ಮತ್ತೆ ಬಿಜೆಪಿಗೆ ಒಲಿದ ಉತ್ತರ ಪ್ರದೇಶ: ಈ ಫಲಿತಾಂಶದ ಅರ್ಥವೇನು? 2024ರ ಲೋಕಸಭೆ ಚುನಾವಣೆಗೆ ಏನಿದೆ ಸಂದೇಶ?

ಇಡೀ ವಾತಾವರಣ ತನ್ನ ವಿರುದ್ಧ ಇದ್ದರೂ, ಜಾತಿ ಲೆಕ್ಕಾಚಾರ, ರೈತ ಪ್ರತಿಭಟನೆ, ವಿರೋಧ ಪಕ್ಷಗಳ ಮೈತ್ರಿಯ ಬಲಕ್ಕೆ ಪುಷ್ಟಿ ಕೊಡುವಂತೆ ಆಡಳಿತ ವಿರೋಧಿ ಅಲೆ ಇದ್ದರೂ ಜಯ ಮಾತ್ರ ಬಿಜೆಪಿಯನ್ನೇ ಹುಡುಕಿಕೊಂಡು ಬಂದಿದೆ.

ಮತ್ತೆ ಬಿಜೆಪಿಗೆ ಒಲಿದ ಉತ್ತರ ಪ್ರದೇಶ: ಈ ಫಲಿತಾಂಶದ ಅರ್ಥವೇನು? 2024ರ ಲೋಕಸಭೆ ಚುನಾವಣೆಗೆ ಏನಿದೆ ಸಂದೇಶ?
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ
Follow us
|

Updated on:Mar 10, 2022 | 4:36 PM

ಬಿಜೆಪಿ ಪಾಲಿಗೆ ಉತ್ತರ ಪ್ರದೇಶ (Uttar Pradesh Elections) ಎನ್ನುವುದು ಅದೃಷ್ಟದ ಮನೆ ಎಂಬಂತೆ ಆಗಿದೆ. ಚುನಾವಣೆ ಘೋಷಣೆಗೆ ಮೊದಲು, ಘೋಷಣೆಯ ನಂತರ, ಪ್ರಚಾರ ತಾರಕಕ್ಕೇರಿದ್ದಾಗ ಏನೆಲ್ಲಾ ಆದರೂ ಕೊನೆಗೆ ಬಿಜೆಪಿ ಗೆಲುವು ಸಾಧಿಸುತ್ತಿದೆ. ಇಡೀ ವಾತಾವರಣ ತನ್ನ ವಿರುದ್ಧ ಇದ್ದರೂ, ಜಾತಿ ಲೆಕ್ಕಾಚಾರ, ರೈತ ಪ್ರತಿಭಟನೆ, ವಿರೋಧ ಪಕ್ಷಗಳ ಮೈತ್ರಿಯ ಬಲಕ್ಕೆ ಪುಷ್ಟಿ ಕೊಡುವಂತೆ ಆಡಳಿತ ವಿರೋಧಿ ಅಲೆ ಇದ್ದರೂ ಜಯ ಮಾತ್ರ ಬಿಜೆಪಿಯನ್ನೇ ಹುಡುಕಿಕೊಂಡು ಬಂದಿದೆ. ಉತ್ತರ ಪ್ರದೇಶದಲ್ಲಿ ನಾಲ್ಕನೇ ಬಾರಿಗೆ ಸ್ವಂತ ಬಲದ ಮೇಲೆ ಸರ್ಕಾರ ರಚಿಸಲು ಬಿಜೆಪಿ ಸಜ್ಜಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ ನಂತರ ಬಿಜೆಪಿ ರಾಜ್ಯದಲ್ಲಿ ಉತ್ತಮ ಸಾಧನೆಯನ್ನೇ ಮೆರೆಯುತ್ತಿದೆ. 2022ರ ಲೋಕಸಭಾ ಚುನಾವಣೆಯ ಫಲಿತಾಂಶವೂ ಇದಕ್ಕಿಂತ ಭಿನ್ನವಾಗಿಯೇನೂ ಇರುವುದಿಲ್ಲ ಎಂಬ ಮಾತುಗಳು ಪ್ರಬಲವಾಗಿ ಕೇಳಿಬರುತ್ತಿವೆ.

