ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ಮಿಲಿಟರಿ ಕಮ್ಯುನಿಕೇಷನ್ SBU, ಬೆಂಗಳೂರು ಕಾಂಪ್ಲೆಕ್ಸ್ ಗುತ್ತಿಗೆ ಆಧಾರದಲ್ಲಿ ಟ್ರೇನಿ ಎಂಜಿನಿಯರ್ಗಳನ್ನು ನೇಮಕ ಮಾಡಿಕೊಳ್ಳುವುದಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ನಲ್ಲಿಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರಕ್ರಿಯೆಯು ಚಾಲನೆಯಲ್ಲಿದ್ದು, ಅರ್ಜಿ ಸಲ್ಲಿಸುವುದಕ್ಕೆ ಮೇ 21 ಕೊನೆ ದಿನವಾಗಿದೆ. 30 ಹುದ್ದೆಗಳ ಭರ್ತಿಗಾಗಿ ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ. ಒಂದು ವರ್ಷದ ಗುತ್ತಿಗೆಯ ಅವಧಿ ಮೂರು ವರ್ಷದ ತನಕ ವಿಸ್ತರಣೆ ಆಗಬಹುದು.
ಏಪ್ರಿಲ್ 1, 2021ಕ್ಕೆ ಗರಿಷ್ಠ ವಯೋಮಿತಿ 25 ವರ್ಷ. ಇನ್ನು ಅರ್ಜಿ ಸಲ್ಲಿಸುವುದಕ್ಕೆ ಅಭ್ಯರ್ಥಿಗಳು ರೂ. 200 ಪಾವತಿಸಬೇಕು. PWD, SC, ST ಈ ವರ್ಗದಡಿ ಇರುವವರಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದೆ. ಅಭ್ಯರ್ಥಿಗಳು ನಾಲ್ಕು ವರ್ಷದ ಬಿ.ಇ.,/ಬಿ.ಟೆಕ್ ಅನ್ನು ಪ್ರತಿಷ್ಠಿತ ಶಿಕ್ಷಣ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪಡೆದಿರಬೇಕು. ಎಲೆಕ್ಟ್ರಾನಿಕ್ಸ್/ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್/E&T/ಟೆಲಿಕಮ್ಯುನಿಕೇಷನ್ ಈ ವಿಷಯಗಳ ಪೈಕಿ ಒಂದರಲ್ಲಿ ಎಂಜಿನಿಯರಿಂಗ್ ಮಾಡಿರಬೇಕು.
ಆಯ್ಕೆ ಪ್ರಕ್ರಿಯೆ ಮತ್ತು ಇತರ ಮಾಹಿತಿಗಾಗಿ ಬಿಇಎಲ್ ಅಧಿಕೃತ ವೆಬ್ಸೈಟ್ ಭೇಟಿ ನೀಡಿ. ಇಲ್ಲಿ ಗಮನಿಸಬೇಕಾದ ಅಂಶ ಏನೆಂದರೆ, ಯಾರಿಗೆ ಪ್ರಯಾಣ ಮಾಡುವುದಕ್ಕೆ ಸಾಧ್ಯ ಇದೆಯೋ ಅಂಥವರು ಅಪ್ಲೈ ಮಾಡಿ. ಕ್ಷೇತ್ರೀಯ ಚಟುವಟಿಕೆ ಈಶಾನ್ಯ ಭಾರತ ಹಾಗೂ ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದಾದ್ಯಂತ ಇರುತ್ತದೆ.
ಇದನ್ನೂ: 7th pay commission: ಕೇಂದ್ರ ಸರ್ಕಾರಿ ನೌಕರರಿಗೆ ಜೂನ್ನಲ್ಲಿ ಡಿಎ ಹೆಚ್ಚಳ ಘೋಷಣೆ ಮಾಡುವ ಸಾಧ್ಯತೆ
(Bharat Electronics Limited Recruitment 2021 call for 30 post of trainee engineers. Qualification, fee, last date and other details here)