Agneepath: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಗ್ನಿವೀರರಿಗಾಗಿ ವಿಶೇಷ ಬೆಂಬಲ, ಶಿಕ್ಷಣ ಯೋಜನೆ ರೆಡಿಯಾಯ್ತು!

| Updated By: ಸಾಧು ಶ್ರೀನಾಥ್​

Updated on: Jun 16, 2022 | 8:28 PM

Agniveer: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ತನ್ನ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ಮೂಲಕ 10 ನೇ ತರಗತಿಯಲ್ಲಿ ಉತ್ತೀರ್ಣರಾದ ಅಗ್ನಿವೀರರಿಗೆ ತಮ್ಮ ಶಿಕ್ಷಣ ಮುಂದುವರಿಸುವುದಕ್ಕೆ ಅನುವು ಮಾಡಿಕೊಡಲು ರಕ್ಷಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವಿಶೇಷ ಕಾರ್ಯಕ್ರಮವನ್ನು ರೂಪಿಸುತ್ತಿದೆ.

Agneepath: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಗ್ನಿವೀರರಿಗಾಗಿ ವಿಶೇಷ ಬೆಂಬಲ, ಶಿಕ್ಷಣ ಯೋಜನೆ ರೆಡಿಯಾಯ್ತು!
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಅಗ್ನಿಪಥ್ ಯೋಜನೆಗೆ ಬೆಂಬಲ
Follow us on

ದೆಹಲಿ: ಭಾರತದ ರಕ್ಷಣಾ ಸಚಿವಾಲಯವು ಅಗ್ನಿಪತ್ (Agneepath) ಯೋಜನೆಯನ್ನು ಘೋಷಿಸಿದೆ. ಇದು ಭೂ ಸೈನಿಕರು, ವಾಯುದಳ ಮತ್ತು ನೌಕಾಪಡೆಯಲ್ಲಿ ಸೇವೆ ಸಲ್ಲಿಸಲು ಆಶಿಸುವವರಿಗಾಗಿ ಪ್ಯಾನ್ ಇಂಡಿಯಾ ಮೆರಿಟ್ ಆಧಾರಿತ ನೇಮಕಾತಿ ಯೋಜನೆಯಾಗಿದೆ. ಇದು ಸಶಸ್ತ್ರ ಪಡೆಗಳಿಗೆ ಯುವ ಶಕ್ತಿ ತುಂಬುವ ಮಹತ್ವದ ಬದಲಾವಣೆಯ ಉಪಕ್ರಮವಾಗಿದೆ. ಈ ಯೋಜನೆಯಡಿ ಯುವಕರು ಅಗ್ನಿವೀರ್ ಗಳಾಗಿ (Agniveer) ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಹೊಂದುತ್ತಾರೆ. ತರಬೇತಿ ಅವಧಿ ಸೇರಿದಂತೆ 4 ವರ್ಷಗಳ ಅವಧಿಗೆ ಸಶಸ್ತ್ರ ಪಡೆಗಳ ನಿಯಮಿತ ಕೇಡರ್‌ನಲ್ಲಿ ಸೇವೆ ಸಲ್ಲಿಸಲು ಯುವಕರಿಗೆ ಇದು ಸದವಕಾಶ ಒದಗಿಸುತ್ತದೆ. 17.5 ರಿಂದ 21 ವರ್ಷ ವಯಸ್ಸಿನೊಳಗೆ ಅಗ್ನಿವೀರ್‌ಗಳನ್ನು ನೇಮಕ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. 10ನೇ ಮತ್ತು 12ನೇ ತರಗತಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳು ನೇಮಕಾತಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.

ಶಿಕ್ಷಣ ಸಚಿವಾಲಯದಡಿ ಬರುವ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (Department of School Education and Literacy -NIOS) ಭಾರತದ ಸರ್ಕಾರದ ಈ ಯೋಜನೆಯನ್ನು ತುಂಬು ತೋಳಿಂದ ಸ್ವಾಗತಿಸುತ್ತಾ ಯುವ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರನ್ನು ಸಶಸ್ತ್ರ ಪಡೆಗಳಿಗೆ ಸೇರಿಸಲು ಕಟಿಬದ್ಧತೆ ತೋರಿದೆ. ಇದರೊಂದಿಗೆ ನಾಗರಿಕ ಸಮಾಜದಲ್ಲಿ ಸೇನಾ ಸಂಯಮ ಮತ್ತು ಶಿಸ್ತುಬದ್ಧ ಯುವಪಡೆಯನ್ನು ಸಜ್ಜುಗೊಳಿಸಲು ಉತ್ಸಾಹಭರಿತವಾಗಿದೆ.

