India Post Recruitment 2022: PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿದೆ ಉದ್ಯೋಗಾವಕಾಶ: ವೇತನ 81 ಸಾವಿರ ರೂ.
India Post Recruitment 2022: ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsortsrecritment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
India Post Recruitment 2022: ಭಾರತೀಯ ಅಂಚೆ ಇಲಾಖೆಯು ಪೋಸ್ಟಲ್ ಅಸಿಸ್ಟೆಂಟ್, ಸಾರ್ಟಿಂಗ್ ಅಸಿಸ್ಟೆಂಟ್, ಸೇವಿಂಗ್ ಬ್ಯಾಂಕ್ ಕಂಟ್ರೋಲ್ ಆರ್ಗನೈಸೇಶನ್ ಐಪಿಎ, ಪೋಸ್ಟ್‌ಮ್ಯಾನ್ ಮತ್ತು ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯ ಮೂಲಕ ರೈಲ್ವೇ ಮೇಲ್ ಸೇವೆ, ಪೋಸ್ಟಲ್ ಸ್ಟೋರ್ಸ್ ಡಿಪೋ ಮತ್ತು ಅಸ್ಸಾಂ ಪೋಸ್ಟಲ್ ಸರ್ಕಲ್‌ನ ಅಂಚೆ ಕಛೇರಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ dopsortsrecritment.in ಗೆ ಭೇಟಿ ನೀಡುವ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.
ಶೈಕ್ಷಣಿಕ ಅರ್ಹತೆ: ಪೋಸ್ಟಲ್ ಅಸಿಸ್ಟೆಂಟ್ ಮತ್ತು ಸಾರ್ಟಿಂಗ್ ಅಸಿಸ್ಟೆಂಟ್- ಈ ಹುದ್ದೆಗಳಿಗೆ 12ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಹಾಗೆಯೇ ಅರ್ಜಿದಾರನು ಬೇಸಿಕ್ ಕಂಪ್ಯೂಟರ್ ಕೋರ್ಸ್ ಮಾಡಿರಬೇಕು. ಪೋಸ್ಟ್‌ಮ್ಯಾನ್ – 12 ನೇ ತರಗತಿಯಲ್ಲಿ ಪಾಸಾಗಿರಬೇಕು. ಜೊತೆಗೆ ಸ್ಥಳೀಯ ಭಾಷೆಯ ಜ್ಞಾನ ಹೊಂದಿರಬೇಕು. ಎಂಟಿಎಸ್- 10ನೇ ತರಗತಿಯಲ್ಲಿ ಪಾಸಾಗಿರಬೇಕು. ಹಾಗೆಯೇ ಸ್ಥಳೀಯ ಭಾಷೆ ಗೊತ್ತಿರಬೇಕು.
ವೇತನ: ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್- 25 ಸಾವಿರದಿಂದ 81 ಸಾವಿರ ರೂ. ಪೋಸ್ಟ್ ಮ್ಯಾನ್- 21 ಸಾವಿರದಿಂದ 69 ಸಾವಿರ ರೂ. MTS- 18 ಸಾವಿರದಿಂದ 56 ಸಾವಿರ ರೂ.
ವಯೋಮಿತಿ: ಪೋಸ್ಟಲ್ ಅಸಿಸ್ಟೆಂಟ್/ಸಾರ್ಟಿಂಗ್ ಅಸಿಸ್ಟೆಂಟ್ – 18 ರಿಂದ 27 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಪೋಸ್ಟ್‌ಮ್ಯಾನ್ – 18 ರಿಂದ 27 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. MTS – 18 ರಿಂದ 25 ವರ್ಷಗಳ ಒಳಗಿನ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಶುಲ್ಕ: ಈ ಹುದ್ದೆಗಳಿಗೆ ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕಾಗುತ್ತದೆ.
ಪ್ರಮುಖ ದಿನಾಂಕ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ- ಜುಲೈ 27, 2022
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 5:24 pm, Wed, 29 June 22