ್ತಲೇ ಇವೆ.

  • ವಸುಂಧರಾ ರಾಜೆ
  • ಮಹಂತ್ ಬಾಲಕನಾಥ್
  • ರಾಜಕುಮಾರಿ ದಿಯಾ ಕುಮಾರಿ,
  • ಭೂಪೇಂದರ್ ಯಾದವ್, ಕೇಂದ್ರ ಸಚಿವ
  • ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ
  • ಓಂ ಬಿರ್ಲಾ, ಲೋಕಸಭಾ ಸ್ಪೀಕರ್

ಇದನ್ನೂ ಓದಿ: ರಾಜಸ್ಥಾನದ ಸಿಎಂ ಸ್ಥಾನದ ರೇಸ್​ನ ಮುಂಚೂಣಿಯಲ್ಲಿ ಮಹಂತ್ ಬಾಲಕನಾಥ್; ಯುಪಿ ಯೋಗಿಗೂ ಇವರಿಗೂ ಏನು ಸಂಬಂಧ?

ಈ ಆರು ಹೆಸರು ಪೈಕಿ ಪ್ರಧಾನವಾದುದು ವಸುಂಧರಾ ರಾಜೆ ಮತ್ತು ಮಹಂತ್ ಬಾಲಕ್ ನಾಥ್ ಹೆಸರು. ವಸುಂಧರಾ ರಾಜೇ ಸಿಂಧ್ಯ ಎರಡು ಬಾರಿ ಸಿಎಂ ಆದವರು. ಆದರೆ, ಕಳೆದ ಕೆಲ ವರ್ಷಗಳಿಂದ ಕೇಂದ್ರ ನಾಯಕರ ವಿಶ್ವಾಸ ಉಳಿಸಿಕೊಂಡಿಲ್ಲ. ಇನ್ನು, ನಾಥ ಪರಂಪರೆಯ ಮಸ್ತ್​ನಾಥ್ ಮಠದ ಮಹಂತ್ ಬಾಲಕ್​ನಾಥ್ ಅವರು ಮುಂದಿನ ಸಿಎಂ ಆಗಬಹುದು ಎನ್ನಲಾಗುತ್ತಿದೆ. ಇವರು ಆಲ್ವಾರ್ ಕ್ಷೇತ್ರದ ಸಂಸದರಾಗಿದ್ದು, ವಿಧಾನಸಭೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದಾರೆ. ಬಿಜೆಪಿ ಬಹುಮತ ಬಂದರೆ ಇವರೇ ಸಿಎಂ ಆಗಬಹುದು ಎನ್ನಲಾಗುತ್ತಿತ್ತು. ಈಗ ನಿರೀಕ್ಷೆಯಂತೆ ಬಿಜೆಪಿ ಬಹುಮತ ಬಂದಿದ್ದು, ಬಾಲಕನಾಥ್ ಮುಖ್ಯಮಂತ್ರಿ ಆಗುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