ಭಾರತ ಸರ್ಕಾರದ ಈ ಕ್ರಮಕ್ಕೆ ಬೆಂಬಲ ಸೂಚಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ತನ್ನ ಸ್ವಾಯತ್ತ ಸಂಸ್ಥೆಯಾದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ (National Institute of Open Schooling) ಮೂಲಕ 10 ನೇ ತರಗತಿಯಲ್ಲಿ ಉತ್ತೀರ್ಣರಾದ ಅಗ್ನಿವೀರರಿಗೆ ತಮ್ಮ ಶಿಕ್ಷಣ ಮುಂದುವರಿಸುವುದಕ್ಕೆ ಅನುವು ಮಾಡಿಕೊಡಲು ರಕ್ಷಣಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ವಿಶೇಷ ಕಾರ್ಯಕ್ರಮವನ್ನು ರೂಪಿಸುತ್ತಿದೆ. ಕಸ್ಟಮೈಸ್ ಮಾಡಿದ ಕೋರ್ಸ್‌ಗಳನ್ನು ಅಭಿವೃದ್ಧಿಪಡಿಸುವ ಮೂಲಕ 12 ನೇ ತರಗತಿಯ ವ್ಯಾಸಂಗಕ್ಕೂ ಸಜ್ಜುಗೊಳಿಸುತ್ತಿದೆ. ಈ ಉದ್ದೇಶಕ್ಕೆಂದೇ ಸೂಕ್ತ ಪ್ರಮಾಣ ಪತ್ರ ವಿತರಿಸಲು ತಯಾರಿ ನಡೆಸಿದೆ.

ಇದನ್ನೂ ಓದಿ: Agnipath Scheme: ಅಗ್ನಿಪಥ್​ ಯೋಜನೆ ಕುರಿತ ವದಂತಿಗಳೇನು; ಸರ್ಕಾರ ನೀಡಿದ ಸ್ಪಷ್ಟನೆಯೇನು?

ಈ ಶಿಕ್ಷಣ ಮತ್ತು ಪ್ರಮಾಣ ಪತ್ರದೊಂದಿಗೆ ಈ ವಿದ್ಯಾರ್ಥಿಗಳು (ಅಗ್ನಿವೀರ್‌ಗಳು) ಇಡೀ ದೇಶದಲ್ಲಿ ಎಲ್ಲಿಯೇ ಆದರೂ ಉದ್ಯೋಗ ಅಥವಾ ಉನ್ನತ ಶಿಕ್ಷಣ ಉದ್ದೇಶಗಳಿಗಾಗಿ ಮುಂದವರಿಯಬಹುದು. ಇದು ಅಗ್ನಿವೀರ್‌ಗಳಿಗೆ ಸಾಕಷ್ಟು ಶೈಕ್ಷಣಿಕ ಅರ್ಹತೆ ಮತ್ತು ನಂತರದ ಜೀವನದಲ್ಲಿ ಸಮಾಜದಲ್ಲಿ ಉತ್ಪಾದಕ ಪಾತ್ರವನ್ನು ವಹಿಸಲು ಪ್ರಯೋಜನವಾಗುತ್ತದೆ.

NIOS ನ ಈ ವಿಶೇಷ ಕಾರ್ಯಕ್ರಮವು ದಾಖಲಾತಿ, ಕೋರ್ಸ್‌ಗಳ ಅಭಿವೃದ್ಧಿ, ವಿದ್ಯಾರ್ಥಿ ಬೆಂಬಲ, ಸ್ವಯಂ ಕಲಿಕಾ ಸಾಮಗ್ರಿಗಳನ್ನು ಒದಗಿಸುವುದು, ಅಧ್ಯಯನ ಕೇಂದ್ರಗಳ ಮಾನ್ಯತೆ, ವೈಯಕ್ತಿಕ ಸಂಪರ್ಕ ಕಾರ್ಯಕ್ರಮ, ಮೌಲ್ಯಮಾಪನ ಮತ್ತು ಪ್ರಮಾಣೀಕರಣವನ್ನು ಸುಗಮಗೊಳಿಸುತ್ತದೆ. NIOS ನ ಮುಕ್ತ ಶಾಲಾ ವ್ಯವಸ್ಥೆಯು ಅತ್ಯಂತ ಬಳಕೆದಾರ ಸ್ನೇಹಿಯಾಗಿದೆ ಮತ್ತು ಯಾವುದೇ ಸಂಸ್ಥೆ/ ಭಾಗದಿಂದಲಾದರೂ ಯಾರು ಭೇಕಾದರೂ ಪ್ರವೇಶ ಪಡೆಯಬಹುದಾಗಿದೆ. ಯಾವುದೇ ಸಮಯದಲ್ಲಿ ಅಗ್ನಿಪಥ್ ಯೋಜನೆಯಡಿ ಎಲ್ಲಾ ಅಗ್ನಿವೀರ್‌ಗಳಿಗೆ NIOS ನ ಈ ವಿಶೇಷ ಕಾರ್ಯಕ್ರಮವು ತನ್ನ ಬಾಗಿಲುಗಳನ್ನು ತೆರೆದಿರುತ್ತದೆ.

Also Read:

Agnipath Scheme: ಅಗ್ನಿಪಥ್ ಯೋಜನೆಗೆ ವಿರೋಧವೇಕೆ? ದೇಶಾದ್ಯಂತ ಪ್ರತಿಭಟನೆ ನಡೆಸಲು ಕಾರಣವೇನು?

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:25 pm, Thu, 16 June 22