AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PNB Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ; ಫೆ. 22 ರ ಒಳಗೆ ಅರ್ಜಿ ಸಲ್ಲಿಸಿ

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಆಂತರಿಕ ಓಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಫೆಬ್ರವರಿ 5 ರಿಂದ 22 ರ ವರೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆ ಪ್ರಕ್ರಿಯೆಯು ಸಂದರ್ಶನದ ಮೂಲಕ ನಡೆಯಲಿದೆ. ಮೂರು ವರ್ಷಗಳ ಒಪ್ಪಂದದ ಅವಧಿಗೆ 1.75 ಲಕ್ಷ ರೂಪಾಯಿಗಳ ಮಾಸಿಕ ವೇತನವಿದೆ. ವರ್ಷಕ್ಕೆ 12 ದಿನಗಳ ರಜೆ ಇರುತ್ತದೆ.

PNB Recruitment 2025: ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ; ಫೆ. 22 ರ ಒಳಗೆ ಅರ್ಜಿ ಸಲ್ಲಿಸಿ
Punjab National Bank Hiring
ಅಕ್ಷತಾ ವರ್ಕಾಡಿ
|

Updated on:Feb 06, 2025 | 10:57 AM

Share

ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಇಂಟರ್ನಲ್​​ ಓಂಬುಡ್ಸ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಪಂಜಾಬ್ ನ್ಯಾಷನಲ್ ಬ್ಯಾಂಕ್​​​ನ ಅಧಿಕೃತ ವೆಬ್‌ಸೈಟ್(www.pnbindia.in)​​ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು . ಈ ನೇಮಕಾತಿಗಾಗಿ ಅರ್ಜಿ ಪ್ರಕ್ರಿಯೆಯು ಫೆಬ್ರವರಿ 5ರಿಂದ ಆರಂಭವಾಗಿದ್ದು, ಆಸಕ್ತ ಆಭ್ಯರ್ಥಿಗಳು ಫೆಬ್ರವರಿ 22 ರ ಒಳಗೆ ಅರ್ಜಿ ಸಲ್ಲಿಸಬೇಕು.

ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿಯ ಆಯ್ಕೆ ಪ್ರಕ್ರಿಯೆ ಹೇಗೆ?

ಅಭ್ಯರ್ಥಿಗಳ ಆಯ್ಕೆಯನ್ನು ವೈಯಕ್ತಿಕ ಸಂವಾದ/ಸಂದರ್ಶನದ ಮೂಲಕ ಮಾಡಲಾಗುವುದು, ಇದನ್ನು ಆನ್‌ಲೈನ್ ಅಥವಾ ನೇರ ಸಂದರ್ಶನದ ಮೂಲಕವು ನಡೆಸಬಹುದು. ಸ್ವೀಕರಿಸಿದ ಅರ್ಜಿಗಳ ಸಂಖ್ಯೆ ಮತ್ತು ವ್ಯಾಪ್ತಿಯನ್ನು ಅವಲಂಬಿಸಿ ಆಯ್ಕೆ ವಿಧಾನವನ್ನು ನಿರ್ಧರಿಸುವ ಹಕ್ಕನ್ನು ಬ್ಯಾಂಕ್ ಕಾಯ್ದಿರಿಸಿದೆ.

ಈ ನೇಮಕಾತಿಯು ಮೂರು ವರ್ಷಗಳ ನಿಗದಿತ ಅವಧಿಗೆ ಸಂಪೂರ್ಣವಾಗಿ ಒಪ್ಪಂದದ ಸ್ವರೂಪದ್ದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಬ್ಯಾಂಕಿನಲ್ಲಿ ಮರು ನೇಮಕಾತಿ ಅಥವಾ ವಿಸ್ತರಣೆಗೆ ಅರ್ಹತೆ ಪಡೆದಿರುವುದಿಲ್ಲ. ಒಪ್ಪಂದದ ಅವಧಿ ಪೂರ್ಣಗೊಂಡ ನಂತರ, ಅಭ್ಯರ್ಥಿಯ ನೇಮಕಾತಿಯು ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ಸಂಪೂರ್ಣ ಅವಧಿಗೆ 1.75 ಲಕ್ಷ ರೂಪಾಯಿಗಳ ಸ್ಥಿರ ಮಾಸಿಕ ಮರುಪಾವತಿಯನ್ನು ಪಡೆಯುತ್ತಾರೆ, ಇದು ಅನ್ವಯವಾಗುವ ತೆರಿಗೆ ಕಡಿತಗಳಿಗೆ ಒಳಪಟ್ಟಿರುತ್ತದೆ.

ಇದನ್ನೂ ಓದಿ: ಬ್ಯಾಂಕ್‌ಗಳಿಂದ ಹಿಡಿದು ನ್ಯಾಯಾಲಯದವರೆಗೆ, ಫೆಬ್ರವರಿಯಲ್ಲಿ ಲಭ್ಯವಿರುವ ಸರ್ಕಾರಿ ಉದ್ಯೋಗಗಳ ಮಾಹಿತಿ ಇಲ್ಲಿದೆ

ರಜೆ ನೀತಿ:

ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ವರ್ಷ ಒಟ್ಟು 12 ದಿನಗಳ ರಜೆ ಸಿಗಲಿದ್ದು, ಅದರಲ್ಲಿ ಗರಿಷ್ಠ 4 ದಿನಗಳ ಸತತ ರಜೆಯನ್ನು ಏಕಕಾಲದಲ್ಲಿ ಪಡೆಯಬಹುದು. ಬಳಸದೇ ಇರುವ ರಜೆಯನ್ನು ಮುಂದಿನ ವರ್ಷಕ್ಕೆ ಮುಂದಕ್ಕೆ ಸಾಗಿಸಲಾಗುವುದಿಲ್ಲ, ಅಥವಾ ರಜೆಯನ್ನು ನಗದೀಕರಿಸಲು ಯಾವುದೇ ಅವಕಾಶವಿರುವುದಿಲ್ಲ. ಎರಡನೇ ಮತ್ತು ನಾಲ್ಕನೇ ಶನಿವಾರಗಳು ಮತ್ತು NI ಕಾಯ್ದೆಯಡಿಯಲ್ಲಿ ಘೋಷಿಸಲಾದ ರಜಾದಿನಗಳನ್ನು ಹೊರತುಪಡಿಸಿ, ಕೆಲಸದ ಸಮಯವನ್ನು ಸಾಮಾನ್ಯ ಬ್ಯಾಂಕಿಂಗ್ ಸಮಯದಂತೆ ಇರುತ್ತದೆ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:49 am, Thu, 6 February 25