Punjab National Bank Recruitment 2022: ಪಂಜಾಬ್ ನ್ಯಾಷನಲ್ ಬ್ಯಾಂಕ್ ಸ್ಪೆಷಲಿಸ್ಟ್ ಆಫೀಸರ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗಳಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅಧಿಸೂಚನೆಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳು ಈ ಕೆಳಗಿನಂತಿವೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ನೇಮಕಾತಿ ವಿವರಗಳು:
ಖಾಲಿ ಹುದ್ದೆಗಳ ಸಂಖ್ಯೆ: 145
ಹುದ್ದೆಯ ಹೆಸರು: ಸ್ಪೆಷಲಿಸ್ಟ್-ಆಫೀಸರ್
ಹುದ್ದೆಯ ವಿವರ :
ಮ್ಯಾನೇಜರ್: 40 ಹುದ್ದೆಗಳು
ಮ್ಯಾನೇಜರ್ (ಕ್ರೆಡಿಟ್): 100 ಹುದ್ದೆಗಳು
ಹಿರಿಯ ವ್ಯವಸ್ಥಾಪಕ: 5 ಹುದ್ದೆಗಳು
ವಯೋಮಿತಿ: ಅಭ್ಯರ್ಥಿಗಳು 25 ರಿಂದ 37 ವರ್ಷ ವಯಸ್ಸಿನವರಾಗಿರಬೇಕು.
ವಿದ್ಯಾರ್ಹತೆಗಳು: ಹುದ್ದೆಗೆ ಅನುಗುಣವಾಗಿ ಕನಿಷ್ಠ 60% ಅಂಕಗಳೊಂದಿಗೆ ಪದವಿಯೊಂದಿಗೆ CA / CMA ಅಥವಾ MBA (ಫೈನಾನ್ಸ್) / ಸಮಾನವಾದ PG ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಸಂಬಂಧಿತ ಕೆಲಸದಲ್ಲಿ ಅನುಭವವನ್ನೂ ಹೊಂದಿರಬೇಕು.
ಆಯ್ಕೆ ವಿಧಾನ: ಅಭ್ಯರ್ಥಿಗಳನ್ನು ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ.
ಲಿಖಿತ ಪರೀಕ್ಷೆಯ ವಿಧಾನ: ಈ ಪರೀಕ್ಷೆಯಲ್ಲಿ 220 ಅಂಕಗಳಿಗೆ ಎರಡು ಗಂಟೆಗಳಲ್ಲಿ ಉತ್ತರಿಸಬೇಕು. ಮುಂದೆ ವೈಯಕ್ತಿಕ ಸಂದರ್ಶನವು 25 ಅಂಕಗಳಿಗೆ ಇರಲಿದೆ.
ಅರ್ಜಿ ಸಲ್ಲಿಸುವ ವಿಧಾನ: ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ: ರೂ. 850
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 7, 2022.
ಆನ್‌ಲೈನ್ ಪರೀಕ್ಷಾ ದಿನಾಂಕ: ಜೂನ್ 12, 2022.
ಈ ನೇಮಕಾತಿ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ .
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