Govt Jobs 2022 : ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬರುವ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್, ಪ್ರಾಜೆಕ್ಟ್ ಆಫೀಸರ್ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತರು ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್ ವೆಬ್‌ಸೈಟ್ www.hslvizag.in ಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅಂದಹಾಗೆ ಹಿಂದೂಸ್ತಾನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ನಿಗದಿತ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ಮಾಡಲಾಗುತ್ತಿದೆ. ನೇಮಕಾತಿ ಜಾಹೀರಾತಿನ ಪ್ರಕಾರ, ಆನ್‌ಲೈನ್ ಅರ್ಜಿಯ ಪ್ರತಿಯನ್ನು ಸಹ ನಿಗದಿತ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಳು ಈ ಕೆಳಗಿನಂತಿವೆ.
ಹುದ್ದೆಗಳ ವಿವರಗಳು:
ಪ್ರಾಜೆಕ್ಟ್ ಆಫೀಸರ್ ಟೆಕ್ನಿಕಲ್ – 4 ಹುದ್ದೆಗಳು
ಪ್ರೊಜೆಕ್ಟ್ ಆಫೀಸರ್ ಎಚ್‌ಆರ್ – 1 ಹುದ್ದೆ
ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಪ್ಲಾಂಟ್ ಮೆಂಟೆನೆನ್ಸ್ – 2 ಹುದ್ದೆಗಳು
ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಸಿವಿಲ್ – 2 ಹುದ್ದೆಗಳು
ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಟೆಕ್ನಿಕಲ್ – 10 ಹುದ್ದೆಗಳು
ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಐಟಿ ಮತ್ತು ಇಆರ್‌ಪಿ – 2 ಹುದ್ದೆಗಳು
ಡೆಪ್ಯೂಟಿ ಪ್ರಾಜೆಕ್ಟ್ ಆಫೀಸರ್ ಎಚ್‌ಆರ್ – 2 ಹುದ್ದೆಗಳು
ಹಿರಿಯ ಸಲಹೆಗಾರ – ತಾಂತ್ರಿಕ – ದೆಹಲಿ ಕಚೇರಿ – 1 ಹುದ್ದೆ
ಹಿರಿಯ ಸಲಹೆಗಾರ EKM ಜಲಾಂತರ್ಗಾಮಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಮತ್ತು ಹೊರಗುತ್ತಿಗೆ – 1 ಹುದ್ದೆ
ಕನ್ಸಲ್ಟೆಂಟ್ ಅಡ್ಮಿನಿಸ್ಟ್ರೇಷನ್ ದೆಹಲಿ ಕಚೇರಿ – 1 ಹುದ್ದೆ
ವೇತನ:
ಯೋಜನಾ ಅಧಿಕಾರಿ – ತಿಂಗಳಿಗೆ ರೂ. 65,000/-
ಉಪ ಯೋಜನಾಧಿಕಾರಿ- ರೂ.52000/-
ಹಿರಿಯ ಸಲಹೆಗಾರ- ರೂ.1 ಲಕ್ಷ
ಸಲಹೆಗಾರ- ರೂ.80 ಸಾವಿರ
ವಯೋಮಿತಿ:
ಪ್ರಾಜೆಕ್ಟ್ ಆಫೀಸರ್- 40 ವರ್ಷಗಳು
ಉಪ ಪ್ರಾಜೆಕ್ಟ್ ಆಫೀಸರ್- 35 ವರ್ಷಗಳು
ಹಿರಿಯ ಸಲಹೆಗಾರ- 62 ವರ್ಷಗಳು
ಸಲಹೆಗಾರ- 62 ವರ್ಷಗಳು
ಶೈಕ್ಷಣಿಕ ಅರ್ಹತೆ:
ಪ್ರಾಜೆಕ್ಟ್ ಆಫೀಸರ್ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಸಂಬಂಧಿತ ಕೆಲಸದಲ್ಲಿ ಕನಿಷ್ಠ ಐದು ವರ್ಷಗಳ ಅನುಭವ ಹೊಂದಿರಬೇಕು.
ಉಪ ಯೋಜನಾ ಅಧಿಕಾರಿ – ಕನಿಷ್ಠ 60% ಅಂಕಗಳೊಂದಿಗೆ ಯಾವುದೇ ವಿಭಾಗದಲ್ಲಿ ಪದವಿ ಮತ್ತು ಸಂಬಂಧಿತ ಕೆಲಸದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರಬೇಕು.
ಹಿರಿಯ ಸಲಹೆಗಾರರು – ಕನಿಷ್ಠ 60% ಅಂಕಗಳೊಂದಿಗೆ ಮೆಕ್ಯಾನಿಕಲ್ / ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಹೊಂದಿರಬೇಕು. ಜೊತೆಗೆ ಅಭ್ಯರ್ಥಿಗಳು ಕನಿಷ್ಠ 20 ವರ್ಷಗಳ ಅನುಭವವನ್ನು ಹೊಂದಿರಬೇಕು.
ಸಲಹೆಗಾರ – ಯಾವುದೇ ವಿಭಾಗದಲ್ಲಿ ಪದವೀಧರ. ಅಲ್ಲದೆ ಕನಿಷ್ಠ 12 ವರ್ಷಗಳ ಅನುಭವ ಹೊಂದಿರಬೇಕು.
ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಐಪಿಎಲ್ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?