ಬಿಜೆಪಿಗೆ ಹಲವು ಕಾರಣಗಳಿಂದಾಗಿ ಈ ಜಯ ಮುಖ್ಯ. ಉತ್ತರ ಪ್ರದೇಶದ ಇತಿಹಾಸದಲ್ಲಿ ಯಾವುದೇ ಒಬ್ಬ ಮುಖ್ಯಮಂತ್ರಿ ಪೂರ್ಣ ಅವಧಿಗೆ ಅಧಿಕಾರ ನಡೆಸಿದ ನಂತರ ಮರು ಆಯ್ಕೆಯಾಗಿಲ್ಲ. 1985ರಿಂದ ಈವರೆಗೆ ಯಾವುದೇ ಪಕ್ಷ ಒಮ್ಮೆ ಅಧಿಕಾರ ಪೂರ್ಣಗೊಳಿಸಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರಲಿಲ್ಲ. ಆಡಳಿತ ಬದಲಿಸುವುದು ಉತ್ತರ ಪ್ರದೇಶ ಮತದಾರರ ಸಾಮಾನ್ಯ ಸ್ವಭಾವವೇ ಆಗಿದೆ. ಅದರೆ ಈ ಬಾರಿ ಬಿಜೆಪಿ ಇತಿಹಾಸವನ್ನು ಬದಲಿಸಿದೆ. ಬಿಜೆಪಿ ಗೆಲುವಿನ ಪ್ರಾಮುಖ್ಯತೆಯನ್ನು ಈ ಎಲ್ಲ ಅಂಶಗಳೂ ಹೆಚ್ಚಿಸಿವೆ.

ಸಮಾಜವಾದಿ ಪಕ್ಷವನ್ನು ಚುನಾವಣೆಯನ್ನು ಮುನ್ನಡೆಸಿದ್ದ ಅಖಿಲೇಶ್ ಯಾದವ್ ಅವರಿಗೆ ಈ ಬಾರಿ ಗೆಲುವು ಸಾಧಿಸಲು ಎಲ್ಲ ಅವಕಾಶಗಳೂ ಇದ್ದವು. ಜಾತಿ ಸಮೀಕರಣಗಳನ್ನು ಹೆಣೆಯಲು, ತಮ್ಮೆಡೆಗೆ ಸೆಳೆದುಕೊಳ್ಳಲು ಅಖಿಲೇಶ್ ಉತ್ತಮ ತಂತ್ರಗಾರಿಕೆ ಪ್ರದರ್ಶಿಸಿದ್ದವು. ಯಾದವರು ಮತ್ತು ಮುಸ್ಲಿಮರು ಈ ಬಾರಿ ಅಖಿಲೇಶರಿಗೆ ಸಾರಾಸಗಟಾಗಿ ಮತ ಹಾಕುತ್ತಾರೆ ಎಂದು ಹೇಳಲಾಗಿತ್ತು. ಲಖಿಂಪುರ್​ ಖೇರಿ ಹಿಂಸಾಚಾರ ಮತ್ತು ಇತರ ಕಾರಣಗಳಿಂದಾಗಿ ಬಿಜೆಪಿಯಿಂದ ದೂರ ಸರಿದ್ದ ಜಾಟ್ ಸಮುದಾಯದ ಮತಗಳು ಬಿಜೆಪಿಗೆ ಸಿಗಲಿವೆ ಎನ್ನಲಾಗಿತ್ತು. ನಾನಾ ಕಾರಣಕ್ಕೆ ಆಡಳಿತದೊಂದಿಗೆ ಮುನಿಸಿಕೊಂಡಿದ್ದ ಸಣ್ಣಪುಟ್ಟ ಸಮುದಾಯಗಳು ಎಸ್​ಪಿ ಕಡೆಗೆ ವಾಲಿದ್ದವು. ಚುನಾವಣೆಗೆ ಮುಂಚಿನ ದಿನಗಳಲ್ಲಿ ಯಾವ ರೀತಿ ಲೆಕ್ಕ ಹಾಕಿದರೂ ಒಟ್ಟಾರೆ ರಾಜ್ಯದಲ್ಲಿ ಎಸ್​ಪಿಗೆ ಪೂರಕ ವಾತಾವರಣ ಕಂಡುಬರುತ್ತಿತ್ತು.

