DRDO DGRE Jobs 2022: DRDO DGRE ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Mar 19, 2022 | 7:14 PM

DRDO DGRE Jobs 2022: JRF ಮತ್ತು ಸಂಶೋಧನಾ ಸಹಾಯಕ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಾಗಿ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಕಳುಹಿಸಬೇಕಾಗುತ್ತದೆ.

DRDO DGRE Jobs 2022: DRDO DGRE ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
DRDO DGRE Jobs 2022
Follow us on

DRDO DGRE Jobs 2022: ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಆರ್ಗನೈಸೇಶನ್ ಅಡಿಯಲ್ಲಿ ಡಿಫೆನ್ಸ್ ಜಿಯೋ-ಇನ್‌ಫರ್ಮ್ಯಾಟಿಕ್ಸ್ ರಿಸರ್ಚ್ ಎಸ್ಟಾಬ್ಲಿಷ್‌ಮೆಂಟ್ (DGRE), DRDO ಜೂನಿಯರ್ ರಿಸರ್ಚ್ ಫೆಲೋಶಿಪ್, JRF ಮತ್ತು ರಿಸರ್ಚ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. JRF ಮತ್ತು ಸಂಶೋಧನಾ ಸಹಾಯಕ ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ನೇಮಕಾತಿ ನಡೆಯಲಿದೆ. ಈ ನೇಮಕಾತಿಗಾಗಿ ಅರ್ಜಿಯನ್ನು ಆಫ್‌ಲೈನ್‌ನಲ್ಲಿ ಕಳುಹಿಸಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿ ನಮೂನೆಗಳನ್ನು ಅಂಕಪಟ್ಟಿ/ಪ್ರಮಾಣಪತ್ರಗಳ ಸ್ವಯಂ ದೃಢೀಕರಿಸಿದ ನಕಲು ಪ್ರತಿಗಳು, ಅನುಭವ ಪ್ರಮಾಣ ಪತ್ರಗಳನ್ನು ನೋಂದಾಯಿತ ಅಂಚೆ ಅಥವಾ ಸ್ಪೀಡ್ ಪೋಸ್ಟ್ ಮೂಲಕ ನಿಗದಿತ ವಿಳಾಸಕ್ಕೆ ಕಳುಹಿಸಬೇಕು ಎಂದು ಸೂಚನೆಯಲ್ಲಿ ತಿಳಿಸಲಾಗಿದೆ.

DRDO DGRE Jobs 2022: ಹುದ್ದೆಯ ವಿವರಗಳು:
ಸಂಶೋಧನಾ ಸಹಾಯಕ – 1 ಹುದ್ದೆ
ಜೂನಿಯರ್ ರಿಸರ್ಚ್ ಫೆಲೋಶಿಪ್ – 4 ಹುದ್ದೆಗಳು

DRDO DGRE Jobs 2022: ಶೈಕ್ಷಣಿಕ ಅರ್ಹತೆ:
1. ರಿಸರ್ಚ್ ಅಸಿಸ್ಟೆಂಟ್ -ಜಿಯಾಲಜಿ/ಜಿಯೋ-ಇನ್ಫರ್ಮ್ಯಾಟಿಕ್ಸ್/ರಿಮೋಟ್ ಸೆನ್ಸಿಂಗ್ ಅಥವಾ ಅದರ ಸಮಾನ ಪದವಿ. ಅಥವಾ ME/MTech ನಂತರ ಮೂರು ವರ್ಷಗಳ ಸಂಶೋಧನೆ, ಬೋಧನೆ ಅಥವಾ ವಿನ್ಯಾಸ ಮತ್ತು ಕೆಲಸದ ಅನುಭವ ಮತ್ತು ಸೈನ್ಸ್ ಸಿಟೇಶನ್ ಇಂಡೆಕ್ಸ್ಡ್ ಜರ್ನಲ್‌ನಲ್ಲಿ ಪ್ರಕಟವಾದ ಕನಿಷ್ಠ ಎರಡು ಸಂಶೋಧನಾ ಪ್ರಬಂಧಗಳನ್ನು ಹೊಂದಿರಬೇಕು.

2. JRF- ರಿಮೋಟ್ ಸೆನ್ಸಿಂಗ್/ಜಿಯೋ ಇನ್ಫರ್ಮ್ಯಾಟಿಕ್ಸ್‌ನಲ್ಲಿ ಪ್ರಥಮ ವಿಭಾಗದೊಂದಿಗೆ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಯುಜಿಸಿ ನೆಟ್ ಅಥವಾ ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ರಿಮೋಟ್ ಸೆನ್ಸಿಂಗ್/ಜಿಯೋ ಇನ್ಫರ್ಮ್ಯಾಟಿಕ್ಸ್ ಮತ್ತು ಪ್ರಥಮ ವಿಭಾಗದ M.Tech/ME ನಲ್ಲಿ ಪದವಿ ಪಡೆದಿರಬೇಕು.

3. JRF- BE/B.Tech in Computer Science/Computer Engineering with First Division and NET/GATE ಪಾಸಾಗಿರಬೇಕು. ಅಥವಾ ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿ ಮತ್ತು ME/MTech ಪ್ರಥಮ ವಿಭಾಗದಲ್ಲಿ ಅಥವಾ ಎಂಎಸ್ಸಿ ಕಂಪ್ಯೂಟರ್ ಸೈನ್ಸ್ ಪ್ರಥಮ ವಿಭಾಗ ಮತ್ತು ನೆಟ್/ಗೇಟ್ ತೇರ್ಗಡೆಯಾಗಿರಬೇಕು.

DRDO DGRE Jobs 2022: ವಯೋಮಿತಿ
JRF ಗೆ ಗರಿಷ್ಠ ವಯಸ್ಸಿನ ಮಿತಿ 28 ವರ್ಷಗಳು. ಆದಾಗ್ಯೂ, ಮೀಸಲಾತಿ ವರ್ಗದ ಅಭ್ಯರ್ಥಿಗಳು ನಿಯಮಗಳ ಪ್ರಕಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ.

DRDO DGRE Jobs 2022 ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ.

ಇದನ್ನೂ ಓದಿ: IPL 2022 All Team Jerseys: ಹೇಗಿದೆ ನೋಡಿ 10 ತಂಡಗಳ ಹೊಸ ಜೆರ್ಸಿ

(DRDO DGRE Jobs 2022 – Apply Online JRF Vacancies)