AAI Recruitment 2022: ಏರ್​ಪೋರ್ಟ್​​ನಲ್ಲಿದೆ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ

| Updated By: ಝಾಹಿರ್ ಯೂಸುಫ್

Updated on: Oct 09, 2022 | 5:21 PM

AAI Recruitment 2022: ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AAI ನ ಅಧಿಕೃತ ವೆಬ್‌ಸೈಟ್ aai.aero ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

AAI Recruitment 2022: ಏರ್​ಪೋರ್ಟ್​​ನಲ್ಲಿದೆ ಉದ್ಯೋಗಾವಕಾಶ: ಇಂದೇ ಅರ್ಜಿ ಸಲ್ಲಿಸಿ
AAI Recruitment 2022
Follow us on

AAI Recruitment 2022: ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (AAI ) ಗ್ರಾಜುಯೇಟ್/ಡಿಪ್ಲೊಮಾ ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಈ ಪೋಸ್ಟ್‌ಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು AAI ನ ಅಧಿಕೃತ ವೆಬ್‌ಸೈಟ್ aai.aero ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:
ಒಟ್ಟು ಹುದ್ದೆಗಳ ಸಂಖ್ಯೆ- 131

ಅರ್ಹತಾ ಮಾನದಂಡಗಳು:

ಅಭ್ಯರ್ಥಿಗಳು AICTE, GOI ನಿಂದ ಗುರುತಿಸಲ್ಪಟ್ಟ ಯಾವುದೇ ಸ್ಟ್ರೀಮ್‌ಗಳಲ್ಲಿ ಪೂರ್ಣ ಸಮಯದ (ನಿಯಮಿತ) ನಾಲ್ಕು ವರ್ಷಗಳ ಪದವಿ ಅಥವಾ ಮೂರು ವರ್ಷಗಳ (ನಿಯಮಿತ) ಇಂಜಿನಿಯರಿಂಗ್ ಡಿಪ್ಲೊಮಾವನ್ನು ಹೊಂದಿರಬೇಕು.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ 26 ವರ್ಷಕ್ಕಿಂತ ಹೆಚ್ಚಿರಬಾರದು.

ಅರ್ಜಿ ಶುಲ್ಕ:
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ಯಾವುದೇ ಮೊತ್ತವನ್ನು ಪಾವತಿಸಬೇಕಾಗಿಲ್ಲ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – ನವೆಂಬರ್ 7, 2022

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.