Video: ಹಲವು ಅಂಚೆ ಮತಪತ್ರಗಳಿಗೆ ಗುರುತು ಹಾಕಿ, ಸಹಿ ಮಾಡಿದ ಒಬ್ಬ ಮತದಾರ; ಕಾಂಗ್ರೆಸ್​​ನಿಂದ ಟ್ವೀಟ್​

ಉತ್ತರಾಖಂಡ್​​ ವಿಧಾನಸಭೆ ಪ್ರತಿಪಕ್ಷ ನಾಯಕ ಪ್ರೀತಮ್​ ಸಿಂಗ್​ ಕೂಡ ಇದೇ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೇನಾ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬರು ಹಲವು ಮತಪತ್ರಗಳಿಗೆ ಗುರುತು ಮಾಡಿ, ಸಹಿ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

Video: ಹಲವು ಅಂಚೆ ಮತಪತ್ರಗಳಿಗೆ ಗುರುತು ಹಾಕಿ, ಸಹಿ ಮಾಡಿದ ಒಬ್ಬ ಮತದಾರ; ಕಾಂಗ್ರೆಸ್​​ನಿಂದ ಟ್ವೀಟ್​
ಮತಪತ್ರಗಳಿಗೆ ಒಬ್ಬರೇ ಸಹಿ ಹಾಕುತ್ತಿರುವ ಫೋಟೋ
Follow us
TV9 Web
| Updated By: Lakshmi Hegde

Updated on: Feb 23, 2022 | 5:10 PM

ಉತ್ತರಾಖಂಡ್​ ಕಾಂಗ್ರೆಸ್ ನಾಯಕ ಹರೀಶ್​ ರಾವತ್ (Harish Rawat) ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ. ಅದೊಂದು ಸೇನಾ ಕೇಂದ್ರ. ಅಲ್ಲೊಬ್ಬ ಮತದಾರ ಹಲವು ಅಂಚೆ ಮತಪತ್ರಗಳಿಗೆ (ಪೋಸ್ಟಲ್​ ಬ್ಯಾಲೆಟ್​ ಪೇಪರ್​)ಗುರುತು ಮತ್ತು ಸಹಿ ಮಾಡುವುದನ್ನು ನೋಡಬಹುದಾಗಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿರುವ ಹರೀಶ್​ ರಾವತ್​ ವಿಡಿಯೋವನ್ನು ಶೇರ್​ ಮಾಡಿಕೊಂಡು, ನಾನಿದನ್ನು ನಿಮ್ಮೆಲ್ಲರ ಗಮನಕ್ಕೆ ಇರಲಿ ಎಂದು ಶೇರ್​ ಮಾಡುತ್ತಿದ್ದೇನೆ. ಇಲ್ಲಿ ಒಬ್ಬನೇ ವ್ಯಕ್ತಿ ಹಲವು ಮತಪತ್ರಗಳಲ್ಲಿ ಪಕ್ಷಕ್ಕೆ ಗುರುತು ಹಾಕುವುದನ್ನು ಮತ್ತು ಸಹಿ ಹಾಕುವುದನ್ನು ನೋಡಬಹುದು. ಅಂದರೆ ಬೇರೆಯವರ ಹೆಸರಿಗೆ ಕಳಿಸಲಾದ ಮತಪತ್ರಕ್ಕೂ ಈ ವ್ಯಕ್ತಿಯೇ ಗುರುತು ಮಾಡುತ್ತಿದ್ದಾರೆ. ಅವರಂತೆಯೇ ಸಹಿಯನ್ನೂ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಇದನ್ನು ಗಮನಿಸಿ, ಕ್ರಮ ತೆಗೆದುಕೊಳ್ಳುತ್ತದೆಯೇ ಎಂದು ಕೇಳಿದ್ದಾರೆ.

