AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Business Ideas: ಮಹಿಳೆಯರೇ! ಮನೆಯಲ್ಲೇ ಇದ್ದುಕೊಂಡು ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯ ಗಳಿಸುವ ಬಿಸಿನೆಸ್​ ಅವಕಾಶ ನಿಮಗಾಗಿ ಇಲ್ಲಿದೆ ನೋಡಿ

Online business: ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಿಂದ ಹೊರಬರದೆ ಹಣ ಗಳಿಸುವ ಅವಕಾಶವಿದೆ. ಅದಕ್ಕಾಗಿಯೇ ಈಗ ಆನ್‌ಲೈನ್ ಮೂಲಕ ಮಹಿಳೆಯರು ಮನೆಯಲ್ಲಿಯೇ ಹಣ ಗಳಿಸುವ ಮಾರ್ಗಗಳನ್ನು ತಿಳಿಯೋಣ.

Business Ideas: ಮಹಿಳೆಯರೇ! ಮನೆಯಲ್ಲೇ ಇದ್ದುಕೊಂಡು ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯ ಗಳಿಸುವ ಬಿಸಿನೆಸ್​ ಅವಕಾಶ ನಿಮಗಾಗಿ ಇಲ್ಲಿದೆ ನೋಡಿ
ಮಹಿಳೆಯರೇ! ಮನೆಯಲ್ಲೇ ಇದ್ದುಕೊಂಡು ತಿಂಗಳಿಗೆ 1 ಲಕ್ಷ ರೂಪಾಯಿ ಆದಾಯ ಗಳಿಸುವ ಬಿಸಿನೆಸ್​ ಅವಕಾಶ
ಸಾಧು ಶ್ರೀನಾಥ್​
|

Updated on: May 19, 2023 | 12:33 PM

Share

Online business: ಮಹಿಳಾಮಣಿಗಳೇ! ವ್ಯಾಪಾರ ಮಾಡಿ ಜೀವನದಲ್ಲಿ ಆರ್ಥಿಕ ಪ್ರಗತಿ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷಿ ನೀವಾಗಿದ್ದರೆ, ಅದೇ ನಿಮ್ಮ ಗುರಿಯಾಗಿದ್ದರೆ, ಉತ್ತಮ ವ್ಯವಹಾರದ ಬಗ್ಗೆ ಇಲ್ಲೊಂದು ಅವಕಾಶವಿದೆ ತಿಳಿದುಕೊಳ್ಳೀ. ಈ ವ್ಯಾಪಾರ ಮಾಡುವುದರಿಂದ ಮನೆಯಿಂದಲೇ ಉತ್ತಮ ಆದಾಯ ಗಳಿಸಬಹುದು. ಪ್ರತಿ ತಿಂಗಳು ಲಕ್ಷಗಟ್ಟಲೆ ಹಣವನ್ನು ಗಳಿಸಬಹುದಾದ ಅಂತಹ ವ್ಯವಹಾರದ ಬಗ್ಗೆ ತಿಳಿಯಿರಿ

ಇಂದಿನ ಡಿಜಿಟಲ್ ಯುಗದಲ್ಲಿ ಮನೆಯಿಂದ ಹೊರಬರದೆ ಹಣ ಗಳಿಸುವ ಅವಕಾಶವಿದೆ. ವಿಶೇಷವಾಗಿ ಇಂಟರ್ನೆಟ್ ಆಗಮನದಿಂದ, ಈ ಪ್ರಕ್ರಿಯೆಯು ಇನ್ನೂ ಹೆಚ್ಚಿನ ವೇಗದಲ್ಲಿ ಮುಂದುವರಿಯುತ್ತಿದೆ. ಅದಕ್ಕಾಗಿಯೇ ಈಗ ಆನ್‌ಲೈನ್ ಮೂಲಕ ಮಹಿಳೆಯರು ಮನೆಯಲ್ಲಿಯೇ ಹಣ ಗಳಿಸುವ ಮಾರ್ಗಗಳನ್ನು ತಿಳಿಯೋಣ.

ಆನ್‌ಲೈನ್ ಟ್ಯೂಷನ್‌ಗಳು: ಗಣಿತ ವಿಜ್ಞಾನ ಇಂಗ್ಲಿಷ್‌ನಂತಹ ವಿಷಯಗಳಲ್ಲಿ ನೀವು ಉತ್ತಮವಾಗಿದ್ದರೆ, ನೀವು ಮನೆಯಿಂದಲೇ ತಿಂಗಳಿಗೆ ಲಕ್ಷಗಳಲ್ಲಿ ದುಡಿಯಬಹುದು. ಅದರಲ್ಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ದೇಶಗಳಲ್ಲಿ ಗಣಿತ ಶಿಕ್ಷಕರ ಕೊರತೆ ಇದೆ. Vedantu, TutorVista, Tutor.com, Chegg, TutorME, VIP Kid, Magic Ears, Qkids, Elevate K-12, MathElf ಅಂತಹ ಆನ್‌ಲೈನ್ ವೆಬ್‌ಸೈಟ್‌ಗಳು ನಮ್ಮ ದೇಶದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಲ್ಲಿ ಪಾಠ ಕಲಿಸಲು ನಿಮಗೆ ಅವಕಾಶ ಕಲ್ಪಿಸುತ್ತದೆ. ಇದರಿಂದ ಉತ್ತಮ ಆದಾಯ ಬರುವ ಸಾಧ್ಯತೆ ಹೆಚ್ಚಾಗಿದೆ.

