Video: ಚುನಾವಣೆ ಬರುತ್ತಿದ್ದಂತೆ ಕ್ಷೇತ್ರಕ್ಕೆ ಹೋದ ಬಿಜೆಪಿ ಶಾಸಕನನ್ನು ಬೆನ್ನಟ್ಟಿ ವಾಪಸ್​ ಕಳಿಸಿದ ಹಳ್ಳಿಗರು; ಕೈಕಟ್ಟಿ ನಿಂತು ಬೈಗುಳ ಕೇಳಿದ ಎಂಎಲ್​ಎ

| Updated By: Lakshmi Hegde

Updated on: Jan 20, 2022 | 3:04 PM

ಬಿಜೆಪಿ ಶಾಕಸ ವಿಕ್ರಮ್ ಸೈನಿ ಅವರು 2019ರಲ್ಲಿ ಒಂದು ಪ್ರಚೋದನಾತ್ಮಕ ಹೇಳಿಕೆಯಿಂದ ಸುದ್ದಿ ಮಾಡಿದ್ದರು. ಯಾರೆಲ್ಲ ಭಾರತ ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಾರೋ, ಅವರ ಮೇಲೆ ಬಾಂಬ್ ಹಾಕುತ್ತೇವೆ ಎಂದು ಹೇಳಿದ್ದರು.

Video: ಚುನಾವಣೆ ಬರುತ್ತಿದ್ದಂತೆ ಕ್ಷೇತ್ರಕ್ಕೆ ಹೋದ ಬಿಜೆಪಿ ಶಾಸಕನನ್ನು ಬೆನ್ನಟ್ಟಿ ವಾಪಸ್​ ಕಳಿಸಿದ ಹಳ್ಳಿಗರು; ಕೈಕಟ್ಟಿ ನಿಂತು ಬೈಗುಳ ಕೇಳಿದ ಎಂಎಲ್​ಎ
ಬಿಜೆಪಿ ಶಾಸಕ ವಿಕ್ರಮ್ ಸಿಂಗ್ ಸೈನಿ
Follow us on

ಲಖನೌ: ಉತ್ತರಪ್ರದೇಶ ವಿಧಾನಸಭೆ ಚುನಾವಣೆ (Uttar Pradesh Assembly Election 2022) ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ತಮ್ಮ ವಿಧಾನಸಭಾ ಕ್ಷೇತ್ರಕ್ಕೆ ಹೋದ ಬಿಜೆಪಿ ಶಾಸಕ (BJP MLA)ನನ್ನು ಸ್ಥಳೀಯರು ಬೆನ್ನಟ್ಟಿ ಹೋಗಿ ಅಲ್ಲಿಂದ ಓಡಿಸಿದ್ದಾರೆ. ಅಂದಹಾಗೆ ಘಟನೆ ನಡೆದದ್ದು ಮುಜಾಫರ್​ನಗರದಲ್ಲಿ. ಮುಜಾಫರ್​ನಗರದ ಖಟೌಲಿ ಶಾಸಕ ವಿಕ್ರಮ್​ ಸಿಂಗ್ ಸೈನಿ, ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಳ್ಳಿಯೊಂದರಲ್ಲಿ ಪ್ರಚಾರ ಸಭೆ ನಡೆಸಲು ಹೋಗಿದ್ದರು. ಆದರೆ ಅವರನ್ನು ನೋಡುತ್ತಿದ್ದಂತೆ ಹಳ್ಳಿ ಜನರು ಸಿಕ್ಕಾಪಟೆ ಆಕ್ರೋಶಗೊಂಡಿದ್ದಾರೆ. ಅವರನ್ನು ಅಲ್ಲಿಂದ ಓಡಿಹೋಗುವಂತೆ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗುತ್ತಿದೆ. 