ಬಹುಜನ ಸಮಾಜ ಪಕ್ಷವು (ಬಿಎಸ್​ಪಿ) ಕಣದಲ್ಲಿ ಇದ್ದೂ ಇಲ್ಲದಂಥ ಸ್ಥಿತಿಗೆ ತನ್ನನ್ನು ಸೀಮಿತಗೊಳಿಸಿಕೊಂಡಿದ್ದರಿಂದ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಮತಗಳು ಒಗ್ಗೂಡಲು ಸಾಧ್ಯವಾಯಿತು. ವಿಪಕ್ಷಗಳ ಮತಗಳು ಆಡಳಿತ ಪಕ್ಷದ ವಿರುದ್ಧ ಒಗ್ಗೂಡುವುದು ಪ್ರಬಲ ಪಕ್ಷವನ್ನು ಎದುರಿಸುತ್ತಿರುವ ಪಕ್ಷಕ್ಕೆ ಪೂರಕ ವಾತಾವರಣ ನಿರ್ಮಿಸುತ್ತವೆ. ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ, ನಿರುದ್ಯೋಗ, ಕೊವಿಡ್ ಪಿಡುಗಿನಿಂದ ಸಮಾಜದಲ್ಲಿ ತಾಂಡವವಾಡಿದ ಅನಾನುಕೂಲಗಳ ಮತದಾರರಿಗೆ ಬಿಜೆಪಿ ಪರ ಇದ್ದ ಒಲವನ್ನು ಕಡಿಮೆ ಮಾಡಿತ್ತು. ಇದೆಲ್ಲಕ್ಕಿಂತ ಮುಖ್ಯವಾಗಿ ಒಂದು ಪಕ್ಷ, ವ್ಯಕ್ತಿಯ ಸತತ 5 ವರ್ಷಗಳ ಆಡಳಿತದ ನಂತರ ಕಾಣಿಸಿಕೊಳ್ಳುವ ಆಡಳಿತ ವಿರೋಧಿ ಅಲೆಯೂ ಕಾಣಿಸಿಕೊಂಡಿತ್ತು.

ಈ ಎಲ್ಲದರ ನಡುವೆಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಜಯಗಳಿಸಿದೆ. ಅಷ್ಟೇ ಅಲ್ಲ, ಬಿಜೆಪಿ ಪರವಾಗಿ ಚಲಾವಣೆಯಾಗಿರುವ ಮತಗಳ ಪ್ರಮಾಣ ಹೆಚ್ಚಾಗಿದೆ. 2017ರಲ್ಲಿ ಬಿಜೆಪಿ ಪರವಾಗಿ ಶೇ 40ರಷ್ಟು ಮತಗಳು ಚಲಾವಣೆಯಾಗಿದ್ದವು. ಈಗ ಇದು ಶೇ 43ಕ್ಕೆ ಮುಟ್ಟಿದೆ. ಇದರ ಅರ್ಥ, 2017ಕ್ಕೆ ಹೋಲಿಸಿದರೆ 2022ರಲ್ಲಿ ಬಿಜೆಪಿ ಪರವಾಗಿ ಚಲಾವಣೆಯಾಗಿರುವ ಮತಗಳ ಪ್ರಮಾಣ ಹೆಚ್ಚು.

ಬಿಜೆಪಿ ಗೆಲುವಿಗೆ ಕಾರಣಗಳೇನು? 2024ರಲ್ಲಿ ಏನಾಗಬಹುದು?

ಎಲ್ಲ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿ ಬಿಜೆಪಿ ಗೆಲುವು ಸಾಧಿಸಿದೆ. ಸಮಾಜವಾದಿ ಪಕ್ಷಕ್ಕೆ ನಿರೀಕ್ಷೆಯಂತೆ ಮುಸ್ಲಿಂ ಮತ್ತು ಯಾದವರ ಮತಗಳನ್ನು ಸೆಳೆಯಲು ಸಾಧ್ಯವಾಗಿಲ್ಲ. ವಾಡಿಕೆಯಂತೆ ಹಿಂದುತ್ವದ ಸಿದ್ಧಾಂತಕ್ಕೆ ಒಲಿದವರು ಬಿಜೆಪಿ ಪರ ಮತಚಲಾಯಿಸಿದ್ದರೆ. ಇದರ ಜೊತೆಗೆ ಮುಸ್ಲಿಮರು ಮತ್ತು ಯಾದವರ ಮತಗಳೂ ಬಿಜೆಪಿ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಸಿಕ್ಕಿದೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಜಾಟ್-ಮುಸ್ಲಿಂ ಮೈತ್ರಿಯಿಂದ ಬಿಜೆಪಿಗೆ ಧಕ್ಕೆಯಾಗಬಹುದು ಎಂಬ ವಿಶ್ಲೇಷಣೆಗಳೂ ಸುಳ್ಳಾಗಿವೆ. ಇದರ ನೇರ ಅರ್ಥ ಏನೆಂದರೆ, ಹಿಂದುತ್ವದ ಘೋಷಣೆಗಳು ಇಂದಿಗೂ ಜನರನ್ನು ಆಕರ್ಷಿಸುತ್ತಿವೆ, ಬಿಜೆಪಿಯ ಪಾಲಿಗೆ ಚುನಾವಣೆ ಗೆಲ್ಲಿಸಿಕೊಡುವ ಪ್ರಮುಖ ಅಸ್ತ್ರವಾಗಿ ಉಳಿದುಕೊಂಡಿದೆ.

