Income Tax Recruitment 2023: ಸರ್ಕಾರಿ ಉದ್ಯೋಗ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ
Income Tax Recruitment 2023: ಈ ನೇಮಕಾತಿ ಅಡಿಯಲ್ಲಿ ಆದಾಯ ತೆರಿಗೆ ಇನ್ಸ್ ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
Income Tax Recruitment 2023: ಸರ್ಕಾರಿ ನೌಕರಿಯನ್ನು ಎದುರು ನೋಡುತ್ತಿರುವವರಿಗೆ ಇಲ್ಲಿದೆ ಸುವರ್ಣಾವಕಾಶ. ಆದಾಯ ತೆರಿಗೆ ಇಲಾಖೆಯು ವಿವಿಧ ಹುದ್ದೆಗಳಲ್ಲಿ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಅಡಿಯಲ್ಲಿ ಆದಾಯ ತೆರಿಗೆ ಇನ್ಸ್ ಪೆಕ್ಟರ್, ಟ್ಯಾಕ್ಸ್ ಅಸಿಸ್ಟೆಂಟ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳು ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್ಸೈಟ್ tnincometax.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಹುದ್ದೆಗಳ ವಿವರಗಳು:
- ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಹುದ್ದೆ- 28 ಹುದ್ದೆಗಳು
- ಆದಾಯ ತೆರಿಗೆ ಸಹಾಯ ಹುದ್ದೆ- 28 ಹುದ್ದೆಗಳು
- ಎಂಟಿಎಸ್- 16 ಹುದ್ದೆಗಳು
- ಒಟ್ಟು ಹುದ್ದೆಗಳ ಸಂಖ್ಯೆ- 72 ಹುದ್ದೆಗಳು
ಅರ್ಹತಾ ಮಾನದಂಡಗಳು:
- ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಪದವಿ ಪಾಸಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ತೆರಿಗೆ ಸಹಾಯಕ ಹುದ್ದೆಗಳಿಗೆ ಪದವಿ ಮಾಡಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಮಲ್ಟಿ ಟಾಸ್ಕಿಂಗ್ ಸ್ಟಾಫ್ ಪೋಸ್ಟ್ ಅಥವಾ ಎಂಟಿಎಸ್ ಹುದ್ದೆಗಳಿಗೆ 10ನೇ ಪಾಸ್ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
- ಈ ಅರ್ಹತೆಗಳೊಂದಿಗೆ ಕ್ರೀಡಾ ಸಾಧನೆಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕಾಗುತ್ತದೆ.
ವೇತನ:
ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 9300-34800 ರೂ.ವರೆಗೆ ವೇತನವನ್ನು ನೀಡಲಾಗುತ್ತದೆ. ಹಾಗೆಯೇ ತೆರಿಗೆ ಸಹಾಯಕ ಮತ್ತು MTS ಪೋಸ್ಟ್‌ಗಳಿಗೆ ತಿಂಗಳಿಗೆ 5200 ರಿಂದ 20200 ರೂ.ವರೆಗೆ ವೇತನ ಸಿಗಲಿದೆ.
ವಯೋಮಿತಿ:
- ಆದಾಯ ತೆರಿಗೆ ಇನ್ಸ್‌ಪೆಕ್ಟರ್ ಹುದ್ದೆ- 18 ರಿಂದ 30 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಆದಾಯ ತೆರಿಗೆ ಸಹಾಯ ಹುದ್ದೆ- 18 ರಿಂದ 27 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
- ಎಂಟಿಎಸ್ ಹುದ್ದೆ- 18 ರಿಂದ 27 ವರ್ಷಗಳವರೆಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಮುಖ ದಿನಾಂಕಗಳು:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಫೆಬ್ರವರಿ 6, 2023
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ನೇರವಾಗಿ ಅರ್ಜಿ ಸಲ್ಲಿಸಬಹುದು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.