ಸೈನಿ ಕಾರು ನಿಲ್ಲಿಸಿ ಕೆಳಗೆ ಇಳಿಯುತ್ತಿದ್ದಂತೆ ಹಳ್ಳಿಗರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಮಹಿಳೆಯರೂ ಸೇರಿ ಅನೇಕರು ಅವರನ್ನು ನೋಡುತ್ತಿದ್ದಂತೆ ಬಿಜೆಪಿ ವಿರೋಧಿ ಘೋಷಣೆಗಳನ್ನು ಕೂಗಲು ಶುರು ಮಾಡಿದ್ದಾರೆ. ವಿವಾದಿತ ಕೃಷಿ ಕಾಯ್ದೆ (ಅದನ್ನೀಗ ಕೇಂದ್ರ ಸರ್ಕಾರ ವಾಪಸ್ ಪಡೆದಿದೆ) ವಿಚಾರವನ್ನು ಎತ್ತಿ ಕೂಗಾಡಿದ್ದಾರೆ.  ಹಳ್ಳಿಗರೆಲ್ಲ ಒಟ್ಟಾಗಿ ತಮ್ಮ ಮೇಲೆ ಕೂಗಾಡುತ್ತಿದ್ದರೆ ಏನೂ ಮಾಡಲಾಗದ ಶಾಸಕ ಸೈನಿ ಕೈಕಟ್ಟಿ ನಿಂತಿದ್ದರು. ಕೊನೆಗೂ ಕಾರಿನಲ್ಲಿ ಹತ್ತಿ ಕುಳಿತು ಅಲ್ಲಿಂದ ಹೊರಟುಹೋಗಿದ್ದಾರೆ.

 

 

ಬಿಜೆಪಿ ಶಾಕಸ ವಿಕ್ರಮ್ ಸೈನಿ ಅವರು 2019ರಲ್ಲಿ ಒಂದು ಪ್ರಚೋದನಾತ್ಮಕ ಹೇಳಿಕೆಯಿಂದ ಸುದ್ದಿ ಮಾಡಿದ್ದರು. ಯಾರೆಲ್ಲ ಭಾರತ ಸುರಕ್ಷಿತವಲ್ಲ ಎಂದು ಹೇಳುತ್ತಿದ್ದಾರೋ, ಅವರ ಮೇಲೆ ಬಾಂಬ್ ಹಾಕುತ್ತೇವೆ ಎಂದು ಹೇಳಿದ್ದರು. ಅದಕ್ಕೂ ಮೊದಲು ಒಂದ ಬಾರಿ, ನಮ್ಮ ದೇಶವನ್ನು ಹಿಂದುಸ್ತಾನ ಎಂದು ಕರೆಯುತ್ತಾರೆ. ಅದರ ಅರ್ಥ ಈ ದೇಶ ಹಿಂದುಗಳದ್ದು ಎಂಬುದಾಗಿದೆ ಎಂದಿದ್ದರು. ಅಷ್ಟೇ ಅಲ್ಲ,  ಯಾರೆಲ್ಲ ಹಸುಗಳನ್ನು ಕೊಲ್ಲುತ್ತಾರೋ ಅವರ ಕೈಕಾಲು ಮುರಿಯಲಾಗುವುದು ಎಂದೂ ವಿವಾದಾತ್ಮಕ ಹೇಳಿಕೆಗಳನ್ನು ಕೊಟ್ಟಿದ್ದರು. ಇನ್ನು ಉತ್ತರಪ್ರದೇಶ ಚುನಾವಣೆ ಫೆ.10ರಿಂದ ಪ್ರಾರಂಭವಾಗಲಿದ್ದು, ಒಟ್ಟು 7 ಹಂತಗಳಲ್ಲಿ ನಡೆಯಲಿದೆ. ಮತ ಎಣಿಕೆ ಮಾರ್ಚ್ 10ಕ್ಕೆ ನಡೆಯಲಿದೆ. ಸದ್ಯ ಚುನಾವಣೆ ನಡೆಯಲಿರುವ ಯಾವುದೇ ರಾಜ್ಯಗಳಲ್ಲೂ ರಾಜಕೀಯ ಪಕ್ಷಗಳು ರೋಡ್ ಶೋ, ಪ್ರಚಾರ ಸಭೆ, ರ್ಯಾಲಿಗಳನ್ನು ನಡೆಸುವಂತಿಲ್ಲ. ಒಳಾಂಗಣ ಸಭೆ ನಡೆಸಬಹುದಾದರೂ ಅದಕ್ಕೆ ಜನರ ಮಿತಿಯಿದೆ. ಅಂಥ ಒಳಾಂಗಣ ಸಭೆ ನಡೆಸಲೆಂದು ಈ ಶಾಸಕ ತಮ್ಮ ಕ್ಷೇತ್ರಕ್ಕೆ ಹೋಗಿದ್ದರು.

ಇದನ್ನೂ ಓದಿ: ‘ವೈದ್ಯರು ಹೇಳಿದಾಗ ಅವರನ್ನು ಮನೆಗೆ ಕರೆತರುತ್ತೇವೆ’; ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹೊಸ ಮಾಹಿತಿ

Published On - 2:58 pm, Thu, 20 January 22