ನಟಿ, ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಟ್ವೀಟ್, ತೆಲಂಗಾಣ ಬಿಜೆಪಿಯಲ್ಲಿ ಸಂಚಲನ

ಬಿಆರ್‌ಎಸ್ ನಾಯಕ, ಸಿಎಂ ಕೆ ಚಂದ್ರಶೇಖರ ರಾವ್​ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯಶಾಂತಿ ಕಾಮಾರೆಡ್ಡಿಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಪರೋಕ್ಷವಾಗಿ ಬಿಜೆಪಿ ವರಿಷ್ಠರಿಗೆ ಮನವಿ ಮಾಡಿದ್ದಾರೆ.

ನಟಿ, ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಟ್ವೀಟ್, ತೆಲಂಗಾಣ ಬಿಜೆಪಿಯಲ್ಲಿ ಸಂಚಲನ
ನಟಿ ವಿಜಯಶಾಂತಿ ಟ್ವೀಟ್, ತೆಲಂಗಾಣ ಬಿಜೆಪಿಯಲ್ಲಿ ಅಲ್ಲೋಲಕಲ್ಲೋಲ
Follow us
ಸಾಧು ಶ್ರೀನಾಥ್​
|

Updated on:Oct 19, 2023 | 2:33 PM

ತೆಲಂಗಾಣದಲ್ಲಿ ಅಧಿಕಾರಕ್ಕೆ ಬರುವ ಗುರಿಯೊಂದಿಗೆ ಭಾರತೀಯ ಜನತಾ ಪಕ್ಷವು ರಾಜಕೀಯ ನಡೆಗಳನ್ನು ನಡೆಸುತ್ತಿದೆ. ಚುನಾವಣಾ ಸಮಯ ಸಮೀಪಿಸುತ್ತಿದ್ದಂತೆ ಬಿಜೆಪಿ ಕಚೇರಿಯಲ್ಲಿ ಮೊದಲ ಪಟ್ಟಿ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ವೇಳೆ ಬಿಜೆಪಿ ಹಿರಿಯ ನಾಯಕಿ ವಿಜಯಶಾಂತಿ ಮುಂದಿಟ್ಟಿರುವ ಹೊಸ ಪ್ರಸ್ತಾವನೆಗಳು ತೆಲಂಗಾಣದಾದ್ಯಂತ ಸಂಚಲನ ಮೂಡಿಸಿವೆ. ಈ ನಿಟ್ಟಿನಲ್ಲಿ ವಿಜಯಶಾಂತಿ ಟ್ವೀಟ್ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸುತ್ತಿದೆ.

ಕೆಲ ದಿನಗಳಿಂದ ಬಿಜೆಪಿಯಲ್ಲಿದ್ದರೂ ವಿಜಯಶಾಂತಿ ಅತಿಥಿ ಪಾತ್ರದಲ್ಲಿ ಮಾತ್ರವೇ ಕಾಣಿಸಿಕೊಂಡಿದ್ದಾರೆ. ಪಕ್ಷದ ಮುಖ್ಯಸ್ಥರು ಅವರಿಗೆ ಜವಾಬ್ದಾರಿಗಳನ್ನು ವಹಿಸಿದ್ದರೂ, ತಾನು ಅದನ್ನು ಪೂರ್ಣ ಪ್ರಮಾಣದಲ್ಲಿ ನಿರ್ವಹಿಸುತ್ತಿದ್ದೇನಾ ಎಂಬುದು ಅವರಿಗೇ ತಿಳಿಯಬೇಕು. ಆದರೆ ಆಗಾಗ್ಗೆ ತಮ್ಮ ಸೆನ್ಸೇಷನಲ್ ಟ್ವೀಟ್‌ಗಳಿಂದ ಸುದ್ದಿಯಾಗುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಈ ಮಧ್ಯೆ, ಮತ್ತೊಮ್ಮೆ ತಮ್ಮ ಎಂದಿನ ಶೈಲಿಯಲ್ಲಿ ಟ್ವೀಟ್ ಮಾಡುವ ಮೂಲಕ ಸುದ್ದಿ ಮಾಡಿದ್ದಾರೆ.

ಒಂದು ರೀತಿಯಲ್ಲಿ, ಮುಖ್ಯಮಂತ್ರಿ ಕೆಸಿಆರ್ ವಿರುದ್ಧದ ಸ್ಪರ್ಧೆಗೆ ತಮ್ಮ ಹೆಸರನ್ನು ಪರಿಗಣಿಸಬೇಕು ಎಂದು ಪರೋಕ್ಷವಾಗಿ ಬಿಜೆಪಿ ವರಿಷ್ಠರಿಗೆ ಹೇಳುವಂತಿದೆ ಆ ಟ್ವೀಟ್ ನ ಸಾರಾಂಶ. ಕೇವಲ ತನ್ನ ವಿಷಯವನ್ನಷ್ಟೇ ಹೇಳಿದಂತಿಲ್ಲ ಅವರು. ಬಂಡಿ ಸಂಜಯ್ ಅವರನ್ನು ಕೂಡ ಈ ವಿಚಾರವಾಗಿ ಹೊಸ ಚರ್ಚೆಗೆ ಎಳೆ ತಂದಿದ್ದಾರೆ.

