ಬಿಇಸಿಐಎಲ್ (ಬ್ರಾಡ್ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟಂಟ್ ಇಂಡಿಯಾ ಲಿಮಿಟೆಡ್(BECIL) ಖಾಲಿ ಇರುವ ತನಿಖಾಧಿಕಾರಿ ಮತ್ತು ಮೇಲ್ವಿಚಾರಕರ ಹುದ್ದೆಗಳ ನೇಮಕಾತಿ ಬಗ್ಗೆ becil.com. ವೆಬ್ಸೈಟ್ನಲ್ಲಿ ಹೊಸ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 500 ಹುದ್ದೆಗಳು ಖಾಲಿ ಇದ್ದು, ಆಸಕ್ತ ಅಭ್ಯರ್ಥಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ತುಂಬಿ ಜನವರಿ 25ರೊಳಗೆ ಸಲ್ಲಿಸಬೇಕು. ಒಟ್ಟು ಇರುವ 500 ಖಾಲಿ ಹುದ್ದೆಗಳಲ್ಲಿ 350 ತನಿಖಾಧಿಕಾರಿಗಳ ಮತ್ತು ಉಳಿದ 150 ಮೇಲ್ವಿಚಾರಕರ ಹುದ್ದೆಗಳು ಖಾಲಿ ಇವೆ. ಇವೆರಡೂ ಹುದ್ದೆಗಳಿಗೆ 50 ವರ್ಷ ಒಳಗಿನವರು ಅರ್ಜಿ ಸಲ್ಲಿಸಬೇಕಾಗಿದ್ದು, ತನಿಖಾಧಿಕಾರಿಗಳಾಗಿ ನೇಮಕಗೊಳ್ಳುವವರಿಗೆ ಆರಂಭಿಕ 24 ಸಾವಿರ ರೂ. ಮತ್ತು ಮೇಲ್ವಿಚಾರಕರಿಗೆ ಆರಂಭಿಕ 30 ಸಾವಿರ ರೂ.ವೇತನ ಇರುತ್ತದೆ.
ಶೈಕ್ಷಣಿಕ ಅರ್ಹತೆಗಳು
ತನಿಖಾಧಿಕಾರಿಗಳ ಹುದ್ದೆಗೆ ಅರ್ಜಿ ಸಲ್ಲಿಸುವವರು, ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಪದವಿ (Bachelor’s Degree) ಪಡೆದಿರಬೇಕು. ಹಾಗೇ. ಕಂಪ್ಯೂಟರ್ ಬಗ್ಗೆ ಉತ್ತಮ ಜ್ಞಾನ ಹೊಂದಿರಬೇಕು. ಅವರು ನಿಯೋಜನೆಗೊಳ್ಳಲಿರುವ ರಾಜ್ಯದ ಪ್ರಾದೇಶಿಕ ಭಾಷೆ ಗೊತ್ತಿರಬೇಕು. ಇದೇ ನಿಯಮ ಮೇಲ್ವಿಚಾರಕರ ಹುದ್ದೆಗೆ ಅಪ್ಲೈ ಮಾಡುವವರಿಗೂ ಅನ್ವಯ ಆಗಲಿದೆ.
ಅರ್ಜಿ ನಮೂನೆ ಬಿಇಸಿಐಎಲ್ ವೆಬ್ಸೈಟ್ನಲ್ಲಿ ಲಭ್ಯವಿದ್ದು, ಅದರಲ್ಲಿ ಕೇಳಲಾದ ಮಾಹಿತಿಯನ್ನು ತುಂಬಿ projecthr@becil.com ಇ-ಮೇಲ್ ವಿಳಾಸಕ್ಕೆ ಕಳಿಸಬೇಕು. ಇನ್ನುಳಿದಂತೆ ಯಾವುದೇ ಮಾದರಿಯಲ್ಲಿ ಕಳಿಸಿದರೂ, ಅದು ಸ್ವೀಕಾರಾರ್ಹವಲ್ಲ ಎಂದು ಹೇಳಲಾಗಿದೆ. ಇನ್ನು ಅರ್ಜಿ ತುಂಬುವವರು ಜನರಲ್ ಕೆಟೆಗರಿಗೆ ಸೇರಿದವರಾಗಿದ್ದರೆ 500 ರೂ.ಶುಲ್ಕ ತುಂಬಬೇಕು. ಒಬಿಸಿ 500 ರೂ., ಎಸ್ಸಿ/ಎಸ್ಟಿ-350, ಎಕ್ಸ್ ಸರ್ವೀಸ್ಮ್ಯಾನ್ 500 ರೂ. ಮತ್ತು ಇಡಬ್ಲ್ಯೂಎಸ್/ಪಿಎಚ್ ವರ್ಗದವರಿಗೆ 350 ರೂ.ಶುಲ್ಕ ನಿಗದಿಪಡಿಸಿಸಲಾಗಿದೆ. ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳು ಯಾವುದೇ ಪರೀಕ್ಷೆ ಬರೆಯುವ ಅಗತ್ಯವಿಲ್ಲ, ಸ್ಕ್ರೀನಿಂಗ್ ಮತ್ತು ಅಂತಿಮ ಆಯ್ಕೆಯಾಗಿ ಸಂದರ್ಶನ ನಡೆಸಲಾಗುತ್ತದೆ ಎಂದು ಬಿಇಸಿಐಎಲ್ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಅಕ್ರಮವಾಗಿ ಸಾಕುತ್ತಿದ್ದ ವಿವಿಧ ಬಗೆಯ ಪಕ್ಷಿ, ಆಮೆಗಳನ್ನ ವಶಕ್ಕೆ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು