ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದೆ. ಈಗಿರುವ ಮಾಹಿತಿ ಪ್ರಕಾರ ಬಿಆರ್ಎಸ್(BRS)ಗಿಂತ ಕಾಂಗ್ರೆಸ್(Congress) ಮುನ್ನಡೆ ಸಾಧಿಸಿದೆ. ಹೀಗಾಗಿ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ರೇವಂತ್ ರೆಡ್ಡಿ ಮನೆಗೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ದಬ್ಬಾಳಿಕೆ, ದಾಳಿ, ಕೇಸುಗಳಿಗೆ ಹೆದರದೆ ಕಾಂಗ್ರೆಸ್ ಪಕ್ಷದ ಹೋರಾಟದಲ್ಲಿ ನೀವೆಲ್ಲರೂ ನೇರವಾಗಿ, ಅಚಲವಾಗಿ ಜನರ ಪರವಾಗಿ ನಿಂತಿದ್ದೀರಿ. ನಿಮ್ಮ ಶ್ರಮ ವ್ಯರ್ಥವಾಗುವುದಿಲ್ಲೆ ಎಂದಿದ್ದರು.
ತೆಲಂಗಾಣದಲ್ಲಿ ನವೆಂಬರ್ 30ರಂದು 119 ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ರೇವಂತ್ ರೆಡ್ಡಿ ಅವರ ಹುಟ್ಟೂರು ಕೊಡಂಗಲ್‌ನ ಉತ್ಸಾಹಭರಿತ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ ಇಲ್ಲಿನ ಜುಬಿಲಿ ಹಿಲ್ಸ್‌ನ ಸಿಬಿಐ ಕಾಲೋನಿಯಲ್ಲಿರುವ ಅವರ ನಿವಾಸದ ಮುಂದೆ ಜಮಾಯಿಸಿದ್ದಾರೆ.
ಪಕ್ಷದ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಜಮಾಯಿಸಿ ಫಲಿತಾಂಶವನ್ನು ವೀಕ್ಷಿಸುತ್ತಿದ್ದಾರೆ. ಸೋನಿಯಾ ಗಾಂಧಿ, ರೇವಂತ್ ರೆಡ್ಡಿ ಅವರ ಫಲಕಗಳನ್ನು ಹಿಡಿದು ಕಾರ್ಯಕರ್ತರು ಕುಣಿದು ಕುಪ್ಪಳಿಸಿದ್ದಾರೆ.
ರೇವಂತ್ ಸ್ಪರ್ಧಿಸಿರುವ ಕೊಡಂಗಲ್ ಮತ್ತು ಕಾಮರೆಡ್ಡಿ ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಕಾಮರೆಡ್ಡಿ ಕ್ಷೇತ್ರದಲ್ಲಿ ಸಿಎಂ ಕೆ. ಚಂದ್ರಶೇಖರ್ ರಾವ್ ಕೂಡ ಸ್ಪರ್ಧಿಸಿದ್ದು, ಹಿನ್ನಡೆ ಅನುಭವಿಸಿದ್ದಾರೆ.
ಮತ್ತಷ್ಟು ಓದಿ: ತೆಲಂಗಾಣ: ಬಿಆರ್ಎಸ್ಗಿಂತ ಮುನ್ನಡೆ, ಕಾಂಗ್ರೆಸ್ ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಂಭ್ರಮಾಚರಣೆ
ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಹೈದರಾಬಾದ್‌ನಲ್ಲಿದ್ದು ಫಲಿತಾಂಶವನ್ನು ಗಮನಿಸುತ್ತಿದ್ದಾರೆ. ಇದರಿಂದಾಗಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರೆಡ್ಡಿ ಹ್ಯಾಟ್ರಿಕ್ ಗೆಲುವು ಸಾಧಿಸುವ ಕನಸಿಗೆ ತಣ್ಣೀರೆರೆಚಿದಂತಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