ಅಲ್ಲದೆ ಯಾವುದೇ ಸಂಗೀತ ವಾದ್ಯ ಅಥವಾ ಶಾಸ್ತ್ರೀಯ ಸಂಗೀತ, ಶಾಸ್ತ್ರೀಯ ನೃತ್ಯ ಕಲಿತರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಬೇಡಿಕೆ ಇದೆ. ವಿದೇಶಗಳಲ್ಲದೇ, ದೇಶದಲ್ಲಿರುವ ಭಾರತೀಯರು ಆನ್‌ಲೈನ್ ಮೂಲಕ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಸಂಗೀತ ಕಲಿಯಲು ಆಸಕ್ತಿ ತೋರಿಸುತ್ತಿದ್ದಾರೆ. ಅಂತಹ ಜನರಿಗೆ ನೀವು ಆನ್‌ಲೈನ್‌ನಲ್ಲಿ ತರಗತಿಗಳನ್ನು ಕಲಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ನೀವು ಲಿಂಕ್ಡ್‌ಇನ್‌ನಂತಹ ವೆಬ್‌ಸೈಟ್‌ಗಳಲ್ಲಿ ನಿಮ್ಮ ಪ್ರೊಫೈಲ್ ಅನ್ನು ನವೀಕರಿಸಬೇಕಾಗಿದೆ.

ಆನ್‌ಲೈನ್ ತರಗತಿಗಳ ಮೂಲಕ ಈ ಅವಕಾಶವಿದೆ. ಇದು ಬೇಡವೆಂದರೆ ನೀವು ಉತ್ತಮ YouTube ಚಾನಲ್ ಅನ್ನು ಪ್ರಾರಂಭಿಸುವ ಮೂಲಕ ಉತ್ತಮ ಆದಾಯವನ್ನು ಗಳಿಸಬಹುದು. ಯೂಟ್ಯೂಬ್ ಚಾನೆಲ್‌ನಲ್ಲಿ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಅಪ್‌ಲೋಡ್ ಮಾಡುವ ಮೂಲಕ, ಆ ವೀಡಿಯೊಗಳಿಂದ ಉತ್ಪತ್ತಿಯಾಗುವ ಆದಾಯದೊಂದಿಗೆ ನೀವು ಉತ್ತಮ ಹಣವನ್ನು ಗಳಿಸಬಹುದು. ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಮಾಡುವ ಮೂಲಕ ಮತ್ತು ಅವುಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡುವ ಮೂಲಕ ನೀವು ಉತ್ತಮ ಆದಾಯವನ್ನು ಗಳಿಸಬಹುದು. ವಿಶೇಷವಾಗಿ ಅನೇಕ ಜನರಿಗೆ ಇಂಗ್ಲಿಷ್ ತಿಳಿದಿಲ್ಲದ ಪೂರ್ವ ಏಷ್ಯಾದ ದೇಶಗಳಲ್ಲಿ ಇದಕ್ಕೆ ಅವಕಾಶ ಹೆಚ್ಚಿದೆ.

ಅಲ್ಲದೇ ಮಹಿಳೆಯರು ತಮ್ಮ ರೆಸಿಪಿಗಳ ವೀಡಿಯೋಗಳನ್ನು ಯೂಟ್ಯೂಬ್ ಚಾನೆಲ್ ನಲ್ಲಿ ಅಪ್ಲೋಡ್ ಮಾಡುವ ಮೂಲಕವೂ ಉತ್ತಮ ಆದಾಯವನ್ನು ಪಡೆಯಬಹುದು. ಅದರಲ್ಲೂ ಉಪ್ಪಿನಕಾಯಿ, ನಾನ್ ವೆಜ್ ಖಾದ್ಯಗಳು, ವೆರೈಟಿ ರೆಸಿಪಿಗಳಿಂದ ಉತ್ತಮ ಆದಾಯ ಪಡೆಯಬಹುದು. ಅಲ್ಲದೆ ಡ್ರೆಸ್ ಡಿಸೈನಿಂಗ್ ಗೆ ಸಂಬಂಧಿಸಿದ ವಿಡಿಯೋಗಳನ್ನು ಅಪ್ ಲೋಡ್ ಮಾಡಿದರೆ ಉತ್ತಮ ಆದಾಯ ಸಿಗುತ್ತದೆ. ನಿಮ್ಮ ಶಸಕ್ತಿ ಸಾಮರ್ಥ್ಯವನ್ನು ಓರೆಗೆ ಹಚ್ಚಿ, ತಡಮಾಡದೆ ಮುಂದುವರಿಯಿರಿ.

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!