ಒಮಿಕ್ರಾನ್ ಪ್ರಕರಣಗಳ ಏರಿಕೆ: ದೆಹಲಿಯಲ್ಲಿ ಕ್ರಿಸ್ಮಸ್, ಹೊಸ ವರ್ಷದ ಕೂಟಗಳಿಗೆ ನಿಷೇಧ
ಎಲ್ಲಾ ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಜಿಲ್ಲಾ ಡಿಸಿಪಿಗಳು ದೆಹಲಿಯ ಎನ್‌ಸಿಟಿಯಲ್ಲಿ ಕ್ರಿಸ್‌ಮಸ್ ಅಥವಾ ಹೊಸ ವರ್ಷವನ್ನು ಆಚರಿಸಲು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ / ಕೂಟಗಳು / ಸಭೆ / ನಡೆಯದಂತೆ ನೋಡಿಕೊಳ್ಳಬೇಕು" ಎಂದು ಆದೇಶದಲ್ಲಿ ಹೇಳಲಾಗಿದೆ.
ದೆಹಲಿ: ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು (Delhi Disaster Management Authority) ದೆಹಲಿಯಲ್ಲಿ ಕ್ರಿಸ್‌ಮಸ್ (Christmas) ಮತ್ತು ಹೊಸ ವರ್ಷದ ಆಚರಣೆಗಳಿಗಾಗಿ (New Year celebrations)ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕೂಟಗಳನ್ನು ನಿಷೇಧಿಸಿ ಬುಧವಾರ ಆದೇಶ ಹೊರಡಿಸಿದೆ. ಒಮಿಕ್ರಾನ್ ರೂಪಾಂತರದ ಪ್ರಕರಣಗಳು ಹೆಚ್ಚುತ್ತಿವೆ. ಹರಡುವಿಕೆಯನ್ನು ನಿಯಂತ್ರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತಮ್ಮ ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವಂತೆ ಡಿಡಿಎಂಎ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಹೆಚ್ಚುತ್ತಿರುವ ಕೊವಿಡ್ ಪ್ರಕರಣಗಳು ಮತ್ತು ಒಮಿಕ್ರಾನ್‌ನ ರೂಪಾಂತರವನ್ನು ಗಮನದಲ್ಲಿಟ್ಟುಕೊಂಡು, ಹರಡುವಿಕೆಯನ್ನು ನಿಯಂತ್ರಿಸಲು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಡಿಎಂಗಳಿಗೆ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಸೂಚನೆ ನೀಡಿದೆ. ಅಂಗಡಿಗಳು/ಕೆಲಸದ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ಪ್ರವೇಶ ನಿಷೇಧಿಸುವಂತೆ ಸೂಚನೆ ಹೇಳಿದೆ.
Delhi Disaster Management Authority in view of rising COVID cases and variant of concern-Omicron, instructs DMs to take all required measures in their respective jurisdictions to control the spread. No mask/No entry should be strictly ensured at shops/workplaces pic.twitter.com/LyHgcM3cv5
— ANI (@ANI) December 22, 2021
ಎಲ್ಲಾ ಜಿಲ್ಲಾ ಮೆಜಿಸ್ಟ್ರೇಟ್ ಮತ್ತು ಜಿಲ್ಲಾ ಡಿಸಿಪಿಗಳು ದೆಹಲಿಯ ಎನ್‌ಸಿಟಿಯಲ್ಲಿ ಕ್ರಿಸ್‌ಮಸ್ ಅಥವಾ ಹೊಸ ವರ್ಷವನ್ನು ಆಚರಿಸಲು ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮ / ಕೂಟಗಳು / ಸಭೆ / ನಡೆಯದಂತೆ ನೋಡಿಕೊಳ್ಳಬೇಕು” ಎಂದು ಆದೇಶದಲ್ಲಿ ಹೇಳಲಾಗಿದೆ.
