Inspiring Story: ಮಗಳೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ

ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್ ಅವರು ತಮ್ಮ ಮಗಳು ಸಂಯುಕ್ತಾ ಜೊತೆ ನೀಟ್ ಯುಜಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಗಳ ನೀಟ್ ತಯಾರಿಯ ಸಮಯದಲ್ಲಿ ಸ್ಫೂರ್ತಿ ಪಡೆದು ಅವರೂ ಪರೀಕ್ಷೆ ಬರೆದರು. ಕಷ್ಟಕರ ಪಠ್ಯಕ್ರಮವನ್ನು ಮೀರಿ, ಅಮ್ಮ-ಮಗಳ ಇಬ್ಬರೂ ತಮ್ಮ ವೈದ್ಯಕೀಯ ಕನಸನ್ನು ನನಸಾಗಿಸಿಕೊಳ್ಳಲು ಮುಂದುವರಿದಿದ್ದಾರೆ. ಇದು ಅನೇಕ ಮಹಿಳೆಯರಿಗೆ ಸ್ಫೂರ್ತಿಯಾಗಿದೆ.

Inspiring Story: ಮಗಳೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾದ ತಾಯಿ
ನೀಟ್​ ಪರೀಕ್ಷೆ ಬರೆದ ತಾಯಿ ಮಗಳು

Updated on: Aug 02, 2025 | 2:55 PM

ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್(Amuthavalli Manivannan) ಅವರು ತಮ್ಮ ಮಗಳು ಸಂಯುಕ್ತಾ ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ.

ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ.

ಇದನ್ನೂ ಓದಿ: ಷೇರು ಮಾರುಕಟ್ಟೆ ಸ್ಟಾಕ್ ಬ್ರೋಕರ್ ಆಗಲು ಪಿಯುಸಿ ಬಳಿಕ ಯಾವ ಕೋರ್ಸ್​​​ ಮಾಡಬೇಕು?

ಮಾಧ್ಯಮ ವರದಿಗಳ ಪ್ರಕಾರ, ಸಂಯುಕ್ತಾ ನೀಟ್‌ಗೆ ತಯಾರಿ ನಡೆಸಲು ಕೋಚಿಂಗ್​​ ಕ್ಲಾಸ್​​ ತೆಗೆದುಕೊಳ್ಳುವ ವೇಳೆ ತಾಯಿಯೂ ಬೆಂಬಲವಾಗಿ ಅವಳೊಂದಿಗೆ ಜೊತೆಯಾಗುತ್ತಿದ್ದರು. ಹೀಗೆ ಮಗಳಿಗೆ ಸಾಥ್ನೀಡುತ್ತಾ ಇದೀಗ ಅಮ್ಮ ಮಗಳು ಇಬ್ಬರೂ ಒಟ್ಟಿಗೆ ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Sat, 2 August 25