BSF Recruitment 2022: ಗಡಿ ಭದ್ರತಾ ಪಡೆಯ ಹೆಡ್ ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Nov 30, 2022 | 8:15 AM

BSF Recruitment 2022: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

BSF Recruitment 2022: ಗಡಿ ಭದ್ರತಾ ಪಡೆಯ ಹೆಡ್ ಕಾನ್ಸ್​ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs
Follow us on

BSF Recruitment 2022: ಭಾರತೀಯ ಸೇನೆಯ ಗಡಿ ಭದ್ರತಾ ಪಡೆಯಲ್ಲಿನ ಖಾಲಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 254 ಹೆಡ್ ಕಾನ್ಸ್​ಟೇಬಲ್​ಗಳನ್ನು ಆಯ್ಕೆ ಮಾಡಲಿದ್ದು, ಆಸಕ್ತ ಅಭ್ಯರ್ಥಿಗಳು ಜನವರಿ 3, 2023 ರೊಳಗೆ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳು- 254
  • ಹೆಡ್​​ ಕಾನ್ಸ್​​ಟೇಬಲ್ ವೆಹಿಕಲ್ ಮೆಕ್ಯಾನಿಕ್- 100 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಆಟೋ ಎಲೆಕ್ಟ್ರಿಷಿಯನ್- 12 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಕಾರ್ಪೆಂಟರ್- 6 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಸ್ಟೋರ್ ಕೀಪರ್- 20 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ವೆಲ್ಡರ್-11 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಬ್ಲಾಕ್​ ಸ್ಮಿತ್/ ಟಿನ್ ಸ್ಮಿತ್- 16 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಪೇಂಟರ್- 19 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಅಪ್​ಹೋಲ್​ಸ್ಟರ್- 18 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಟರ್ನರ್- 15 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಫಿಟ್ಟರ್- 18 ಹುದ್ದೆಗಳು
  • ಹೆಡ್​ ಕಾನ್ಸ್​​ಟೇಬಲ್ ಆಪರೇಟರ್ ಟೈಯರ್ ರಿಪೇರಿ ಪ್ಲಾಂಟ್- 19 ಹುದ್ದೆಗಳು

ವಿದ್ಯಾರ್ಹತೆ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ 10ನೇ ತರಗತಿ, ಡಿಪ್ಲೋಮಾ, ಐಟಿಐ ಪೂರ್ಣಗೊಳಿಸಿರಬೇಕು.

ಇದನ್ನೂ ಓದಿ
IOCL Recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್​ನಲ್ಲಿದೆ ಉದ್ಯೋಗಾವಕಾಶ
Indian Navy SSR Recruitment 2022: ನೌಕಾಪಡೆಯ ಅಗ್ನಿವೀರರ ನೇಮಕಾತಿ: PUC ಪಾಸಾದವರಿಗೆ ಉದ್ಯೋಗಾವಕಾಶ
Indian Railway Recruitment 2022: ರೈಲ್ವೆ ನೇಮಕಾತಿ: 596 ಹುದ್ದೆಗಳಿಗೆ ಅರ್ಜಿ ಆಹ್ವಾನ
ECIL Recruitment 2022: ECIL ನೇಮಕಾತಿ: ಮಾಸಿಕ ವೇತನ 31 ಸಾವಿರ ರೂ.

ವಯೋಮಿತಿ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ ವಯಸ್ಸು ಜನವರಿ 2023 ಕ್ಕೆ 52 ವಯಸ್ಸು ಮೀರಿರಬಾರದು.

ಇದನ್ನೂ ಓದಿ: SSC GD Constable Vacancy 2022: 45,284 ಉದ್ಯೋಗಾವಕಾಶ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?
ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 03-ಜನವರಿ-2023

ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅಭ್ಯರ್ಥಿಗಳು ಆಫ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಅಂದರೆ ಅಂಚೆಯ ಮೂಲಕ ಅರ್ಜಿಯನ್ನು ಕಳುಹಿಸಬೇಕು. ಅರ್ಜಿ ಕಳುಹಿಸಬೇಕಾದ ವಿಳಾಸ ಈ ಕೆಳಗಿನಂತಿದೆ

ಅರ್ಜಿ ಕಳುಹಿಸಬೇಕಾದ ವಿಳಾಸ:

Deputy Inspector General (Tpt),
Directorate General, BSF,
Block No. 10, CGO Complex,
Lodhi Road, New Delhi-110003

ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.