ಉತ್ತರ ಪ್ರದೇಶದಲ್ಲಿ ಈ ಬಾರಿ ಕೆಲಸ ಮಾಡಿರುವ ಇನ್ನೊಂದು ಪ್ರಮುಖ ಅಂಶವೆಂದರೆ ನಂಬಿಕೆ. ನಿರುದ್ಯೋಗ, ಬೆಲೆ ಏರಿಕೆ, ಬೀಡಾಡಿ ದನಗಳಿಂದ ಜನರು ಪ್ರತಿದಿನ ಕಷ್ಟ ಅನುಭವಿಸುತ್ತಿದ್ದರು. ಆದರೆ ಇದನ್ನು ಪರಿಹರಿಸಬಲ್ಲ ನಾಯಕ ವಿರೋಧ ಪಕ್ಷಗಳಲ್ಲಿ ಅವರಿಗೆ ಕಾಣಿಸಲಿಲಲ್ಲ. ಬದಲಾಗಿ ಮೋದಿ (ಬಿಜೆಪಿಯ ವಿಸ್ತರಣೆ) ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಬಲ್ಲರು ಎನಿಸಿತ್ತು. ಉತ್ತರ ಪ್ರದೇಶದಲ್ಲಿರುವ ನಿಜವಾದ ದೊಡ್ಡ ಜಾತಿ ಎಂದರೆ ಲಾಭಾರ್ಥಿಗಳು ಎನ್ನುವ ಜೋಕ್ ಒಂದು ಚಾಲ್ತಿಯಲ್ಲಿತ್ತು. ಪಿಂಚಣಿಯಿಂದ ಪಡಿತರವರೆಗೆ ಎಲ್ಲವನ್ನೂ ಸರ್ಕಾರ ಕೊಡುತ್ತಿದೆ. ಸರ್ಕಾರ ಅಂದರೆ ಬಿಜೆಪಿ ಎನ್ನುವುದನ್ನು ಜನರು ಒಪ್ಪಿಕೊಂಡಿದ್ದರು. ಮತದಾನದ ದಿನ ಅವರು ತಮ್ಮ ಸಾಂಪ್ರದಾಯಿಕ ಜಾತಿ ಬದ್ಧತೆಯನ್ನು ಮರೆತು ಸರ್ಕಾರದ ಪರವಾಗಿ ಮತ ಚಲಾಯಿಸಿದರು.

