ನಾನು ಬಿಡಲು ಬಯಸಿದರೂ ಮುಖ್ಯಮಂತ್ರಿ ಸ್ಥಾನ ನನ್ನನ್ನು ಬಿಡುತ್ತಿಲ್ಲ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್

|

Updated on: Oct 19, 2023 | 8:53 PM

Rajasthan CM Ashok Gehlot: ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಮಹಿಳಾ ಬೆಂಬಲಿಗರೊಬ್ಬರು ತಾವು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ನಾನು, ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಬಯಸುತ್ತೇನೆ, ಆದರೆ ಈ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಉತ್ತರಿಸಿದೆ ಎಂದಿದ್ದಾರೆ.

ನಾನು ಬಿಡಲು ಬಯಸಿದರೂ ಮುಖ್ಯಮಂತ್ರಿ ಸ್ಥಾನ ನನ್ನನ್ನು ಬಿಡುತ್ತಿಲ್ಲ: ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್
ಅಶೋಕ್ ಗೆಹ್ಲೋಟ್
Follow us on

ಜೈಪುರ ಅಕ್ಟೋಬರ್ 19: ಸಚಿನ್ ಪೈಲಟ್ (Sachin Pilot) ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ ರಾಜಸ್ಥಾನ (Rajasthan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ನಾನು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಲು ಬಯಸುತ್ತಿದ್ದೇನೆ, ಆದರೆ “ಆ ಹುದ್ದೆಯು ನನ್ನನ್ನು ಹೋಗಲು ಬಿಡುವುದಿಲ್ಲ” ಎಂದು ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮವನ್ನುದ್ದೇಶಿಸಿ ಮಾತನಾಡಿದ ಗೆಹ್ಲೋಟ್, ಮಹಿಳಾ ಬೆಂಬಲಿಗರೊಬ್ಬರು ತಾವು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ನಾನು, ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಬಯಸುತ್ತೇನೆ, ಆದರೆ ಈ ಹುದ್ದೆಯು ನನ್ನನ್ನು ಹೋಗಲು ಬಿಡುತ್ತಿಲ್ಲ ಎಂದು ಉತ್ತರಿಸಿದೆ ಎಂದಿದ್ದಾರೆ.

ಗೆಹ್ಲೋಟ್ ಮತ್ತು ಅವರ ಮಾಜಿ ಡೆಪ್ಯೂಟಿ ಪೈಲಟ್ ನೇತೃತ್ವದ ಬಣಗಳ ನಡುವಿನ ರಾಜಸ್ಥಾನ ಕಾಂಗ್ರೆಸ್‌ನೊಳಗಿನ ಜಗಳದ ಹಿನ್ನೆಲೆಯಲ್ಲಿ ಈ ರೀತಿ ಹೇಳಿಕೆಗಳು ಮಹತ್ವದ್ದಾಗಿವೆ. ಪೈಲಟ್ ನೇತೃತ್ವದ ದಂಗೆಯು 2020 ರಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬಹುತೇಕ ಉರುಳಿಸಿತು, ಆದರೆ ಅಲ್ಲಿ ಹೈಕಮಾಂಡ್ ಕಾಪಾಡಿತು,.

ನನ್ನಲ್ಲಿ ಏನಾದರೂ ಇರಬೇಕು, ಅದಕ್ಕಾಗಿಯೇ ಪಕ್ಷದ ಹೈಕಮಾಂಡ್ ಅವರನ್ನು ರಾಜ್ಯವನ್ನು ಮುನ್ನಡೆಸಲು ಮೂರು ಬಾರಿ ಆಯ್ಕೆ ಮಾಡಿದೆ. ಆದರೆ, ಹೈಕಮಾಂಡ್ ತೆಗೆದುಕೊಳ್ಳುವ ಯಾವುದೇ ನಿರ್ಧಾರ ಎಲ್ಲರಿಗೂ ಒಪ್ಪಿಗೆಯಾಗುತ್ತದೆ ಎಂದು ಗೆಹ್ಲೋಟ್ ಹೇಳಿದ್ದಾರೆ.

ನಿರ್ಣಾಯಕ ನವೆಂಬರ್ 25 ರ ಚುನಾವಣೆಯ ಪೂರ್ವದಲ್ಲಿ, ಎರಡೂ ಬಣಗಳು ಒಗ್ಗಟ್ಟಾಗಿ ನಿಲ್ಲಲು ಯತ್ನಿಸುತ್ತಿದ್ದರೂ ಆಗಾಗ ಇಂಥಾ ಹೇಳಿಕೆಗಳ ಮೂಲಕ ಎಲ್ಲವೂ ಸರಿ ಇಲ್ಲ ಎಂಬುದನ್ನು ತೋರಿಸುತ್ತಲೇ ಇರುತ್ತಾರೆ.

ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲು ವಿಳಂಬ ಮಾಡುತ್ತಿರುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಪಕ್ಷ ಬಿಜೆಪಿ ಮಾತ್ರ ಅದರ ಬಗ್ಗೆ ಚಿಂತಿಸುತ್ತಿದೆ. “ನಾವು ಹೋರಾಟ ಮಾಡದ ಕಾರಣ ಅವರು ಅಸಮಾಧಾನಗೊಂಡಿದ್ದಾರೆ. ಎಲ್ಲರ ಅಭಿಪ್ರಾಯಗಳನ್ನು ಪರಿಗಣಿಸಿ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ನಾನು ಸಚಿನ್ ಪೈಲಟ್ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದೇನೆ, ಅವರ ಪರವಾಗಿ ತೀರ್ಮಾನಿಸುತ್ತಿದ್ದೇನೆ. ನಿರ್ಧಾರಗಳನ್ನು ಸುಗಮವಾಗಿ ತೆಗೆದುಕೊಳ್ಳುತ್ತಿದ್ದೇನೆ. ಆದ್ದರಿಂದ ಬಿಜೆಪಿಗೆ ಮಾತ್ರ ಸಂತೋಷ ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ಯಾಲೆಸ್ತೀನ್ ಅಧ್ಯಕ್ಷರೊಂದಿಗೆ ಮೋದಿ ಮಾತು; ಗಾಜಾ ಆಸ್ಪತ್ರೆ ದಾಳಿಯಲ್ಲಿ ಸಾವಿಗೀಡಾದವರಿಗೆ ಸಂತಾಪ

ಪಕ್ಷವು ತನ್ನ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸಬಹುದೇ ಎಂಬ ಬಗ್ಗೆ, ಪಕ್ಷವು ಉತ್ತಮ ಪರ್ಯಾಯಗಳನ್ನು ಕಂಡುಕೊಂಡರೆ ಖಂಡಿತವಾಗಿಯೂ ಅಭ್ಯರ್ಥಿಗಳನ್ನು ಬದಲಾಯಿಸುತ್ತದೆ ಎಂದು ಹೇಳಿದರು.  ಪೈಲಟ್ ಪಾಳಯದಿಂದ ಟಿಕೆಟ್ ಆಕಾಂಕ್ಷಿಗಳ ನಿರೀಕ್ಷೆಯ ಕುರಿತು, ಪಕ್ಷದೊಳಗೆ ಯಾವುದೇ ಬಿರುಕು ಇಲ್ಲ ಮತ್ತು “ಕ್ಷಮಿಸಿ ಮತ್ತು ಮರೆತುಬಿಡಿ” ಮಂತ್ರವನ್ನು ಅನುಸರಿಸುತ್ತೇನೆ ಎಂದು ಹೇಳಿದರು.
ಆದಾಗ್ಯೂ, ರಾಜಸ್ಥಾನದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಪೈಲಟ್ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