ಅಪರ್ಣಾ ಯಾದವ್ ನಮ್ಮ ಸಿದ್ಧಾಂತವನ್ನು ಬಿಜೆಪಿಗೆ ಕೊಂಡೊಯ್ಯುತ್ತಾರೆ ಎಂದು ಆಶಿಸುವೆ : ಅಖಿಲೇಶ್ ಯಾದವ್

Akhilesh Yadav "ನಾವು ಸಮಾಜವಾದಿ ಪಕ್ಷಕ್ಕೆ ಸಾಮೂಹಿಕ ನೆಲೆಯನ್ನು ಹೊಂದಿರುವ ಜನರನ್ನು ಕರೆತಂದಿದ್ದೇವೆ. ಸಮಾಜವಾದಿ ಪಕ್ಷವು ಸರ್ಕಾರ ರಚಿಸಲು ಸಿದ್ಧವಾಗಿದೆ" ಎಂದು ಅಖಿಲೇಶ್ ಹೇಳಿದರು.

ಅಪರ್ಣಾ ಯಾದವ್ ನಮ್ಮ ಸಿದ್ಧಾಂತವನ್ನು ಬಿಜೆಪಿಗೆ ಕೊಂಡೊಯ್ಯುತ್ತಾರೆ ಎಂದು ಆಶಿಸುವೆ : ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Jan 19, 2022 | 8:30 PM

ದೆಹಲಿ: ಉತ್ತರ ಪ್ರದೇಶ ಚುನಾವಣೆಗೆ ಕೆಲವೇ ವಾರಗಳು ಬಾಕಿ ಇರುವಾಗ  ತಮ್ಮ ಸಂಬಂಧಿ ಅಪರ್ಣಾ ಯಾದವ್ (Aparna Yadav) ಬಿಜೆಪಿಗೆ ಸೇರಿರುವ ಬಗ್ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav), ಅವರು “ನಮ್ಮ ಸಿದ್ಧಾಂತವನ್ನು ಬಿಜೆಪಿಗೆ ಕೊಂಡೊಯ್ಯುತ್ತಾರೆ” ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ. ತಮ್ಮ ಟ್ರೇಡ್‌ಮಾರ್ಕ್ ಹಾಸ್ಯದೊಂದಿಗೆ ಪ್ರತಿಕ್ರಿಯಿಸಿದ ಅಖಿಲೇಶ್ , ಬಿಜೆಪಿಗೆ “ಧನ್ಯವಾದಗಳು”. ಈ ಮುಯ್ಯಿಗೆ ಮುಯ್ಯಿ ಪಕ್ಷಾಂತರಗಳಲ್ಲಿ ತಾನೇ ಹೆಚ್ಚು ಸ್ಕೋರ್ ಮಾಡಿದ್ದೇನೆ ಎಂದು ಹೇಳಿದರು. ನಮಗೆ ಟಿಕೆಟ್ ನೀಡಲು ಸಾಧ್ಯವಾಗದವರಿಗೆ ಬಿಜೆಪಿ ಟಿಕೆಟ್ ನೀಡುತ್ತಿರುವುದಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಅಖಿಲೇಶ್ ಹೇಳಿದ್ದಾರೆ. ಅಪರ್ಣಾ ಯಾದವ್ ಅವರು ಸಮಾಜವಾದಿ ಪಕ್ಷದ  ವರಿಷ್ಠ  ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಮಗ ಪ್ರತೀಕ್ ಯಾದವ್ ಪತ್ನಿಯಾಗಿದ್ದಾರೆ. ಅಖಿಲೇಶ್ ಯಾದವ್ ಅವರ ಮಲ ಸಹೋದರ ಈ ಪ್ರತೀಕ್ ಯಾದವ್. ಅಪರ್ಣಾ ಅವರು 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆದರೆ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರವಾಗಿದ್ದ ರೀಟಾ ಬಹುಗುಣ ವಿರುದ್ಧ ಸೋತಿದ್ದರು.  “ನಾನು ಅವರನ್ನು (ಅಪರ್ಣಾ) ಅಭಿನಂದಿಸಲು ಬಯಸುತ್ತೇನೆ ಮತ್ತು ಸಮಾಜವಾದಿ ಪಕ್ಷದ ಸಿದ್ಧಾಂತವು ಹರಡುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಮ್ಮ ಸಿದ್ಧಾಂತವು ಅಲ್ಲಿಗೆ ತಲುಪುತ್ತದೆ ಮತ್ತು ಪ್ರಜಾಪ್ರಭುತ್ವವನ್ನು ವಿಸ್ತರಿಸುತ್ತದೆ  ಎಂದು ನನಗೆ ಖಾತ್ರಿಯಿದೆ” ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.

ಆದಾಗ್ಯೂ, ಅವರ ತಂದೆ ಅಪರ್ಣಾ ಯಾದವ್ ಅವರ ಮನವೊಲಿಸಲು ಪ್ರಯತ್ನಿಸಿದ್ದರು ಎಂದು ಅಖಿಲೇಶ್ ಬಹಿರಂಗಪಡಿಸಿದರು.

