Bank of Baroda Recruitment 2023: ಬರೋಡಾ ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ

| Updated By: ಝಾಹಿರ್ ಯೂಸುಫ್

Updated on: Feb 13, 2023 | 2:38 PM

Bank of Baroda Recruitment 2023: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್​ಸೈಟ್​ bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

Bank of Baroda Recruitment 2023: ಬರೋಡಾ ಬ್ಯಾಂಕ್ ನೇಮಕಾತಿ: ಪದವೀಧರರಿಗೆ ಸುವರ್ಣಾವಕಾಶ
Bank of Baroda Recruitment 2023
Follow us on

Bank of Baroda Recruitment 2023: ಬ್ಯಾಂಕ್ ಆಫ್ ಬರೋಡಾ (Bank of Baroda) ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 9 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಬ್ಯಾಂಕ್ ಆಫ್ ಬರೋಡಾದ ಅಧಿಕೃತ ವೆಬ್​ಸೈಟ್​ bankofbaroda.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಡೆಪ್ಯುಟಿ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ (DDBA)- 5 ಹುದ್ದೆಗಳು
  • ಡಿಫೆನ್ಸ್​ ರಿಲೇಶನ್​​ಶಿಪ್ ಮ್ಯಾನೇಜರ್ (DRM)- 2 ಹುದ್ದೆಗಳು
  • ಚೀಫ್ HR ಅನಾಲಿಟಿಕ್ಸ್​-1 ಹುದ್ದೆ
  • ಸೀನಿಯರ್ ಮ್ಯಾನೇಜರ್ – HR ಅನಾಲಿಟಿಕ್ಸ್​- 1 ಹುದ್ದೆ

ಅರ್ಹತಾ ಮಾನದಂಡಗಳು:

ಇದನ್ನೂ ಓದಿ
Income Tax Recruitment 2023: ಸರ್ಕಾರಿ ಉದ್ಯೋಗ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
AIASL Recruitment 2023: ಏರ್​ ಇಂಡಿಯಾ ನೇಮಕಾತಿ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Karnataka Post Office Recruitment 2023: ಕರ್ನಾಟಕ ಅಂಚೆ ಇಲಾಖೆ ನೇಮಕಾತಿ: 10ನೇ ತರಗತಿ ಪಾಸಾದವರಿಗೆ ಉದ್ಯೋಗಾವಕಾಶ
SBI Recruitment 2023: ಎಸ್​ಬಿಐ ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ
  • ಡೆಪ್ಯುಟಿ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ (DDBA)- ಈ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಡಿಫೆನ್ಸ್​ ರಿಲೇಶನ್​​ಶಿಪ್ ಮ್ಯಾನೇಜರ್ (DRM)- ಪದವಿ ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
  • ಚೀಫ್- HR ಅನಾಲಿಟಿಕ್ಸ್​- ಸ್ನಾತಕೋತ್ತರ ಪದವಿ ಹಾಗೂ ಪದವಿ ಮಾಡಿರುವ ಅಭ್ಯರ್ಥಿಗಳಿಗೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.
  • ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್​- ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ವಯೋಮಿತಿ:

  • ಡೆಪ್ಯುಟಿ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ (DDBA)- ಗರಿಷ್ಠ ವಯೋಮಿತಿ 57 ವರ್ಷ
  • ಡಿಫೆನ್ಸ್​ ರಿಲೇಶನ್​​ಶಿಪ್ ಮ್ಯಾನೇಜರ್ (DRM)- ಗರಿಷ್ಠ ವಯೋಮಿತಿ 54 ವರ್ಷ
  • ಚೀಫ್- HR ಅನಾಲಿಟಿಕ್ಸ್​- 29 ರಿಂದ 45 ವರ್ಷದೊಳಿಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
  • ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್​- 27 ರಿಂದ 40 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವೇತನ:

  • ಡೆಪ್ಯುಟಿ ಡಿಫೆನ್ಸ್​ ಬ್ಯಾಂಕಿಂಗ್ ಅಡ್ವೈಸರ್ (DDBA)- ವಾರ್ಷಿಕ ವೇತನ 18 ಲಕ್ಷ ರೂ.
  • ಡಿಫೆನ್ಸ್​ ರಿಲೇಶನ್​​ಶಿಪ್ ಮ್ಯಾನೇಜರ್ (DRM)- ವಾರ್ಷಿಕ ವೇತನ 9 ಲಕ್ಷ ರೂ.
  • ಚೀಫ್- HR ಅನಾಲಿಟಿಕ್ಸ್​- ಈ ಹುದ್ದೆಗಳಿಗೆ ಆಯ್ಕೆಯಾದ ಬಳಿಕ ವೇತನ ನಿಗದಿಪಡಿಸಲಾಗುತ್ತದೆ.
  • ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್​- ಈ ಹುದ್ದೆಗಳಿಗೆ ಆಯ್ಕೆಯಾದ ಬಳಿಕ ವೇತನ ನಿಗದಿಪಡಿಸಲಾಗುತ್ತದೆ.

ಅರ್ಜಿ ಶುಲ್ಕ:

  • ಸಾಮಾನ್ಯ/EWS ಮತ್ತು OBC ಅಭ್ಯರ್ಥಿಗಳಿಗೆ- 600 ರೂ.
  • SC/ST/PWD & ಮಹಿಳಾ ಅಭ್ಯರ್ಥಿಗಳಿಗೆ- 100 ರೂ.

ಪ್ರಮುಖ ದಿನಾಂಕ:

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 2, 2023

ಅರ್ಜಿ ಸಲ್ಲಿಸುವುದು ಹೇಗೆ?

ಈ ಕೆಳಗೆ ನೀಡಲಾದ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

  • DDBA, DRM ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.
  • ಚೀಫ್- HR ಅನಾಲಿಟಿಕ್ಸ್​, ಸೀನಿಯರ್ ಮ್ಯಾನೇಜರ್- HR ಅನಾಲಿಟಿಕ್ಸ್​ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ.

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.

 

 

 

Published On - 2:37 pm, Mon, 13 February 23