ಬ್ಯಾಂಕ್ ಆಫ್ ಬರೋಡಾದಲ್ಲಿ ಗುತ್ತಿಗೆ ಆಧಾರದ ಮೇಲೆ ಸಂಪತ್ತು ನಿರ್ವಹಣಾ ಸೇವೆಗಳ (ವೆಲ್ತ್ ಮ್ಯಾನೇಜ್‌ಮೆಂಟ್ ಸೇವೆ) ವಿಭಾಗದಲ್ಲಿ 58 ಹುದ್ದೆಗಳು ಖಾಲಿ ಇದ್ದು, ಅರ್ಹರು ಅರ್ಜಿ ಸಲ್ಲಿಸಬಹುದು. ಜನವರಿ 7ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, 2022ರ ಜನವರಿ 27ರ ಒಳಗೆ ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್‌ಸೈಟ್ bankofbaroda.in ಮೂಲಕ ನೋಂದಣಿ ಮಾಡಬಹುದು.
ಯಾವೆಲ್ಲಾ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ?
ಮುಖ್ಯ-ವೆಲ್ತ್ ಸ್ಟ್ರಾಟೆಜಿಸ್ಟ್ (ಹೂಡಿಕೆ ಮತ್ತು ವಿಮೆ)- 1 ಹುದ್ದೆ
ವೆಲ್ತ್ ಸ್ಟ್ರಾಟೆಜಿಸ್ಟ್ (ಹೂಡಿಕೆ ಮತ್ತು ವಿಮೆ)- 28 ಪೋಸ್ಟ್
ಇನ್ವೆಸ್ಟ್ಮೆಂಟ್ ರಿಸರ್ಚ್ ಮ್ಯಾನೇಜರ್ (ಪೋರ್ಟ್‌ಫೋಲಿಯೊ ಮತ್ತು ಡೇಟಾ ವಿಶ್ಲೇಷಣೆ ಮತ್ತು ಸಂಶೋಧನೆ)- 2 ಹುದ್ದೆ
ಪೋರ್ಟ್‌ಫೋಲಿಯೊ ರಿಸರ್ಚ್ ಅನಲಿಸ್ಟ್ ಹುದ್ದೆ- 2 ಪೋಸ್ಟ್
ಎನ್‌ಆರ್‌ಐ ವೆಲ್ತ್ ಪ್ರಾಡಕ್ಟ್ ಮ್ಯಾನೇಜರ್- 1 ಪೋಸ್ಟ್
ಪ್ರಾಡಕ್ಟ್ ಮ್ಯಾನೇಜರ್ (ಟ್ರೇಡ್ ಮತ್ತು ಫಾರೆಕ್ಸ್)- 1 ಹುದ್ದೆ
ಟ್ರೇಡ್ ರೆಗ್ಯುಲೇಷನ್ ಹಿರಿಯ ಮ್ಯಾನೇಜರ್- 1 ಹುದ್ದೆ
ಖಾಸಗಿ ಬ್ಯಾಂಕಿಂಗ್ನ ಪ್ರಾಡಕ್ಟ್ ಹೆಡ್- 1 ಪೋಸ್ಟ್
ಗ್ರೂಪ್ ಸೇಲ್ಸ್ ಹೆಡ್- 1 ಹುದ್ದೆ
ಪ್ರೈವೇಟ್ ಬ್ಯಾಂಕರ್- ರೇಡಿಯನ್ಸ್ ಪ್ರೈವೇಟ್- 20 ಹುದ್ದೆಗಳು
ಉದ್ಯೋಗದ ಸ್ವರೂಪ:
5 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದಲ್ಲಿ ಆಯ್ಕೆ ಮಾಡಿಕೊಳ್ಳಲಾಗುವುದು. ಕಾರ್ಯಕ್ಷಮತೆಯ ಆಧಾರದಲ್ಲಿ ಬ್ಯಾಂಕಿಂಗ್ ಗುತ್ತಿಗೆ ಅವಧಿಯನ್ನು ವಿಸ್ತರಿಸಬಹುದು ಎಂದು ಅಧಿಕೃತ ಸೂಚನೆಯಲ್ಲಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ:
ಶಾರ್ಟ್ ಲಿಸ್ಟಿಂಗ್ ಮಾಡಿದ ನಂತರ ವೈಯಕ್ತಿಕ ಸಂದರ್ಶನ ಮತ್ತು/ಅಥವಾ ಗುಂಪು ಚರ್ಚೆ ಮತ್ತು/ಅಥವಾ ಯಾವುದೇ ಇತರ ಆಯ್ಕೆ ವಿಧಾನವನ್ನು ಆಧರಿಸಿ ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
(ಹೆಚ್ಚಿನ ಮಾಹಿತಿಗಾಗಿ ವಿವರವಾದ ಅಧಿಸೂಚನೆಗಳನ್ನು ಪರಿಶೀಲಿಸಿ)
ಅರ್ಜಿ ಶುಲ್ಕ:
ಸಾಮಾನ್ಯ ಮತ್ತು OBC ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ₹ 600 ಅರ್ಜಿ ಶುಲ್ಕ ಮತ್ತು ಮಾಹಿತಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. SC/ ST/PWD/ಮಹಿಳಾ ಅಭ್ಯರ್ಥಿಗಳು ₹ 100 ಇಂಟಿಮೇಷನ್ ಶುಲ್ಕವಾಗಿ ಪಾವತಿಸಬೇಕು.
ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ವಯೋಮಿತಿ, ಅನುಭವ ಸೇರಿದಂತೆ ವಿವರವಾದ ಅಧಿಸೂಚನೆಗಳನ್ನು ಪರಾಮರ್ಶಿಸಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಬ್ಯಾಂಕ್ ಆಫ್ ಬರೋಡಾ (bankofbaroda.in/career) ತಾಣವನ್ನು ವೀಕ್ಷಿಸಬಹುದು.
ಇದನ್ನೂ ಓದಿ:
ಫೇಸ್ಬುಕ್ ಹಾಗೂ ಗೂಗಲ್ಗೆ ಫ್ರಾನ್ಸ್ನಲ್ಲಿ ದಂಡದ ಬರೆ; ಅಷ್ಟಕ್ಕೂ ಈ ಟೆಕ್ ದೈತ್ಯರು ಮಾಡಿದ ತಪ್ಪೇನು?
BHEL Recruitment 2022: ಬಿಎಚ್ಇಎಲ್ನಲ್ಲಿ ಉದ್ಯೋಗಾವಕಾಶ: 36 ಹುದ್ದೆಗಳಿಗೆ ಅರ್ಜಿ ಆಹ್ವಾನ