ಡೆಹ್ರಾಡೂನ್: ಉತ್ತರಾಖಂಡದ (Uttarakhand ) ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಚುನಾವಣಾ ಪ್ರಚಾರದ ಮುಖ್ಯಸ್ಥ ಹರೀಶ್ ರಾವತ್(Harish Rawat) ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದು, ಅದರಲ್ಲಿ ಪಕ್ಷದ ಸಂಘಟನೆಯು ತನಗೆ ಸಹಾಯ ಮಾಡುವ ಬದಲು ಅಡ್ಡಿಪಡಿಸುತ್ತಿದೆ ಎಂದು ಹೇಳಿದ್ದಾರೆ. ಉತ್ತರಾಖಂಡದಲ್ಲಿ ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆಗಳು (Assembly elections) ನಡೆಯಲಿದ್ದು ಈ ಟ್ವೀಟ್ ಹಲವಾರು ಊಹಾಪೋಹಗಳನ್ನು ಹುಟ್ಟುಹಾಕಿದೆ. ಫೇಸ್‌ಬುಕ್ ಪೋಸ್ಟ್ ಮತ್ತು ತಮ್ಮ ಅಧಿಕೃತ ಟ್ವಿಟರ್ ಖಾತೆಯಿಂದ ಮಾಡಿದ ಸರಣಿ ಟ್ವೀಟ್‌ಗಳಲ್ಲಿ ರಾವತ್ ಅವರು “ಅಧಿಕಾರವು ಚುನಾವಣಾ ಸಾಗರದಲ್ಲಿ ಹಲವಾರು ಮೊಸಳೆಗಳನ್ನು ಬಿಟ್ಟದೆ. ನಾನು ಈಜಲೇ ಬೇಕು. ಪ್ರತಿನಿಧಿಗಳ ಆದೇಶದ ಮೇರೆಗೆ ನಾನು ಈಜುತ್ತಿದ್ದು ನನ್ನ ಕೈಕಟ್ಟಿ ಹಾಕಲಾಗಿದೆ ಎಂದಿದ್ದಾರೆ. ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ತಮ್ಮ ಪೋಸ್ಟ್‌ಗಳ ಬಗ್ಗೆ ವಿವರಣೆ ನೀಡಲು ನಿರಾಕರಿಸಿದರು. ಚುನಾವಣೆಯ ಸಾಗರದಲ್ಲಿ ನಾನು ಹೇಗೆ ಈಜಬೇಕು ಎಂಬುದು ವಿಚಿತ್ರವಾಗಿದೆ. ಸಹಾಯಕ್ಕಾಗಿ ತನ್ನ ತೋಳುಗಳನ್ನು ಚಾಚುವ ಬದಲು, ಸಂಘಟನೆಯು ನನ್ನನ್ನು ನಿರ್ಲಕ್ಷಿಸುತ್ತಿದೆ ಅಥವಾ ನಕಾರಾತ್ಮಕ ಪಾತ್ರವನ್ನು ವಹಿಸುತ್ತಿದೆ. ನಾಯಕತ್ವವು ನಾನು ಈಜಬೇಕಾದ ಸಾಗರದಲ್ಲಿ ಹಲವಾರು ಮೊಸಳೆಗಳನ್ನು ಬಿಟ್ಟಿದೆ ಎಂದು ರಾವತ್ ಟ್ವೀಟ್ ಮಾಡಿದ್ದಾರೆ.
#चुनाव_रूपी_समुद्र
है न अजीब सी बात, चुनाव रूपी समुद्र को तैरना है, सहयोग के लिए संगठन का ढांचा अधिकांश स्थानों पर सहयोग का हाथ आगे बढ़ाने के बजाय या तो मुंह फेर करके खड़ा हो जा रहा है या नकारात्मक भूमिका निभा रहा है। जिस समुद्र में तैरना है,
1/2 pic.twitter.com/wc4LKVi1oc— Harish Rawat (@harishrawatcmuk) December 22, 2021
ಯಾರ ಆದೇಶದ ಮೇರೆಗೆ ನಾನು ಈಜಬೇಕೋ ಆ ಪ್ರತಿನಿಧಿಗಳು ನನ್ನ ಕೈ-ಕಾಲುಗಳನ್ನು ಕಟ್ಟುತ್ತಿದ್ದಾರೆ. ಹಲವಾರು ಸಂದರ್ಭಗಳಲ್ಲಿ, ನಾನು ಸಾಕಷ್ಟು ಈಜಿದ್ದೇನೆ ಮತ್ತು ಇದು ವಿಶ್ರಾಂತಿ ಸಮಯ ಎಂದು ನನ್ನ ಮನಸ್ಸಿಗೆ ಅನಿಸಿತ್ತದೆ. ಆಗ ಇನ್ನೊಂದು ಧ್ವನಿ ಏಳುತ್ತದೆ, ನೀನು ಎಂದಿಗೂ ಅಸಹಾಯಕನಾಗಿರಬೇಡ ಮತ್ತು ಓಡಿಹೋಗಬೇಡ ಎಂದು ಕೇಳುತ್ತದೆ. ನಾನು ಸಂದಿಗ್ಧ ಪರಿಸ್ಥಿತಿಯಲ್ಲಿದ್ದೇನೆ. ಹೊಸ ವರ್ಷ ನನ್ನ ದಾರಿಯನ್ನು ತೋರಿಸಲಿ. ಭಗವಾನ್ ಕೇದಾರನಾಥ ನನಗೆ ದಾರಿ ತೋರಿಸುತ್ತಾನೆ ಎಂದು ನನಗೆ ಖಾತ್ರಿಯಿದೆ ಎಂದು ಅವರು ಇನ್ನೊಂದು ಟ್ವೀಟ್ ಮಾಡಿದ್ದಾರೆ.
