Uttar Pradesh Election 2022: ದೀವಾರ್ ಸಿನಿಮಾ ಡೈಲಾಗ್ನಂತೆ ಮೇರೆ ಪಾಸ್ ಬಹನೇ ಹೈ ಎಂದ ಪ್ರಿಯಾಂಕಾ ಗಾಂಧಿ
Priyanka Gandhi ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಮೇರೆ ಪಾಸ್ ಬಹನೇ ಹೈ, ಬಹನೇ ರಾಜ್ನೀತಿ ಮೈ ಬದಲಾಂವ್ ಲಾಯೇಗೀ ಎಂದಿದ್ದಾರೆ.
ಲಖನೌ: ಉತ್ತರ ಪ್ರದೇಶದ ಚುನಾವಣೆಯಲ್ಲಿ (Uttar Pradesh) ಕಾಂಗ್ರೆಸ್ (Congress) ಪ್ರಚಾರ ಘೋಷಣೆಯಾದ ‘ಲಡ್ಕಿ ಹೂಂ, ಲಡ್ ಸಕ್ತಿ ಹೂಂ’(ಹೆಣ್ಣು ನಾನು, ಹೋರಾಡಬಲ್ಲೆ) ವಿರುದ್ಧದ ಟೀಕೆಗಳಿಂದ ವಿಚಲಿತರಾಗದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ಮುಂಬರುವ ಚುನಾವಣೆಯಲ್ಲಿ ಮಹಿಳಾ ಸಬಲೀಕರಣವೇ ಕಾಂಗ್ರೆಸ್‌ನ ಪ್ರಮುಖ ಶಕ್ತಿಯಾಗಿ ಉಳಿಯಲಿದೆ ಎಂದು ಹೇಳಿದ್ದಾರೆ. ಸುದ್ದಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕಿ ಮೇರೆ ಪಾಸ್ ಬಹನೇ ಹೈ, ಬಹನೇ ರಾಜ್ನೀತಿ ಮೈ ಬದಲಾಂವ್ ಲಾಯೇಗೀ (ನನ್ನ ಬಳಿ ಸಹೋದರಿಯರಿದ್ದಾರೆ. ಸಹೋದರಿಯರು ರಾಜಕೀಯದಲ್ಲಿ ಬದಲಾವಣೆ ತರುತ್ತಾರೆ) ಎಂದು ಹೇಳಿದ್ದಾರೆ. ವಿಡಿಯೊದಲ್ಲಿ ನಗುತ್ತಾಸಂದರ್ಶಕರೊಂದಿಗೆ ಮಾತನಾಡಿದ ಪ್ರಿಯಾಂಕಾ 1975 ರ ಬಾಲಿವುಡ್ ಸಿನಿಮಾ ದೀವಾರ್ನಲ್ಲಿ ಶಶಿ ಕಪೂರ್ ಪಾತ್ರ ನೆನಪಿದೆಯೇ. “ನೀವು ಆ ಡೈಲಾಗ್ ಕೇಳಿದ್ದೀರಾ? ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಮತ್ತು ಶಶಿ ಕಪೂರ್ ಸಹೋದರರಾಗಿದ್ದರು. ಅಮಿತಾಬ್ ಬಚ್ಚನ್ ಶಶಿ ಕಪೂರ್‌ಗೆ ‘ಮೇರೆ ಪಾಸ್ ಗಾಡಿ ಹೈ , ಬಂಗಲಾ ಹೈ, ಯೇ ಹೈ, ವೋ ಹೈ’ ಎಂದು ಹೇಳುತ್ತಾರೆ. ಆಗ ಶಶಿ ಕಪೂರ್, ‘ಮೇರೆ ಪಾಸ್ ಮಾ ಹೈ’ ಎಂದು ಹೇಳುತ್ತಾರೆ. ಹಾಗಾಗಿ, ನಾನು ಕೂಡ ‘ಮೇರೆ ಪಾಸ್ ಬಹೆನ್ ಹೈ’ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.