“All DMs and District DCPs shall ensure that no cultural event/gatherings/congregation/take place for celebrating Christmas or New Year in NCT of Delhi,” reads the DDMA order pic.twitter.com/zyLAkc0mUx
— ANI (@ANI) December 22, 2021
ಸರ್ಕಾರದ ಅಂಕಿಅಂಶಗಳ ಪ್ರಕಾರ ದೆಹಲಿಯು 57 ಪ್ರಕರಣಗಳೊಂದಿಗೆ ಒಮಿಕ್ರಾನ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.ಮಹಾರಾಷ್ಟ್ರ (54), ತೆಲಂಗಾಣ (24) ಮತ್ತು ಕರ್ನಾಟಕ (19) ನಂತರದ ಸ್ಥಾನದಲ್ಲಿದೆ.
ಹೊಸ ರೂಪಾಂತರದಿಂದ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇದ್ದು ಕೇಂದ್ರ ಸರ್ಕಾರ “ವಾರ್ ರೂಂ” ಸಕ್ರಿಯಗೊಳಿಸಲು ಮತ್ತು ರಾತ್ರಿ ಕರ್ಫ್ಯೂ ಸೇರಿದಂತೆ ನಿರ್ಬಂಧಗಳನ್ನು ಮರಳಿ ತರಲು ರಾಜ್ಯಗಳನ್ನು ಕೇಳಿದೆ. ಇದು ವ್ಯಾಪಕವಾದ ಪರೀಕ್ಷೆ ಮತ್ತು ಕೂಟಗಳ ನಿಯಂತ್ರಣವನ್ನು ಒಳಗೊಂಡಿರುವ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳ ಸರಣಿಯನ್ನು ಪಟ್ಟಿಮಾಡಿದೆ.
ದೇಶವು 6,317 ಹೊಸ ಸೋಂಕುಗಳನ್ನು ವರದಿ ಮಾಡಿದ ನಂತರ ಭಾರತದ ಕೊರೊನಾವೈರಸ್ ಸಂಖ್ಯೆ ಇಂದು 3,47,58,481 ಕ್ಕೆ ತಲುಪಿದೆ, ಇದು ನಿನ್ನೆಯ 5,326 ಪ್ರಕರಣಗಳಿಂದ ಶೇಕಡಾ 18 ರಷ್ಟು ಹೆಚ್ಚಾಗಿದೆ. ಸಕ್ರಿಯ ಪ್ರಕರಣಗಳು 78,190 ಕ್ಕೆ ಇಳಿದಿವೆ, ಇದು 575 ದಿನಗಳಲ್ಲಿ ಕಡಿಮೆಯಾಗಿದೆ. ಕಳೆದ 24 ಗಂಟೆಗಳಲ್ಲಿ 318 ಸಾವುಗಳೊಂದಿಗೆ ಒಟ್ಟು ಸಾವಿನ ಸಂಖ್ಯೆ 4.78 ಲಕ್ಷಕ್ಕೆ ಏರಿದೆ.
ಒಮಿಕ್ರಾನ್ ರೂಪಾಂತರವು ಡೆಲ್ಟಾ ರೂಪಾಂತರಕ್ಕಿಂತ ವೇಗವಾಗಿ ಹರಡುತ್ತಿದೆ ಮತ್ತು ಈಗಾಗಲೇ ಲಸಿಕೆ ಹಾಕಿದ ಅಥವಾ ಕೋವಿಡ್‌ನಿಂದ ಚೇತರಿಸಿಕೊಂಡ ಜನರಲ್ಲಿ ಸೋಂಕನ್ನು ಉಂಟುಮಾಡುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಇದನ್ನೂ ಓದಿ: Uttar Pradesh Election 2022: ದೀವಾರ್ ಸಿನಿಮಾ ಡೈಲಾಗ್ನಂತೆ ಮೇರೆ ಪಾಸ್ ಬಹನೇ ಹೈ ಎಂದ ಪ್ರಿಯಾಂಕಾ ಗಾಂಧಿ
ಇದನ್ನೂ ಓದಿ: ಕೊವಿಡ್ ವಾರ್ ರೂಂ ಸಕ್ರಿಯಗೊಳಿಸಲು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಸೂಚನೆ
Published On - 5:08 pm, Wed, 22 December 21