ಈ ಬಾರಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ದೊಡ್ಡ ಕೊಡುಗೆ ನೀಡಿದ್ದ ಬಿಎಸ್​ಪಿಯ ಮೌನ. ಈ ಬಾರಿಯ ಚುನಾವಣೆಯಲ್ಲಿ ಬಿಎಸ್​ಪಿ ಹೆಚ್ಚು ರೋಷ ತೋರುವುದಿಲ್ಲ ಎಂಬ ಮಾತು ಕಳೆದ ವರ್ಷದಿಂದಲೇ ಚಾಲ್ತಿಗೆ ಬಂದಿತ್ತು. ಬಿಜೆಪಿಯಿಂದ ದೂರ ಸರಿಯುವ ಮತದಾರರು ಎಸ್​ಪಿಗೆ ಬೆಂಬಲ ನೀಡಬಹುದು. ಈ ಮೂಲಕ ವಿರೋಧ ಪಕ್ಷಗಳ ಮತ ಹಂಚಿಹೋಗುವುದು ತಪ್ಪಿ, ಬಿಜೆಪಿಗೆ ಕಷ್ಟವಾಗುತ್ತದೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಬಿಎಸ್​ಪಿಯ ಸಾಂಪ್ರದಾಯಿಕ ಮತದಾರರು ಎಸ್​ಪಿ ಬದಲು ಬಿಜೆಪಿಗೇ ಮತ ಹಾಕಿದರು. ಇದು ಬಿಜೆಪಿಯ ಹಾದಿಯನ್ನು ಇನ್ನಷ್ಟು ಸುಲಭ ಮಾಡಿತು. ಈ ಬೆಳವಣಿಗೆಯಲ್ಲಿ 2024ರ ಲೋಕಸಭಾ ಚುನಾವಣೆಯ ಪಾಠವೂ ಒಂದು ಇದೆ. ಎರಡು ವಿರೋಧ ಪಕ್ಷಗಳ ನಾಯಕರು ಪರಸ್ಪರ ಜೊತೆಯಾದರೆ ಆ ಪಕ್ಷಗಳ ಸಾಮಾನ್ಯ ಕಾರ್ಯಕರ್ತರು ಮತ್ತು ಮತದಾರರು ಅವರನ್ನೇ ಅನುಸರಿಸಿ, ಮತ್ತೊಂದು ಪಕ್ಷಕ್ಕೆ ಬೆಂಬಲ ನೀಡುತ್ತಾರೆ ಎನ್ನಲು ಆಗುವುದಿಲ್ಲ. ಮಹಾರಾಷ್ಟ್ರದಲ್ಲಿ ಶರದ್ ಪವಾರ್ ಅವರೊಂದಿಗೆ ಮೈತ್ರಿ ಮಾಡಿಕೊಂಡ ಒಂದೇ ಕಾರಣಕ್ಕೆ ಟಿಎಂಸಿಗೆ ಮತ ಸಿಗಬಹುದು ಎಂದು ಹೇಳಲು ಆಗುವುದಿಲ್ಲ. ಜನರಿಗೆ ನಾಯಕರಲ್ಲಿ ನಿಜವಾದ ನಂಬಿಕೆ ಮಾತ್ರ ಇಂಥ ಬೆಳವಣಿಗೆ ಸಾಧ್ಯ.

ಐದು ರಾಜ್ಯಗಳ ರಾಜಕೀಯ ಬೆಳವಣಿಗೆಯನ್ನು ಆಧರಿಸಿ ಫಲಿತಾಂಶವನ್ನು ವಿಶ್ಲೇಷಿಸಿದರೆ, 2024ರಲ್ಲಿಯೂ ಬಿಜೆಪಿಯನ್ನು ಸೋಲಿಸಲು ಈಗಿನ ಪ್ರತಿಪಕ್ಷಗಳಿಗೆ ಸಾಧ್ಯವಾಗುವುದಿಲ್ಲ ಎನ್ನುವುದು ಗೋಡೆ ಮೇಲಿನ ಬರಹದಂತೆ ಕಾಣಿಸುತ್ತಿದೆ. ಕಾಂಗ್ರೆಸ್ ಸುಧಾರಿಸಿಕೊಂಡರೆ, ಟಿಎಂಸಿ ಪ್ರಭಾವ ವಿಸ್ತರಿಸಿದರೆ, ಪ್ರತಿಪಕ್ಷಗಳೆಲ್ಲವೂ ಒಗ್ಗೂಡಿ ಸಮರ್ಥ ಪ್ರಧಾನಿ ಅಭ್ಯರ್ಥಿಯನ್ನು ಬಿಂಬಿಸಿದರೆ, ಜನರಿಗೆ ಈ ಪಕ್ಷಗಳ ಮಾತು ಅವು ತೋರುತ್ತಿರುವ ವ್ಯಕ್ತಿಯಲ್ಲಿ ನಂಬಿಕೆ ಮೂಡಿದರೆ. ಈ ‘ರೆ’ ಗಳೆಲ್ಲವೂ ಸಾಧ್ಯವಾದರೆ ಅದು ಬೇರೆ ಮಾತು. ಈಗ ಕಾಣಿಸುತ್ತಿರುವ ಗೋಡೆ ಮೇಲಿನ ಬರಹ, ಆಗ ಮಸುಕಾಗಬಹುದು, ಬದಲಾಗಬಹುದು.

ಇದನ್ನೂ ಓದಿ: Uttar Pradesh: ಇದು ಜನರ ಗೆಲುವು, ರೌಡಿಗಳ ಸೋಲು: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ

ಇದನ್ನೂ ಓದಿ: 5 States Election Results 2022: ಬಿಜೆಪಿಗೆ ಸಿಹಿ, ಆಪ್​ಗೆ ಸಿಕ್ಕಿತು ಪಂಜಾಬ್​, ಕರ್ನಾಟಕಕ್ಕೆ ಮತ್ತೆ ಲಗ್ಗೆ ಇಡಬಹುದು ಬಿಜೆಪಿ?

Published On - 4:31 pm, Thu, 10 March 22

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