ನೇತಾಜಿ ಅವರಿಗೆ ಸಲಹೆ ನೀಡಲು ತಮ್ಮ ಕೈಲಾದ ಪ್ರಯತ್ನ ಮಾಡಿದರು. ಟಿಕೆಟ್‌ಗಳು ನಮ್ಮ ಆಂತರಿಕ ಸಮೀಕ್ಷೆಗಳ ಮೇಲೆ ಅವಲಂಬಿತವಾಗಿವೆ, ಬಹಳಷ್ಟು ವಿಷಯಗಳ ಮೇಲೆ ಅವಲಂಬಿತವಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಸೀಟು ನಿರಾಕರಿಸಿದ್ದಕ್ಕಾಗಿ ಅಪರ್ಣಾ ಅಸಮಾಧಾನಗೊಂಡಿದ್ದಾರೆ ಎಂದು ಅಖಿಲೇಶ್ ಯಾದವ್ ಹೇಳಿದರು.

ಕಳೆದ ವಾರ ಅಖಿಲೇಶ್ ಯಾದವ್ ವಿರುದ್ಧ ಮೂವರು ರಾಜ್ಯ ಸಚಿವರು ಸೇರಿದಂತೆ ಹಲವು ಹಿಂದುಳಿದ ಜಾತಿಗಳ ನಾಯಕರನ್ನು ಕಳೆದುಕೊಂಡ ನಂತರ ಅಪರ್ಣಾ ಯಾದವ್ ಬಿಜೆಪಿಗೆ ದೊಡ್ಡ ಗಳಿಕೆಯಾಗಿದೆ. ಆದರೆ ಇಂದಿನ ನಷ್ಟಕ್ಕೆ ಹೋಲಿಸಿದರೆ ಅಖಿಲೇಶ್ ಯಾದವ್ ತಾನು ಹೆಚ್ಚಿನ ರಾಜಕೀಯ ಬಲವನ್ನು ಗಳಿಸಿದ್ದಾರೆ ಎಂದು ಹೇಳಿದ್ದಾರೆ.

“ನಾವು ಸಮಾಜವಾದಿ ಪಕ್ಷಕ್ಕೆ ಸಾಮೂಹಿಕ ನೆಲೆಯನ್ನು ಹೊಂದಿರುವ ಜನರನ್ನು ಕರೆತಂದಿದ್ದೇವೆ. ಸಮಾಜವಾದಿ ಪಕ್ಷವು ಸರ್ಕಾರ ರಚಿಸಲು ಸಿದ್ಧವಾಗಿದೆ” ಎಂದು ಅಖಿಲೇಶ್ ಹೇಳಿದರು.

ಅಪರ್ಣಾ ಬಗ್ಗೆ ಕೇಳಿದಾಗ ಅವರು ಈಗ “ರಾಷ್ಟ್ರೀಯ ಪಕ್ಷ” ಕ್ಕೆ ಹೋಗಿದ್ದಾರೆ ಎಂದು ಅಖಿಲೇಶ್ ಉತ್ತರಿಸಿದ್ದಾರೆ. “ನಾನು ಸೈನಿಕ ಶಾಲೆಗೆ, ಕೇಂದ್ರ ಸರ್ಕಾರಿ ಶಾಲೆಗೆ ಹೋಗಿದ್ದೇನೆ. ನನ್ನೊಂದಿಗೆ ಇರುವ ಜನರು – ಅವರಲ್ಲಿ ಹಲವರು ಈಗ ನಮ್ಮ ಗಡಿಯನ್ನು ರಕ್ಷಿಸುತ್ತಿದ್ದಾರೆ, ನನ್ನ ಅನೇಕ ಹಿರಿಯರು ಅದ್ಭುತ ಮಿಲಿಟರಿ ವೃತ್ತಿಯನ್ನು ಹೊಂದಿದ್ದಾರೆ. ಬಿಜೆಪಿಯ ಉನ್ನತ ನಾಯಕತ್ವವು ಈರ ರೀತಿಯ ಒಂದು ಉದಾಹರಣೆ ನೀಡಬಹುದೇ? ಅವರ ಸಹಪಾಠಿಗಳು ಸೈನ್ಯದಲ್ಲಿದ್ದರೆ? ರಾಷ್ಟ್ರೀಯತೆಯ ವ್ಯಾಖ್ಯಾನವೇನು? ವಾಯುಪಡೆಯ ಜೆಟ್‌ಗಳು ಬಂದಿಳಿದ ಎಕ್ಸ್‌ಪ್ರೆಸ್‌ವೇ ಅನ್ನು ನಾವು ನಿರ್ಮಿಸಲಿಲ್ಲವೇ?” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕೇಳಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಸೇರಿದ ಬಿಪಿನ್ ರಾವತ್ ಸಹೋದರ ವಿಜಯ್ ರಾವತ್, ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕರ್ನಾಟಕದ ಬಳಿಕ ಅಹಮದಾಬಾದ್​ ಶಾಲೆಯಲ್ಲೂ 3ನೇ ಕ್ಲಾಸ್​ ಬಾಲಕಿಗೆ ಹೃದಯಾಘಾತ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಕನ್ನೌಜ್​ನಲ್ಲಿ ರೈಲ್ವೆ ನಿಲ್ದಾಣದ ಕಟ್ಟಡ ಕುಸಿದು 20 ಜನರಿಗೆ ಗಾಯ
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ಸಿಎಂ ಯಾರೇ ಆದರೂ ಅನುದಾನಕ್ಕಾಗಿ ಹೋರಾಟ ನಿಲ್ಲಲ್ಲ: ಸುನೀಲ ಕುಮಾರ್
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