ಈ ವಿಡಿಯೋ ಬಗ್ಗೆ ಮಾಧ್ಯಮದವರು ಪ್ರಶ್ನೆ ಎತ್ತಿದರೆ ಅದು ಯಾರು ಕಳಿಸಿದ್ದು, ಎಲ್ಲಿ ಸಿಕ್ಕಿದ್ದು ಎಂಬ ಮಾಹಿತಿಯನ್ನು ಹಂಚಿಕೊಳ್ಳಲು ಹರೀಶ್​ ರಾವತ್ ಅವರ ವಕ್ತಾರ ಸುರೇಂದ್ರ ಕುಮಾರ್ ನಿರಾಕರಿಸಿದ್ದಾರೆ. ಆದರೆ ಇದು ಉತ್ತರಾಖಂಡ್​​ನಲ್ಲಿ ನಡೆದ ಘಟನೆಯ ವಿಡಿಯೋ ಎಂದು ಹೇಳಿದ್ದಾರೆ. ವಿಡಿಯೋ ಬಗ್ಗೆ ಕಾಂಗ್ರೆಸ್​ ಪಕ್ಷ ಚುನಾವಣಾ ಆಯೋಗಕ್ಕೆ ಯಾವುದೇ ದೂರು ನೀಡಿಲ್ಲ. ಆದರೆ ಈ ಬಗ್ಗೆ ಆಯೋಗವೇ ಸುಮೊಟೊ ಪ್ರಕರಣ ಕೈಗೆತ್ತಿಕೊಳ್ಳಬಹುದು ಎಂದೂ ಹೇಳಿದ್ದಾರೆ.

ಉತ್ತರಾಖಂಡ್​​ ವಿಧಾನಸಭೆ ಪ್ರತಿಪಕ್ಷ ನಾಯಕ ಪ್ರೀತಮ್​ ಸಿಂಗ್​ ಕೂಡ ಇದೇ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಸೇನಾ ಕೇಂದ್ರದಲ್ಲಿರುವ ವ್ಯಕ್ತಿಯೊಬ್ಬರು ಹಲವು ಮತಪತ್ರಗಳಿಗೆ ಗುರುತು ಮಾಡಿ, ಸಹಿ ಹಾಕುತ್ತಿದ್ದಾರೆ. ಇದು ಪ್ರಜಾಪ್ರಭುತ್ವವನ್ನೇ ಅಣುಕಿಸಿದಂತಿದೆ. ತನಗೆ ಯಾವ ಪಕ್ಷ ಬೇಕೋ, ಅದೇ ಪಕ್ಷದ ಎದುರು ಎಲ್ಲ ಮತಪತ್ರಗಳಲ್ಲೂ ಗುರುತು ಹಾಕಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಕಾಂಗ್ರೆಸ್​​ನದ್ದೇ ಟ್ರಿಕ್​ !:

ಹೀಗೆಂದು ಬಿಜೆಪಿ ಆರೋಪ ಮಾಡಿದೆ. ವಿಡಿಯೋಕ್ಕೆ ಪ್ರತಿಕ್ರಿಯೆ ನೀಡಿದ ಬಿಜೆಪಿ ಉತ್ತರಾಖಂಡ ಪ್ರಾದೇಶಿಕ ಮಾಧ್ಯಮ ಉಸ್ತುವಾರಿ ಮನ್ವೀರ್ ಸಿಂಗ್​ ಚೌಹಾಣ್​, ಜನರನ್ನು ತಪ್ಪುದಾರಿಗೆ ಎಳೆಯಲು ಸಾಧ್ಯವಿಲ್ಲ ಎಂಬುದನ್ನು ಕಾಂಗ್ರೆಸ್​ ಮನದಟ್ಟು ಮಾಡಿಕೊಂಡಿದೆ. ಈ ಹಿಂದೆ ಇವಿಎಂ ದುರ್ಬಳಕೆ ಬಗ್ಗೆ ಮಾತನಾಡುತ್ತಿತ್ತು. ಇದೀಗ ಮತಪತ್ರಗಳ ಬಗ್ಗೆಯೂ ತಕರಾರು ಎತ್ತುತ್ತಿದೆ. ಇವೆಲ್ಲ ಕಾಂಗ್ರೆಸ್​ನ ಹತಾಶೆಯ ತಂತ್ರಗಳಾಗಿವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಜಮ್ಮು- ಕಾಶ್ಮೀರದಲ್ಲಿ ಕೊಡಗು ಮೂಲದ ಯೋಧ ಅಲ್ತಾಫ್ ಅಹ್ಮದ್ ಹುತಾತ್ಮ; ಹಿಮಪಾತಕ್ಕೆ ಸಿಲುಕಿ ಮೃತಪಟ್ಟಿರುವ ಮಾಹಿತಿ