BHEL Recruitment 2025: ಬಿಎಚ್‌ಇಎಲ್ ನೇಮಕಾತಿ; ಸಿಎಂಪಿ ಸ್ಪೆಷಲಿಸ್ಟ್ ಹುದ್ದೆಗೆ ನೇರ ಸಂದರ್ಶನ
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್) ತಿರುಚಿಯಲ್ಲಿರುವ ತನ್ನ ಘಟಕದಲ್ಲಿ ಕಾಂಟ್ರಾಕ್ಟ್ ಮೆಡಿಕಲ್ ಪ್ರಾಕ್ಟೀಷನರ್ (ಸಿಎಂಪಿ) ತಜ್ಞರ ಹುದ್ದೆಗಳನ್ನು ಭರ್ತಿ ಮಾಡಲು ವಾಕ್-ಇನ್ ಇಂಟರ್ವ್ಯೂ ನಡೆಸುತ್ತಿದೆ. ಎಂಬಿಬಿಎಸ್ ಪದವೀಧರರು ಮತ್ತು 45 ವರ್ಷದೊಳಗಿನ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಿವರವಾದ ಮಾಹಿತಿಗಾಗಿ ಬಿಎಚ್‌ಇಎಲ್‌ನ ಅಧಿಕೃತ ಅಧಿಸೂಚನೆಯನ್ನು ಓದಿ.

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಕಾಂಟ್ರಾಕ್ಟ್ ಮೆಡಿಕಲ್ ಪ್ರಾಕ್ಟೀಷನರ್(CMP) ಸ್ಪೆಷಲಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ತಿರುಚಿರಾಪಳ್ಳಿ – ತಮಿಳುನಾಡು ಸರ್ಕಾರದಲ್ಲಿ ವೃತ್ತಿಯನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 20ರಂದು ಬೆಳಿಗ್ಗೆ 09:30 ಕ್ಕೆ ವಾಕ್-ಇನ್-ಇಂಟರ್ವ್ಯೂಗೆ ಹಾಜರಾಗಬಹುದು.
ಬಿಎಚ್‌ಇಎಲ್ ನೇಮಕಾತಿ ಅರ್ಹತಾ ವಿವರಗಳು:
- ಶೈಕ್ಷಣಿಕ ಅರ್ಹತೆ: ಬಿಎಚ್‌ಇಎಲ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಯಾವುದೇ ಮಾನ್ಯತೆ ಪಡೆದ ಮಂಡಳಿಗಳು ಅಥವಾ ವಿಶ್ವವಿದ್ಯಾಲಯಗಳಿಂದ ಎಂಬಿಬಿಎಸ್ , ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
- ವಯಸ್ಸಿನ ಮಿತಿ: ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯ ಗರಿಷ್ಠ ವಯಸ್ಸು45 ವರ್ಷಗಳು.
ಇದನ್ನೂ ಓದಿ: ಬ್ಯಾಂಕ್‌ಗಳಿಂದ ಹಿಡಿದು ನ್ಯಾಯಾಲಯದವರೆಗೆ, ಫೆಬ್ರವರಿಯಲ್ಲಿ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಮಾಹಿತಿ ಇಲ್ಲಿದೆ
ಬಿಎಚ್‌ಇಎಲ್ ನೇಮಕಾತಿ (ಸಿಎಂಪಿ ಸ್ಪೆಷಲಿಸ್ಟ್) ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವುದು ಹೇಗೆ ?
ಉದ್ಯೋಗಗಳನ್ನು ಹುಡುಕುತ್ತಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ (ಅಧಿಕೃತ ಅಧಿಸೂಚನೆಯಲ್ಲಿ ಉಲ್ಲೇಖಿಸಿದಂತೆ) ಈ ಕೆಳಗಿನ ಸ್ಥಳದಲ್ಲಿ ನಡೆಯುವ ವಾಕ್-ಇನ್-ಇಂಟರ್ವ್ಯೂಗೆ ಫೆಬ್ರವರಿ 20ರಂದು ಬೆಳಿಗ್ಗೆ 09:30 ಕ್ಕೆ ಹಾಜರಾಗಬೇಕು.
ಸಂದರ್ಶನ ನಡೆಯುವ ಸ್ಥಳ: HR ಕಾನ್ಫರೆನ್ಸ್ ಹಾಲ್, ಆಡಳಿತ ಕಟ್ಟಡ, BHEL, HPBP/ತಿರುಚಿ – 620014
ಬಿಎಚ್‌ಇಎಲ್‌ನ ಅಧಿಕೃತ ಅಧಿಸೂಚನೆ: 02-CMP-Specialist-Posts-Advt-Details-BHEL
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




