ತೆಲಂಗಾಣ ವಿಧಾನಸಭೆ ಚುನಾವಣೆ: ಕಾಂಗ್ರೆಸ್ನ 2ನೇ ಪಟ್ಟಿ ಬಿಡುಗಡೆ; ಜುಬಿಲಿ ಹಿಲ್ಸ್‌ನಿಂದ ಮೊಹಮ್ಮದ್ ಅಜರುದ್ದೀನ್ ಸ್ಪರ್ಧೆ
ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಿಂದ ಮೊಹಮ್ಮದ್ ಅಜರುದ್ದೀನ್ (Mohammed Azharuddin), ಎಲ್ ಬಿ ನಗರ ಕ್ಷೇತ್ರದಿಂದ ಮಧು ಯಾಶ್ಕಿ, ಪಾಲೇರು ಕ್ಷೇತ್ರದಿಂದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಖಮ್ಮಂ ವಿಧಾನಸಭಾ ಕ್ಷೇತ್ರದಿಂದ ತುಮ್ಮಲ ನಾಗೇಶ್ವರ ರಾವ್, ಖೈರತಾಬಾದ್ ಕ್ಷೇತ್ರದಿಂದ ಪಿ ವಿಜಯ ರೆಡ್ಡಿ, ಹುಸ್ನಾಬಾದ್‌ನಿಂದ ಪೊನ್ನಂ ಪ್ರಭಾಕರ್ ಮತ್ತು ಮುನುಗೋಡು ಕ್ಷೇತ್ರದಿಂದ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಸ್ಪರ್ಧಿಸಲಿದ್ದಾರೆ.

ಹೈದರಾಬಾದ್ ಅಕ್ಟೋಬರ್ 27: ತೆಲಂಗಾಣ ಕಾಂಗ್ರೆಸ್ (congress) ನವೆಂಬರ್ 30 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ (Telangana Assembly elections) 45 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ ಎಂದು ಟಿವಿ9 ತೆಲುಗು ವರದಿ ಮಾಡಿದೆ. ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಿಂದ ಮೊಹಮ್ಮದ್ ಅಜರುದ್ದೀನ್ (Mohammed Azharuddin), ಎಲ್ ಬಿ ನಗರ ಕ್ಷೇತ್ರದಿಂದ ಮಧು ಯಾಶ್ಕಿ, ಪಾಲೇರು ಕ್ಷೇತ್ರದಿಂದ ಪೊಂಗುಲೇಟಿ ಶ್ರೀನಿವಾಸ ರೆಡ್ಡಿ, ಖಮ್ಮಂ ವಿಧಾನಸಭಾ ಕ್ಷೇತ್ರದಿಂದ ತುಮ್ಮಲ ನಾಗೇಶ್ವರ ರಾವ್, ಖೈರತಾಬಾದ್ ಕ್ಷೇತ್ರದಿಂದ ಪಿ ವಿಜಯ ರೆಡ್ಡಿ, ಹುಸ್ನಾಬಾದ್‌ನಿಂದ ಪೊನ್ನಂ ಪ್ರಭಾಕರ್ ಮತ್ತು ಮುನುಗೋಡು ಕ್ಷೇತ್ರದಿಂದ ಕೋಮಟಿರೆಡ್ಡಿ ರಾಜ್ ಗೋಪಾಲ್ ರೆಡ್ಡಿ ಸ್ಪರ್ಧಿಸಲಿದ್ದಾರೆ.
ಅಜರುದ್ದೀನ್ ಈ ಹಿಂದೆ ಉತ್ತರ ಪ್ರದೇಶದ ಮೊರಾದಾಬಾದ್ ಕ್ಷೇತ್ರದಿಂದ ಲೋಕಸಭಾ ಸಂಸದರಾಗಿದ್ದರು.ಹಿಂದಿನ ದಿನ ನಡೆದ ಸಭೆಯಲ್ಲಿ ಕಾಂಗ್ರೆಸ್ ನಾಯಕತ್ವವು ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳ ಹೆಸರನ್ನು ಚರ್ಚಿಸಿತು.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ, ಟಿಪಿಸಿಸಿ ಅಧ್ಯಕ್ಷ ರೇವಂತ್ ರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು. ಬುಧವಾರ ತೆಲಂಗಾಣ ಸಿಇಸಿ ಸಭೆಯನ್ನೂ ಕಾಂಗ್ರೆಸ್ ನಡೆಸಿತ್ತು. ಅಕ್ಟೋಬರ್ 15 ರಂದು ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ಸುಮಾರು 55 ಅಭ್ಯರ್ಥಿಗಳನ್ನು ಹೆಸರಿಸಿತ್ತು, ರೇವಂತ್ ರೆಡ್ಡಿ ಕೊಡಂಗಲ್ ಕ್ಷೇತ್ರದಿಂದ ಮತ್ತು ಭಟ್ಟಿ ವಿಕ್ರಮಾರ್ಕ ಮಲ್ಲು ಮಧಿರಾ (ಎಸ್‌ಸಿ) ಕ್ಷೇತ್ರದಿಂದ ಸ್ಪರ್ಧಿಸಿದ್ದರು. ರೇವಂತ್ ರೆಡ್ಡಿ ಅವರು ಮಲ್ಕಾಜ್‌ಗಿರಿ ಕ್ಷೇತ್ರದ ಹಾಲಿ ಲೋಕಸಭಾ ಸಂಸದರಾಗಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ: ಉಚಿತ ಲ್ಯಾಪ್‌ಟಾಪ್, ಎಲ್‌ಪಿಜಿ ಸಬ್ಸಿಡಿ ಸೇರಿದಂತೆ 7 ಗ್ಯಾರಂಟಿ ಭರವಸೆ ಘೋಷಿಸಿದ ಕಾಂಗ್ರೆಸ್
ರಾಜ್ಯದಲ್ಲಿ ಆಡಳಿತಾರೂಢ ಬಿಆರ್‌ಎಸ್ ಪಕ್ಷವನ್ನು ಕಿತ್ತೊಗೆಯಲು ಕಾಂಗ್ರೆಸ್ ಆಶಿಸಿದ್ದು, ಕಳೆದ ಕೆಲವು ದಿನಗಳಿಂದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಅವರಂತಹ ರಾಷ್ಟ್ರೀಯ ನಾಯಕರು ಪ್ರಚಾರ ನಡೆಸುತ್ತಿದ್ದಾರೆ.
ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