DC Office Belagavi Recruitment 2023: ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Mar 02, 2023 | 11:34 AM

DC Office Belagavi Recruitment 2023: ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳ ಒಳಗಿರಬೇಕು. ಹಾಗೆಯೇ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿಡಿ ಸಡಿಲಿಕೆ ನೀಡಲಾಗುತ್ತದೆ.

DC Office Belagavi Recruitment 2023: ಬೆಳಗಾವಿ ಜಿಲ್ಲೆಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
Jobs 20023
Follow us on

DC Office Belagavi Recruitment 2023: ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಯ ಪೌರಕಾರ್ಮಿಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಅಡಿಯಲ್ಲಿ ಒಟ್ಟು 105 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಫ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.

ಹುದ್ದೆಗಳ ವಿವರಗಳು:

  • ಒಟ್ಟು ಹುದ್ದೆಗಳ ಸಂಖ್ಯೆ: 105
  • ಉದ್ಯೋಗ ಸ್ಥಳ: ಬೆಳಗಾವಿ-ಕರ್ನಾಟಕ
  • ಹುದ್ದೆಯ ಹೆಸರು: ಪೌರಕಾರ್ಮಿಕ

ಎಲ್ಲೆಲ್ಲಿ ಉದ್ಯೋಗ?

ಅಥಣಿ ಪುರಸಭೆ- 32 ಹುದ್ದೆಗಳು
ಸಂಕೇಶ್ವರ ಪುರಸಭೆ- 6 ಹುದ್ದೆಗಳು
ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್- 6 ಹುದ್ದೆಗಳು
ಐನಾಪುರ ಪಟ್ಟಣ ಪಂಚಾಯಿತಿ- 17 ಹುದ್ದೆಗಳು
ಪೀರನವಾಡಿ ಪಟ್ಟಣ ಪಂಚಾಯಿತಿ- 29 ಹುದ್ದೆಗಳು
ಅರಭಾವಿ ಪಟ್ಟಣ ಪಂಚಾಯಿತಿ- 15 ಹುದ್ದೆಗಳು

ವಯೋಮಿತಿ:

ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 55 ವರ್ಷಗಳ ಒಳಗಿರಬೇಕು. ಹಾಗೆಯೇ ಮೀಸಲಾತಿ ವರ್ಗಗಳಿಗೆ ನಿಯಮಾನುಸಾರ ವಯೋಮಿಡಿ ಸಡಿಲಿಕೆ ನೀಡಲಾಗುತ್ತದೆ.

ಆಯ್ಕೆ ಪ್ರಕ್ರಿಯೆ:

ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.

ಇದನ್ನೂ ಓದಿ: HMT Recruitment 2023: HMT ನೇಮಕಾತಿ: ಬೆಂಗಳೂರಿನಲ್ಲಿದೆ ಉದ್ಯೋಗಾವಕಾಶ

ಪ್ರಮುಖ ದಿನಾಂಕಗಳು:

ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಮಾರ್ಚ್ 15, 2023

ಅರ್ಜಿ ಕಳುಹಿಸಬೇಕಾದ ವಿಳಾಸಗಳು:

  • ಅಥಣಿ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಅಥಣಿ
  • ಸಂಕೇಶ್ವರ ಪುರಸಭೆ: ಮುಖ್ಯಾಧಿಕಾರಿಗಳು, ಪುರಸಭೆ, ಸಂಕೇಶ್ವರ
  • ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯತ್, -ಕಿತ್ತೂರು
  • ಐನಾಪುರ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಐನಾಪುರ
  • ಪೀರನವಾಡಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಪೀರನವಾಡಿ
  • ಅರಭಾವಿ ಪಟ್ಟಣ ಪಂಚಾಯಿತಿ: ಮುಖ್ಯ ಅಧಿಕಾರಿಗಳು, ಪಟ್ಟಣ ಪಂಚಾಯಿತಿ, ಅರಭಾವಿ

ಅಧಿಸೂಚನೆಯ ಲಿಂಕ್​ಗಳು:

ಅಧಿಕೃತ ಅಧಿಸೂಚನೆ – ಅಥಣಿ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಸಂಕೇಶ್ವರ ಪುರಸಭೆ: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಚೆನ್ನಮ್ಮನ-ಕಿತ್ತೂರು ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಐನಾಪುರ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಪೀರನವಾಡಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ
ಅಧಿಕೃತ ಅಧಿಸೂಚನೆ – ಅರಭಾವಿ ಪಟ್ಟಣ ಪಂಚಾಯತ್: ಇಲ್ಲಿ ಕ್ಲಿಕ್ ಮಾಡಿ