AAI Recruitment 2022
AAI Recruitment 2022: ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI) ಜೂನಿಯರ್ ಅಸಿಸ್ಟೆಂಟ್ ಮತ್ತು ಸೀನಿಯರ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AAI ಯ ಅಧಿಕೃತ ವೆಬ್‌ಸೈಟ್ www.aai.aero ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಇನ್ನಷ್ಟು ಮಾಹಿತಿ ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 156
- ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) NE-4: 132 ಹುದ್ದೆಗಳು
- ಜೂನಿಯರ್ ಅಸಿಸ್ಟೆಂಟ್ (ಕಚೇರಿ) NE-4: 10 ಹುದ್ದೆಗಳು
- ಹಿರಿಯ ಸಹಾಯಕ (ಖಾತೆಗಳು) NE-6: 13 ಹುದ್ದೆಗಳು
- ಹಿರಿಯ ಸಹಾಯಕ (ಅಧಿಕೃತ ಭಾಷೆ) NE-6: 1 ಹುದ್ದೆ
ಅರ್ಹತಾ ಮಾನದಂಡಗಳು:
- ಜೂನಿಯರ್ ಅಸಿಸ್ಟೆಂಟ್ (ಅಗ್ನಿಶಾಮಕ ಸೇವೆ) – ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಮತ್ತು 3 ವರ್ಷಗಳ ಡಿಪ್ಲೋಮಾ ಇನ್ ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ಮಾಡಿರಬೇಕು. ಅಥವಾ 12ನೇ ತರಗತಿ ಪಾಸ್ ಆಗಿರಬೇಕು.
- ಜೂನಿಯರ್ ಅಸಿಸ್ಟೆಂಟ್ (ಕಚೇರಿ) – ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಮಾಡಿರಬೇಕು.
ಹಿರಿಯ ಸಹಾಯಕ (ಖಾತೆಗಳು) – 3 ಅಥವಾ 6 ತಿಂಗಳ ಕಂಪ್ಯೂಟರ್ ಪ್ರಮಾಣಪತ್ರದೊಂದಿಗೆ ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ವಾಣಿಜ್ಯದಲ್ಲಿ ಪದವಿ ಪಡೆದಿರಬೇಕು.
- ಹಿರಿಯ ಸಹಾಯಕ (ಅಧಿಕೃತ ಭಾಷೆ) – ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಮಾಡಿರಬೇಕು.
ಅರ್ಜಿ ಶುಲ್ಕ:
- UR/OBC/EWS ವರ್ಗದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ರೂ. 1000/-
- SC/ ST/ ಮಹಿಳೆಯರು/ ಮಾಜಿ ಸೈನಿಕರು/ PWD ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ವಯೋಮಿತಿ:
18 ರಿಂದ 30 ವರ್ಷದವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಮುಖ ದಿನಾಂಕಗಳು:
- ಅರ್ಜಿ ಸಲ್ಲಿಸಲು ಪ್ರಾರಂಭಿಕ ದಿನಾಂಕ – ಸೆಪ್ಟೆಂಬರ್ 1, 2022
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ಸೆಪ್ಟೆಂಬರ್ 30, 2022
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.