मेरे पास बहनें हैं…
बहनें राजनीति में बदलाव लाएंगी।#लड़की_हूं_लड़_सकती_हूं pic.twitter.com/v2uVpsO1wA
— Priyanka Gandhi Vadra (@priyankagandhi) December 22, 2021
ಮಹಿಳಾ ಮತದಾರರಿಗೆ ಆದ್ಯತೆ ನೀಡಿ, ಕಾಂಗ್ರೆಸ್ ಈ ಬಾರಿ ಉತ್ತರ ಪ್ರದೇಶಕ್ಕೆ ಮಹಿಳಾ ಪ್ರಣಾಳಿಕೆಯನ್ನು ಹೊರತಂದಿದೆ. ಪಕ್ಷವು ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಶೇ 40 ಕೋಟಾವನ್ನು ಭರವಸೆ ನೀಡಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೇರಿದಂತೆ ತೆರಿಗೆ ರಿಯಾಯಿತಿ ಮತ್ತು ಇತರ ಸೌಲಭ್ಯಗಳನ್ನು ಪಕ್ಷವು ಭರವಸೆ ನೀಡಿದೆ. ಮಹಿಳಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡುವ ಮುನ್ನ ಪಕ್ಷವು 12 ಉತ್ತೀರ್ಣರಾದ ಬಾಲಕಿಯರಿಗೆ ಸ್ಮಾರ್ಟ್‌ಫೋನ್ ಮತ್ತು ಎಲ್ಲಾ ಪದವೀಧರ ಬಾಲಕಿಯರಿಗೆ ಸ್ಕೂಟಿ ನೀಡುವುದಾಗಿ ಭರವಸೆ ನೀಡಿತ್ತು. ಕಾಂಗ್ರೆಸ್‌ನ ಘೋಷಣೆಯನ್ನು ಲೇವಡಿ ಮಾಡಿದ ಕೇಂದ್ರ ಸಚಿವೆ ಸ್ಮೃತಿ ಇರಾನಿ, “ಘರ್ ಪರ್ ಲಡ್ಕಾ ಹೈ ಪರ್ ಲಡ್ ನಹೀನ್ ಸಕ್ತಾ (ಮನೆಯಲ್ಲಿ ಹುಡುಗನಿದ್ದಾನೆ ಆದರೆ ಆತ ಹೋರಾಡಲಾರ) ಎಂದು ಹೇಳಿದ್ದರು. ಮಹಿಳಾ ಸಬಲೀಕರಣದ ಮೇಲೆ ಕಾಂಗ್ರೆಸ್‌ನ ಗಮನವು ಇತರ ಪಕ್ಷಗಳು ಮಹಿಳೆಯರ ಬಗ್ಗೆ ಮಾತನಾಡುವಂತೆ ಮಾಡಿದೆ ಎಂದು ಪ್ರಿಯಾಂಕಾ ಇತ್ತೀಚೆಗೆ ಹೇಳಿದ್ದಾರೆ. “ನನ್ನ ಉಪಕ್ರಮದ ಪ್ರಭಾವ ಎಷ್ಟರಮಟ್ಟಿಗಿತ್ತು ಎಂದರೆ ಈಗ ಎಲ್ಲಾ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಮಾತನಾಡುತ್ತಿವೆ. ನಾಳೆಯ ನಂತರ ಪ್ರಧಾನ ಮಂತ್ರಿಗಳು ಮಹಿಳೆಯರನ್ನು ಮಾತ್ರ ಆಹ್ವಾನಿಸುವ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಈಗ ಎಲ್ಲಾ ರಾಜಕೀಯ ಪಕ್ಷಗಳು ಮಹಿಳೆಯರ ಬಗ್ಗೆ ಮಾತನಾಡಲು ಪ್ರಾರಂಭಿಸಿವೆ ಎಂದು ಪ್ರಿಯಾಂಕಾ ಭಾನುವಾರ ಹೇಳಿದ್ದಾರೆ.
ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಮಕ್ಕಳ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆರೋಪ; ತನಿಖೆಗೆ ಆದೇಶಿಸಿದ ಕೇಂದ್ರ ಸರ್ಕಾರ