ಬಿಆರ್‌ಎಸ್ ನಾಯಕ, ಸಿಎಂ ಕೆ ಚಂದ್ರಶೇಖರ ರಾವ್​ ಈ ಬಾರಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಎಂದಿನಂತೆ ಗಜವೇಲ್ ಕ್ಷೇತ್ರದ ಜತೆಗೆ ಕಾಮಾರೆಡ್ಡಿ ಕ್ಷೇತ್ರದಿಂದಲೂ ಈ ಬಾರಿ ಕಣಕ್ಕೆ ಇಳಿಯಲು ಪ್ಲಾನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವಿಜಯಶಾಂತಿ ಕಾಮಾರೆಡ್ಡಿಯಿಂದ ಸ್ಪರ್ಧಿಸಲು ಅವಕಾಶ ನೀಡುವಂತೆ ಪರೋಕ್ಷವಾಗಿ ಬಿಜೆಪಿ ವರಿಷ್ಠರಿಗೆ ಶಾಂತಿ ಮನವಿ ಮಾಡಿದ್ದಾರೆ.

Also Read: ರಾಹುಲ್​ ಬಾಬಾ ಪಕ್ಷವು ನನ್ನ ರಾಯಲ್ ಎನ್‌ಫೀಲ್ಡ್‌ನಲ್ಲಿ ಇರುವಷ್ಟು ಸೀಟು ಕೂಡ ತೆಲಂಗಾಣದಲ್ಲಿ ಗೆಲ್ಲುವುದಿಲ್ಲ ಎಂದು ಪಂಚ್ ಕೊಟ್ಟ ಅಸಾದುದ್ದೀನ್ ಓವೈಸಿ

ಗಜವೇಲ್ ಕ್ಷೇತ್ರದಿಂದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಂಡಿ ಸಂಜಯ್ ಅವರ ಹೆಸರನ್ನು ಪರಿಶೀಲಿಸುವಂತೆಯೂ ಅವರು ಪರೋಕ್ಷವಾಗಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ. ಆದರೆ ಇದು ಕೇಲವ ತನ್ನ ಅಭಿಪ್ರಾಯವಷ್ಟೇ ಅಲ್ಲ; ತೆಲಂಗಾಣದ ಸರಾಸರಿ ಬಿಜೆಪಿ ಕಾರ್ಯಕರ್ತರು ಇದನ್ನೇ ಹೇಳುತ್ತಿದ್ದಾರೆ ಎಂದಿದ್ದಾರೆ. ಆದರೆ, ತೆಲಂಗಾಣ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಇರಾದೆ ತನಗಿಲ್ಲ ಎಂದು ಈ ಹಿಂದೆ ಹೇಳಿದ್ದ ವಿಜಯಶಾಂತಿ, ವರಿಷ್ಠರು ಕೈಗೊಳ್ಳುವ ಕಾರ್ಯತಂತ್ರದ ನಿರ್ಧಾರಗಳನ್ನು ಖಂಡಿತಾ ಪಾಲಿಸಬೇಕಾಗುತ್ತದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಮತ್ತೊಂದೆಡೆ, ಕೆಲವು ದಿನಗಳಿಂದ ಹುಜೂರಾಬಾದ್ ಶಾಸಕ, ಬಿಜೆಪಿ ಮುಖಂಡ ಈಟಲ ರಾಜೇಂದ್ರ ಅವರು ಗರ್ವೇಲ್‌ನಿಂದ ಕೆಸಿಆರ್ ವಿರುದ್ಧ ಸ್ಪರ್ಧಿಸಲು ತಾನು ಸಿದ್ಧ ಎಂದು ಹೇಳುತ್ತಿದ್ದಾರೆ. ಚುನಾವಣೆ ವೇಳೆ ಹುಜೂರಾಬಾದ್ ಜನರಿಗೆ ಕೆಸಿಆರ್ ಮಾಡಿದ ತೊಂದರೆ ನೋಡಿ ಗಜವೇಲಿಯಲ್ಲಿ ಸ್ಪರ್ಧಿಸಲು ತಾನು ನಿರ್ಧರಿಸಿರುವದಾಗಿ ಅವರು ಹೇಳಿದ್ದಾರೆ.

ನಾನು ಗಜ್ವೇಲ್‌ಗೆ ಹೋಗುವ ಮುನ್ನ ನೂರಾರು ಮುಖಂಡರು, ಸರಪಂಚ್‌ಗಳು, ಮಾಜಿ ಸರಪಂಚ್‌ಗಳು ಬೆಂಬಲ ನೀಡಲು ಮುಂದೆ ಬಂದಿದ್ದರು. ಜನರ ಹೃದಯದಲ್ಲಿ ಕೆಸಿಆರ್ ಇದ್ದಾರೆ. ಸ್ವಾಭಿಮಾನಕ್ಕೆ ಅಭಿವೃದ್ಧಿ ಪರ್ಯಾಯವಲ್ಲ ಎಂದು ಜನರು ಭಾವಿಸುತ್ತಾರೆ ಎಂದು ರಾಜೇಂದ್ರ ಹೇಳಿದರು. ಈ ಹಂತದಲ್ಲಿ ಗಜ್ವೇಲ್‌ನಲ್ಲಿ ಕೆಸಿಆರ್‌ರನ್ನು ಸೋಲಿಸಲು ಈಟಲ ರಾಜೇಂದ್ರ ಮಾನಸಿಕವಾಗಿ ಸಜ್ಜಾಗಿದ್ದಾರೆ. ಕಾರ್ಯಕರ್ತರು ಸಹ ಬಂಡಿ ಸ್ಪರ್ಧೆಗೆ ಆಗ್ರಹಿಸುತ್ತಿದ್ದು, ವಿಜಯಶಾಂತಿ ಟ್ವೀಟ್‌ ಮಾಡಿರುವುದು ಪಕ್ಷದ ಕಾರ್ಯಕರ್ತರಲ್ಲಿ ಹಾಗೂ ರಾಜ್ಯ ನಾಯಕರನ್ನೂ ಚಿಂತೆಗೀಡು ಮಾಡಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:27 pm, Thu, 19 October 23

ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