
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಅಧಿಕೃತ ಅಧಿಸೂಚನೆಯ ಮೂಲಕ ಹಾಸನದಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 09ರ ಮೊದಲು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಹುದ್ದೆಯ ಹೆಸರು ಹಾಗೂ ಒಟ್ಟು ಹುದ್ದೆಯ ಸಂಖ್ಯೆ ಇಲ್ಲಿದೆ.
| ಯೋಜನೆಯ ಹೆಸರು | ಅಂಗನವಾಡಿ ಕಾರ್ಯಕರ್ತೆ | ಅಂಗನವಾಡಿ ಸಹಾಯಕಿ |
| ಆಲೂರ್ | 4 | 25 |
| ಅರ್ಕಲಗುಡ್ | 22 | 62 |
| ಅರಸೀಕೆರೆ | 51 | 138 |
| ಬೇಲೂರು | 11 | 91 |
| ಚನ್ನರಾಯಪಟ್ಟಣ | 48 | 123 |
| ಹಾಸನ | 20 | 93 |
| ಹೊಳೆ ನರಸೀಪುರ | 33 | 70 |
| ಸಕಲೇಶಪುರ | 13 | 53 |
ಇದನ್ನೂ ಓದಿ: ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಿಕೊಳ್ಳಲು ಸುವರ್ಣವಕಾಶ; ತಿಂಗಳಿಗೆ 60 ಸಾವಿರ ರೂ. ಸಂಬಳ
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:06 pm, Thu, 13 March 25