ಬಿಜೆಪಿಗೆ ಸೇರಿದ ಬಿಪಿನ್ ರಾವತ್ ಸಹೋದರ ವಿಜಯ್ ರಾವತ್, ಉತ್ತರಾಖಂಡ ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ
Vijay Rawat ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾದ ವಿಜಯ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಸಭಾ ಸಂಸದ ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.
ದೆಹಲಿ: ಇತ್ತೀಚೆಗೆ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದ ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಜನರಲ್ ಬಿಪಿನ್ ರಾವತ್ (CDS Bipin Rawat)ಅವರ ಸಹೋದರ ವಿಜಯ್ ರಾವತ್ ಅವರು ಬುಧವಾರ ಬಿಜೆಪಿ ಸೇರಿದ್ದಾರೆ. ಬಿಜೆಪಿ ಅವರನ್ನು ಉತ್ತರಾಖಂಡ (Uttarakhand)ದಲ್ಲಿ ತನ್ನ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸೇನೆಯಿಂದ ಕರ್ನಲ್ ಆಗಿ ನಿವೃತ್ತರಾದ ವಿಜಯ್ ರಾವತ್ ಅವರು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮತ್ತು ರಾಜ್ಯಸಭಾ ಸಂಸದ ಅನಿಲ್ ಬಲುನಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. ಮಾಜಿ ಸೇನಾಧಿಕಾರಿಯೂ ಆಗಿರುವ ತಮ್ಮ ತಂದೆ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದನ್ನು ಸ್ಮರಿಸಿದ ರಾವತ್, ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ರಾವತ್, ಮೋದಿ ವಿಶಿಷ್ಟವಾದ ದೃಷ್ಟಿಕೋನ ಮತ್ತು ಮನಸ್ಥಿತಿಯನ್ನು ಹೊಂದಿದ್ದಾರೆ ಎಂದು ಹೇಳಿದರು. ಅವರು ಚೌಕಟ್ಟಿನ ಹೊರಗೆ ಯೋಚಿಸುತ್ತಾರೆ ಮತ್ತು ಅವರ ಎಲ್ಲಾ ಪ್ರಯತ್ನಗಳು ದೇಶದ ಸುಧಾರಣೆಗೆ ನಿರ್ದೇಶಿಸಲ್ಪಡುತ್ತವೆ ಎಂದು ರಾವತ್ ಹೇಳಿದರು.
I like his (Uttarakhand CM) vision for State. It matches what my brother (late CDS Bipin Rawat) had in his mind. BJP has same mindset. In case they ask me, I’ll serve people of Uttarakhand (will you join BJP?): Late CDS Gen Bipin Rawat’s brother Colonel Vijay Rawat (retired) https://t.co/6U7uBLWphR
— ANI UP/Uttarakhand (@ANINewsUP) January 19, 2022
ನಾನು ಉತ್ತರಾಖಂಡ ಸಿಎಂ ಅವರಿಗೆ ರಾಜ್ಯದ ಬಗ್ಗೆ ಇರುವ ದೃಷ್ಟಿಕೋನವನ್ನು ಇಷ್ಟಪಡುತ್ತೇನೆ. ಇದು ನನ್ನ ಸಹೋದರ (ದಿವಂಗತ ಸಿಡಿಎಸ್ ಬಿಪಿನ್ ರಾವತ್) ಅವರ ಮನಸ್ಸಿನಲ್ಲಿದ್ದ ದೃಷ್ಟಿಕೋನಕ್ಕೆ ಹೊಂದಿಕೆಯಾಗುತ್ತದೆ. ಬಿಜೆಪಿಗೂ ಇದೇ ಮನಸ್ಥಿತಿ ಇದೆ. ನೀವು ಬಿಜೆಪಿಗೆ ಸೇರುತ್ತೀರಾ ಎಂದು ನನ್ನಲ್ಲಿ ಕೇಳಿದರೆ, ನಾನು ಉತ್ತರಾಖಂಡದ ಜನರ ಸೇವೆ ಮಾಡುತ್ತೇನೆ ಎಂದಿದ್ದಾರೆ ವಿಜಯ್ ರಾವತ್.
ರಾವತ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಧಾಮಿ, ದಿವಂಗತ ಸಿಡಿಎಸ್ ಬಿಪಿನ್ ರಾವತ್ ನಿವೃತ್ತಿಯ ನಂತರ ರಾಜ್ಯಕ್ಕಾಗಿ ಕೆಲಸ ಮಾಡಲು ಬಯಸಿದ್ದರು ಮತ್ತು ಅವರ ಕಿರಿಯ ಸಹೋದರ ಅವರ ಕನಸನ್ನು ಮುನ್ನಡೆಸುತ್ತಾರೆ ಎಂದು ಹೇಳಿದರು. ಬಿಜೆಪಿ ರಾಷ್ಟ್ರೀಯವಾದಿ ಸಿದ್ಧಾಂತದಿಂದ ಪ್ರೇರಿತವಾಗಿದೆ ಮತ್ತು ಭದ್ರತಾ ಸಿಬ್ಬಂದಿಯ ಕಲ್ಯಾಣಕ್ಕಾಗಿ ಯಾವಾಗಲೂ ಕೆಲಸ ಮಾಡಿದೆ ಎಂದು ಅವರು ಹೇಳಿದರು. ರಾವತ್ ಅವರ ಕುಟುಂಬ ಮೂರು ತಲೆಮಾರುಗಳಿಂದ ಸೇನೆಗೆ ಸೇರುತ್ತಿದೆ ಎಂದು ತಿಳಿಸಿದ ಅವರು, ಬಿಜೆಪಿ ಸೇರುವ ಅವರ ನಿರ್ಧಾರವು ಅದರ ಬಲವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ಮೋದಿಯವರ ಕೆಲಸದಿಂದ ಪ್ರಭಾವಿತಳಾಗಿದ್ದೇನೆ, ಮುಲಾಯಂ ಸಿಂಗ್ ಯಾದವ್ ಆಶೀರ್ವಾದ ನನ್ನ ಮೇಲಿದೆ: ಅಪರ್ಣಾ ಯಾದವ್
Published On - 7:41 pm, Wed, 19 January 22