ಹೈದರಾಬಾದ್, ಡಿಸೆಂಬರ್ 03: ತೆಲಂಗಾಣದ ಹಾಲಿ ಸಿಎಂ ಹಾಗೂ ಆಡಳಿತಾರೂಢ ಬಿಆರ್ಎಸ್ ಮುಖ್ಯಸ್ಥ ಕೆ. ಚಂದ್ರಶೇಖರ ರಾವ್, ಮತ್ತೊಬ್ಬ ಎದುರಾಳಿ ಕಾಂಗ್ರೆಸ್ ಅಧ್ಯಕ್ಷ ಎ ರೇವಂತ್ ರೆಡ್ಡಿ ಅವರನ್ನು ತೆಲಂಗಾಣದ ಪ್ರತಿಷ್ಠಿತ ಕಾಮರೆಡ್ಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ (Katipalli Venkata Ramana Reddy) ಅವರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಹಾಲಿ ಮತ್ತು ಭಾವಿ ಸಿಎಂ ಇಬ್ಬರನ್ನೂ ಸೋಲಿಸುವ ಮೂಲಕ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು ರಾಷ್ಟ್ರ ನಾಯಕರ ಗಮನ ಸೆಳೆದಿದ್ದಾರೆ.
ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು 66652 ಮತಗಳನ್ನು ಪಡೆದುಕೊಂಡಿದ್ದು, ಕೆ. ಚಂದ್ರಶೇಖರ ರಾವ್ 59911 ಮತ್ತು ರೇವಂತ್ ರೆಡ್ಡಿ 54916 ಮತಗಳನ್ನು ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಯಾರಾಗಲಿದ್ದಾರೆ ಮಧ್ಯಪ್ರದೇಶ ಸಿಎಂ? ಶಿವರಾಜ್ ಸಿಂಗ್ ಚೌಹಾಣ್ಗೆ ಮತ್ತೆ ಮಣೆ ಹಾಕಿಲಿದೆಯಾ ಬಿಜೆಪಿ
ವೃತ್ತಿಯಲ್ಲಿ ಉದ್ಯಮಿ ಆಗಿರುವ 53 ವರ್ಷದ ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ಅವರು, 12 ನೇ ತರಗತಿ ಪಾಸಾಗಿದ್ದಾರೆ. ಚುನಾವಣಾ ಅಫಿಡವಿಟ್ ಪ್ರಕಾರ ಅವರ ಒಟ್ಟು ಘೋಷಿತ ಆಸ್ತಿ 49.7 ಕೋಟಿ ರೂ.ಗಳಾಗಿದ್ದು, ಇದರಲ್ಲಿ 2.2 ಕೋಟಿ ರೂ. ಚರ ಆಸ್ತಿ ಮತ್ತು 47.5 ಕೋಟಿ ರೂ. ಸ್ಥಿರ ಆಸ್ತಿ ಹೊಂದಿದ್ದಾರೆ. ಅವರ ಒಟ್ಟು ಘೋಷಿತ ಆದಾಯ 9.8 ಲಕ್ಷ ರೂ. ಅದರಲ್ಲಿ 4.9 ಲಕ್ಷ ರೂ. ಸ್ವಯಂ ಆದಾಯವಾಗಿದೆ. ಕಾಟಿಪಲ್ಲಿ ವೆಂಕಟ ರಮಣ ರೆಡ್ಡಿ ವಿರುದ್ಧ 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
2018ರ ವಿಧಾನಸಭಾ ಚುನಾವಣೆಯಲ್ಲಿ, ತೆಲಂಗಾಣ ರಾಷ್ಟ್ರ ಸಮಿತಿಯ ಗಂಪ ಗೋವರ್ಧನ್ ಅವರಿಂದ ಒಟ್ಟು 42% ರಷ್ಟು ಮತಗಳನ್ನು ಪಡೆದುಕೊಳ್ಳುವ ಮೂಲಕ ಕಾಮರೆಡ್ಡಿ ಅವರು ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದಾರು. ಕಾಂಗ್ರೆಸ್ನ ಮೊಹಮ್ಮದ್ ಅಲಿ ಶಬ್ಬೀರ್ ವಿರುದ್ಧ ಶೇ.2ರ ಅಂತರದಿಂದ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಛತ್ತೀಸ್ಗಢ, ಮಧ್ಯಪ್ರದೇಶದ ಸೋಲಿನಿಂದ ನಿರಾಸೆಯಾಗಿದೆ, ತೆಲಂಗಾಣ ಜನತೆಗೆ ಧನ್ಯವಾದ: ಮಲ್ಲಿಕಾರ್ಜುನ ಖರ್ಗೆ
2008ರ ಡಿಲಿಮಿಟೇಶನ್ ಆಯೋಗದ ವರದಿಯ ಪ್ರಕಾರ 2011 ಭಾರತದ ಜನಗಣತಿಯ ಆಧರಿಸಿ ಕಾಮರೆಡ್ಡಿ ಅಸೆಂಬ್ಲಿ ಕ್ಷೇತ್ರವು ಅಂದಾಜು 14.73% ರಷ್ಟು ಪರಿಶಿಷ್ಟ ಜಾತಿ ಜನಸಂಖ್ಯೆ ಮತ್ತು 4.67% ರಷ್ಟು ಪರಿಶಿಷ್ಟ ಪಂಗಡದ ಜನಸಂಖ್ಯೆಯನ್ನು ಹೊಂದಿದೆ.
2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಒಟ್ಟು 2,45,822 ಅರ್ಹ ಮತದಾರರಿದ್ದರು, ಅದರಲ್ಲಿ 1,18,718 ಪುರುಷರು ಮತ್ತು 1,27,080 ಮಹಿಳೆಯರು ಮತ್ತು 24 ನೋಂದಾಯಿತ ಮತದಾರರು ತೃತೀಯಲಿಂಗಿಗಳಾಗಿದ್ದಾರೆ.
ಇನ್ನಷ್ಟು ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