ಪೋಸ್ಟ್ ಮಾಡಿದ ನಿಮಿಷಗಳ ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾವತ್ (73) ಅವರು ಪೋಸ್ಟ್‌ನಲ್ಲಿ ಹೇಳಿದ ಎಲ್ಲದರ ಬಗ್ಗೆ ನಂತರ ಮಾತನಾಡುವುದಾಗಿ ಹೇಳಿದರು. “ರಾಜ್ಯದಲ್ಲಿ ಉದ್ಯೋಗ ಸಮಸ್ಯೆ ಮತ್ತು ನಿರುದ್ಯೋಗಿಗಳು ಹೇಗೆ ನೋವಿನಲ್ಲಿದ್ದಾರೆ ಎಂಬುದರ ಕುರಿತು ಇಂದು ಪತ್ರಿಕಾಗೋಷ್ಠಿ ನಡೆದಿತ್ತು. ಇದಾದ ನಂತರ ನಾನು ಟ್ವೀಟ್‌ಗಳಲ್ಲಿ ಹೇಳಿರುವ ವಿಷಯಗಳ ಬಗ್ಗೆ ಇನ್ನೊಮ್ಮೆ ಮಾತನಾಡುತ್ತೇನೆ ಎಂದು ರಾವತ್ ಹೇಳಿದ್ದಾರೆ.
#WATCH | “When the time comes, I will call you and share it with you…For now, enjoy…,” says senior Congress leader Harish Rawat on his cryptic tweets about party leadership pic.twitter.com/ZqfObUuVPr
— ANI (@ANI) December 22, 2021
ಬಹುಕಾಲದಿಂದ ಗುಂಪುಗಾರಿಕೆಯಿಂದ ಸುಸ್ತಾಗಿರುವ ಉತ್ತರಾಖಂಡದಲ್ಲಿ ಕಾಂಗ್ರೆಸ್‌ಗೆ ರಾವತ್ ಅತ್ಯುತ್ತಮ ಭರವಸೆ ಎಂದು ಪರಿಗಣಿಸಲಾಗಿದೆ. ಕಾಂಗ್ರೆಸ್ ಪಕ್ಷವು ಚುನಾವಣೆಗೆ ಒಳಪಟ್ಟಿರುವ ರಾಜ್ಯಕ್ಕೆ ತನ್ನ ಸಿಎಂ ಮುಖವನ್ನು ಇನ್ನೂ ಘೋಷಿಸದಿದ್ದರೂ, ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ರಾವತ್ ಮುನ್ನಡೆಸಲಿದ್ದಾರೆ ಎಂದು ಪಕ್ಷದ ಅನೇಕರು ನಂಬಿದ್ದಾರೆ.
‘ಉತ್ತರಾಖಂಡಿಯತ್’ ಅಥವಾ ಉತ್ತರಾಖಂಡದ ಜೋಷ್ ಇರುವ ರಾವತ್ ಪ್ರಾರಂಭಿಸಿದ ಸಂಭಾಷಣೆಯು ಪಕ್ಷಕ್ಕೆ ಸಹಾಯ ಮಾಡುತ್ತದೆ ಎಂದು ಕಾಂಗ್ರೆಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಮಥುರಾ ದತ್ ಜೋಶಿ ಇತ್ತೀಚೆಗೆ ಹೇಳಿದ್ದಾರೆ.
“ಹರೀಶ್ ರಾವತ್ ಅವರು ರಾಜ್ಯದಲ್ಲಿ ಅತ್ಯಂತ ಜನಪ್ರಿಯ ನಾಯಕರಾಗಿದ್ದಾರೆ ಮತ್ತು ಅವರು ರಾಜ್ಯದಲ್ಲಿ ತಮ್ಮ ವೈಯಕ್ತಿಕ ಮತಗಳಲ್ಲಿ ಸುಮಾರು 7 ರಿಂದ 10 ಪ್ರತಿಶತದಷ್ಟು ಹೊಂದಿದ್ದಾರೆ” ಎಂದು ಜೋಶಿ ಅವರು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಇತ್ತೀಚಿನ ಸಂವಾದದಲ್ಲಿ ಹೇಳಿದ್ದಾರೆ. “ನಾಳೆ ನಮ್ಮ ಮುಖ್ಯಮಂತ್ರಿ ಅಭ್ಯರ್ಥಿ ಯಾರಾಗುತ್ತಾರೆ ಎಂಬುದು ಮುಖ್ಯವಲ್ಲ, ಅದು ಪಕ್ಷವು ನಿರ್ಧರಿಸಬೇಕಾದ ವಿಷಯ, ಆದರೆ ಈಗ ಮತ ಅವರಿಗೆ ಇರುತ್ತದೆ. ಇದು ಹೆಚ್ಚು ಮಹತ್ವದ್ದಾಗಿದೆ. ಹರೀಶ್ ರಾವತ್ ಅವರ ವಯಸ್ಸಿನ ಕಾರಣದಿಂದಾಗಿ ಇದು ಕೊನೆಯ ಚುನಾವಣೆಯಾಗಿರಬಹುದು ಎಂದು ಮತದಾರರಿಗೆ ತಿಳಿದಿರುವುದರಿಂದ ಇದು ಹೆಚ್ಚು ಮಹತ್ವದ್ದಾಗಿದೆ ಎಂದು ಜೋಶಿ ಹೇಳಿದರು.
ಇದನ್ನೂ ಓದಿ: Uttar Pradesh Election 2022: ದೀವಾರ್ ಸಿನಿಮಾ ಡೈಲಾಗ್ನಂತೆ ಮೇರೆ ಪಾಸ್ ಬಹನೇ ಹೈ ಎಂದ ಪ್ರಿಯಾಂಕಾ ಗಾಂಧಿ