DRDO RAC Recruitment 2022: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ವಿವಿಧ ವಿಭಾಗಗಳಲ್ಲಿ ವಿಜ್ಞಾನಿ ‘ಬಿ’ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.. DRDO ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ (ADA) ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST) ಈ ನೇಮಕಾತಿ ಮಾಡುತ್ತಿದೆ. ಅಧಿಸೂಚನೆಯ ಪ್ರಕಾರ, DRDO ನಲ್ಲಿ ಒಟ್ಟು 630 ಖಾಲಿ ಹುದ್ದೆಗಳಿವೆ. ಈ ನೇಮಕಾತಿಗಾಗಿ ಅರ್ಜಿ ಸಲ್ಲಿಸಲು ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು DRDO ವೆಬ್‌ಸೈಟ್ rac.gov.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.
ಹುದ್ದೆಯ ವಿವರಗಳು:
ಶೈಕ್ಷಣಿಕ ಅರ್ಹತೆ:
ಅಭ್ಯರ್ಥಿಗಳು ಇಂಜಿನಿಯರಿಂಗ್ ಸಂಬಂಧಿತ ವಿಷಯದಲ್ಲಿ ಪ್ರಥಮ ದರ್ಜೆ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು. ಅಲ್ಲದೆ, ನೀವು ಸಂಬಂಧಿತ ವಿಷಯದಲ್ಲಿ ಗೇಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಹಾಗೆಯೇ ಐಐಟಿ ಅಥವಾ ಎನ್‌ಐಟಿಯಿಂದ ಪದವಿ ಪಡೆದಿದ್ದರೆ, ಒಟ್ಟು ಅಂಕಗಳು ಕನಿಷ್ಠ ಶೇಕಡಾ 80 ಆಗಿರಬೇಕು.
ಗರಿಷ್ಠ ವಯೋಮಿತಿ:
DRDO:
DST:
ಎಡಿಎ:
ಆಯ್ಕೆ ಪ್ರಕ್ರಿಯೆ:
– ಗೇಟ್ ಸ್ಕೋರ್ ಮತ್ತು/ಅಥವಾ ಲಿಖಿತ ಪರೀಕ್ಷೆ
– ವೈಯಕ್ತಿಕ ಸಂದರ್ಶನದ ಮೂಲಕ ಆಯ್ಕೆ ನಡೆಯಲಿದೆ.
ಲಿಖಿತ ಪರೀಕ್ಷೆ ಮತ್ತು ವೈಯಕ್ತಿಕ ಸಂದರ್ಶನದ ಅಂಕಗಳ ಆಧಾರದ ಮೇಲೆ ಡಿಆರ್‌ಡಿಒ ಶಿಸ್ತುವಾರು ಮತ್ತು ವರ್ಗವಾರು ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಇದರಲ್ಲಿ ಲಿಖಿತ ಪರೀಕ್ಷೆಗೆ ಶೇಕಡಾ 80 ಮತ್ತು ವೈಯಕ್ತಿಕ ಸಂದರ್ಶನಕ್ಕೆ ಶೇಕಡಾ 20 ರಷ್ಟು ಮಾರ್ಕ್ಸ್ ನೀಡಲಾಗುತ್ತದೆ.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
Published On - 5:56 pm, Tue, 28 June 22