UPSC Prelims Exam 2021 Postponed: ಜೂನ್ 27ರ ಯುಪಿಎಸ್‌ಸಿ ಪ್ರಿಲಿಮಿನರಿ ಪರೀಕ್ಷೆ ಅಕ್ಟೋಬರ್ 10ಕ್ಕೆ ಮುಂದೂಡಿಕೆ
UPSC Civil Services Exams 2021: ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ನಾಗರಿಕ ಸೇವೆ ಪರೀಕ್ಷೆಗಳನ್ನು ಅಕ್ಟೋಬರ್ 10ಕ್ಕೆ ಮುಂದೂಡಲಾಗಿದೆ.
ನಾಗರಿಕ ಸೇವೆಯ ಪ್ರಾಥಮಿಕ ಪರೀಕ್ಷೆಗಳನ್ನು (ಪ್ರಿಲಿಮಿನರಿ ಎಕ್ಸಾಮಿನೇಷನ್) ಕೇಂದ್ರೀಯ ಲೋಕಸೇವಾ ಆಯೋಗ (UPSC) ಗುರುವಾರದಂದು ಘೋಷಣೆ ಮಾಡಿರುವಂತೆ ಅಕ್ಟೋಬರ್ 10ನೇ ತಾರೀಕಿಗೆ ಮುಂದೂಡಲಾಗಿದೆ. ಈ ಪರೀಕ್ಷೆಯು ಜೂನ್ನಲ್ಲಿ ನಡೆಸುವುದಕ್ಕೆ ಯೋಜಿಸಲಾಗಿತ್ತು. ಕೋವಿಡ್ ಕಾರಣಕ್ಕಾಗಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಆಯೋಗದಿಂದ ಪ್ರತಿ ವರ್ಷ ಮೂರು ಹಂತದಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಪ್ರಾಥಮಿಕ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹೀಗೆ. ಭಾರತೀಯ ಆಡಳಿತಾತ್ಮಕ ಸೇವೆ (ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಹೀಗೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.
ಕೊರೊನಾದಿಂದ ಸನ್ನಿವೇಶವು ಬಹಳ ಗಂಭೀರವಾಗಿರುವುದರಿಂದ ಕೇಂದ್ರ ಲೋಕಸೇವಾ ಆಯೋಗದಿಂದ ನಾಗರಿಕ ಸೇವಾ ಪರೀಕ್ಷೆಗಳು (ಪ್ರಾಥಮಿಕ) 2021 ಮುಂದೂಡಲಾಗಿದೆ. ಮೊದಲಿಗೆ ಜೂನ್ 27, 2021ಕ್ಕೆ ಪರೀಕ್ಷೆ ನಿಗದಿ ಆಗಿತ್ತು. ಆದರೆ ಈಗ 2021ರ ಅಕ್ಟೋಬರ್ 10ನೇ ತಾರೀಕಿಗೆ ಮುಂದೂಡಲಾಗಿದೆ ಎಂದು ಆಯೋಗದಿಂದ ನೀಡಿರುವ ಹೇಳಿಕೆಯಲ್ಲಿ ಮಾಹಿತಿಯನ್ನು ನೀಡಲಾಗಿದೆ.
ಕೋವಿಡ್-19 ಕಾರಣದಿಂದಾಗಿಯೇ ಈಚೆಗೆ ಹಲವು ಪರೀಕ್ಷೆಗಳನ್ನು ಮುಂದೂಡಿದೆ. ಸರ್ಕಾರದ ಇತರ ನೇಮಕಾತಿ ಪರೀಕ್ಷೆಗಳಾದ ಎಸ್ಎಸ್ಸಿ, ಸಿಜಿಎಲ್ ಮತ್ತು ಇತರ ಪರೀಕ್ಷೆಗಳು ಕೂಡ ಕೊನಾ ಕಾರಣದಿಂದಾಗಿಯೇ ಮುಂದೂಡಲಾಗಿದೆ. ಕೋವಿಡ್- 19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಾ ಇರುವುದರಿಂದ ಪರೀಕ್ಷೆಗಳನ್ನು ಮುಂದೂಡಿ ಅಥವಾ ರದ್ದು ಮಾಡಿ ಎಂದು ಹಲವು ಅಭ್ಯರ್ಥಿಗಳು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಕನ್ನಡದಲ್ಲಿಯೇ ಬರೆದು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಱಂಕ್ ಹೊಡೆದ ಹಾಸನದ ಹುಡುಗ
(Union Public Service Commission (UPSC) preliminary examination postponed to October 10th. Which was previously scheduled at June 10)