Exim Bank Recruitment: ಎಕ್ಸಿಮ್ ಬ್ಯಾಂಕ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

| Updated By: ಝಾಹಿರ್ ಯೂಸುಫ್

Updated on: Apr 20, 2022 | 8:48 PM

Exim Bank recruitment 2022: ಅಭ್ಯರ್ಥಿಗಳನ್ನು ಅವರ ಕೆಲಸದ ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅಂತಿಮ ಆಯ್ಕೆಯನ್ನು ನಂತರ ವೈಯಕ್ತಿಕ ಸಂದರ್ಶನದ ಮೂಲಕ ಮಾಡಲಾಗುತ್ತದೆ.

Exim Bank Recruitment: ಎಕ್ಸಿಮ್ ಬ್ಯಾಂಕ್​ನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
Exim Bank Recruitment
Follow us on

Exim Bank Recruitment: ಎಕ್ಸ್​ಪೋರ್ಟ್​-ಇಂಪೋರ್ಟ್​ ಬ್ಯಾಂಕ್ ಆಫ್ ಇಂಡಿಯಾ (ಎಕ್ಸಿಮ್ ಬ್ಯಾಂಕ್) ಹಲವಾರು ಹುದ್ದೆಗಳಿಗೆ ನೇಮಾಕತಿ ಪ್ರಕಟಣೆ ಹೊರಡಿಸಿದೆ. ಈ ನೇಮಕಾತಿ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದೆ. ಈ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ಮಾಡಲಾಗುತ್ತಿದ್ದು, ಯಾವ ವಿಭಾಗಗಳಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ.? ಅರ್ಜಿ ಸಲ್ಲಿಸುವುದು ಹೇಗೆ? ಸಂಪೂರ್ಣ ವಿವರಗಳು ಈ ಕೆಳಗಿನಂತಿವೆ…

* ಅಧಿಸೂಚನೆಯ ಪ್ರಕಾರ ಒಟ್ಟು 30 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

* ಇವುಗಳಲ್ಲಿ ಕಾಂಪ್ಲಿಯನ್ಸ್ (01), ಕಾನೂನು (04), ಅಧಿಕೃತ ಭಾಷೆ (02), ಮಾಹಿತಿ ತಂತ್ರಜ್ಞಾನ (05), ಮಾನವ ಸಂಪನ್ಮೂಲ (02), ಸಂಶೋಧನೆ ಮತ್ತು ವಿಶ್ಲೇಷಣೆ (02), ಲೋನ್ ಮಾನಿಟರಿಂಗ್ (02), ಇಂಟರ್ನಲ್ ಆಡಿಟ್ (01) , ಆಡಿಟ್ (02), ಆಡಳಿತ (01), ನಿರ್ವಹಣೆ (02), ಎಸ್​ಎಸ್​ಜಿ (06) ಹುದ್ದೆಗಳು ಖಾಲಿ ಇವೆ.

* ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಹುದ್ದೆಗಳ ಆಧಾರದ ಮೇಲೆ ಪದವಿ/ ಬಿಇ, ಬಿಟೆಕ್, ಎಂಬಿಎ/ಪಿಜಿಡಿಬಿಎ, ಸಿಎ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ಕೆಲಸದಲ್ಲಿ ಅನುಭವ, ತಾಂತ್ರಿಕ ಜ್ಞಾನದ ಅಗತ್ಯವಿದೆ.

* ಹುದ್ದೆಗಳಿಗೆ ಅನುಗುಣವಾಗಿ ಅಭ್ಯರ್ಥಿಗಳ ವಯಸ್ಸು 35 ರಿಂದ 62 ವರ್ಷಗಳ ನಡುವೆ ಇರಬೇಕು.

ಪ್ರಮುಖ ವಿಷಯಗಳು..

* ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.

* ಅಭ್ಯರ್ಥಿಗಳನ್ನು ಅವರ ಕೆಲಸದ ಅನುಭವದ ಆಧಾರದ ಮೇಲೆ ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ಅಂತಿಮ ಆಯ್ಕೆಯನ್ನು ನಂತರ ವೈಯಕ್ತಿಕ ಸಂದರ್ಶನದ ಮೂಲಕ ಮಾಡಲಾಗುತ್ತದೆ.

* ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ 28-04-2022.

* ಈ ನೇಮಕಾತಿ ಕುರಿತಾದ ಸಂಪೂರ್ಣ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

 

ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್

ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